ವಿವಿಧ ಬೇಡಿಕೆಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನೇತೃತ್ವದಲ್ಲಿ ದಿಟ್ಟ ಹೋರಾಟ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ, ಸಂಸ್ಕೃತ ಭಾರತಿ, ದೇಶೀಯ ಭಾಷೆಗಳ ಹಿತರಕ್ಷಣಾ ಒಕ್ಕೂಟ, ಈ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ಶೈಕ್ಷಣಿಕ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ದಿನಾಂಕ ೦೯-೧೨-೨೦೨೫ ರಂದು ಸುವರ್ಣಸೌಧ ಬೆಳಗಾವಿಯಲ್ಲಿ ಒಂದು ದಿವಸದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಪ್ರಮುಖ ಬೇಡಿಕೆಗಳಾದ ೧. ಸರಕಾರ ದ್ವಿಭಾಷಾ ನೀತಿಯನ್ನು ಜಾರಿಮಾಡುವುದನ್ನು ಬಿಟ್ಟು- ತ್ರಿಭಾಷಾ ಸೂತ್ರ ಮುಂದುವರೆಸುವುದು. ೨. ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಹಳೆ ಪಿಂಚಣಿ (ಔPS) ಜಾರಿಗೆ ತರುವುದು. ೩. ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ನೌಕರರಿಗೂ ವಿಸ್ತರಿಸುವ ಬಗ್ಗೆ. ೪. ಪ್ರೌಢಶಾಲಾ ಶಿಕ್ಷಕರಿಗೆ ಪಿ.ಯು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ. ೫. ೧೯೯೫ ರ ನಂತರ ಪ್ರಾರಂಭವಾಗಿರುವ ಖಾಸಗಿ ಶಾಲಾ ಕಾಲೇಜುಗಳನ್ನು ಸಹಾಯಾನುದಾನಕ್ಕೆ ಒಳಪಡಿಸುವ ಬಗ್ಗೆ. ೬. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ, ಪಿಯುಸಿ ಶಿಕ್ಷಣ ವ್ಯವಸ್ಥೆ ಉಳಿವಿಗಾಗಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣ ಸರಳೀಕರಣಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಯಿತು.

ಈ ಪ್ರತಿಭಟನೆಯನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ, ಶಶೀಲ್ ನಮೋಶಿ, ವಿದ್ಯಾಭಾರತಿ ಪ್ರಾಂತ ಅಧ್ಯಕ್ಷರಾದ ಪರಮೇಶ್ವರ ಹೆಗಡೆ, ಕನಕದಾಸ ಶಿಕ್ಷಣ ಸಂಸ್ಥೆಯ ಛೇರ್ಮನ್‌ರಾದ ರವೀಂದ್ರನಾಥ್ ಬಿ ದಂಡಿನ, ಹೋರಾಟಗಾರರಾದ ಸುಭಾಷ್‌ಸಿಂಗ್ ಜಮಾದಾರ, ಸುಧೀಂದ್ರ ದೇಶಪಾಂಡೆ, ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷರಾದ ಸಂದೀಪ ಬೂದಿಹಾಳ, ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಂಜುನಾಥ್, ಖಜಾಂಚಿಗಳಾದ ಮಾಲತೇಶ್, ಉಪಾಧ್ಯಕ್ಷರಾದ ರಾಮಕೃಷ್ಣ, ಪ್ರಮುಖರಾದ ಡಿ.ಎಂ.ರಾಥೋಡ್, ಂಃಖSಒ ರಾಜ್ಯ ಸಂಯೋಜಕರಾದ ಡಾ ಶಿವಪೂಜಿ ಕೋಟಿ, ಸಂಸ್ಕೃತ ಭಾರತಿ ಸಂಘಟನೆಯ ಭಾಗ್ಯಲಕ್ಷ್ಮಿ, ಪ್ರಸಾದ್, ಅನುದಾನರಹಿತ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್ ಕೆ ಆದಪ್ಪನವರ, ಶಾಂತಣ್ಣ ಕಡಿವಾಳ, ವಿ.ಜಿ.ಪಾಟೀಲ್, ಮಾಧ್ಯಮಿಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಚಿದಾನಂದ ಪಾಟೀಲ್, ಗಂಗಾಧರಾಚಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣ ಭಟ್, ಡಿ ಕೆ ಮಮತಾ, ಜೆ ಎಂ ಜೋಶಿ, ಶಿರೀಷ್ ಕುಲಕರ್ಣಿ, ಅವಿನಾಶ ಹಿರೇಮಠ, ಶ್ರೀಧರ ಪಾಟೀಲ ಕುಲಕರ್ಣಿ, ಗುರುರಾಜ ಕುಲಕರ್ಣಿ, ಬಸವರಾಜ ದೇವರಮನಿ, ಆರ್.ಜಿ ಸನ್ನಿ, ರವೀಂದ್ರ ತುಂಗಳ, ಮಲ್ಲಿಕಾರ್ಜುನ ಕೂಡಗಿ ಮತ್ತು ಬಿ.ಆರ್ ಹರಿದಾಸ್ ಇನ್ನಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಮಂತ್ರಿಗಳಾದ ಶ್ರೀ ಚೆಲುವರಾಯ ಸ್ವಾಮಿಯವರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿರುವ ನಮ್ಮ ಮನವಿ ಪತ್ರವನ್ನು ಸ್ವೀಕರಿಸಿ ಶಿಕ್ಷಣ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಶ್ರೀ ಕೃಷ್ಣಾಜಿ ಕರಿಚನ್ನಣ್ಣನವರ್, ನಿರ್ದೇಶಕರು, ಪ್ರೌಢಶಿಕ್ಷಣ, ಆಯುಕ್ತರ ಕಛೇರಿ ಬೆಂಗಳೂರು ಇವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿದರು ಹಾಗೂ ಶ್ರೀ ಭೀಮನಗೌಡ (ರಾಜುಗೌಡ) ಪಾಟೀಲ್ ಮಾನ್ಯ ಶಾಸಕರು, ಇವರೂ ಸಹ ಪ್ರತಿಭಟನೆ ನಡೆದ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ನೂರಾರು ಶಿಕ್ಷಕರು ಭಾಗವಹಿಸಿ ಎಲ್ಲಾ ಬೇಡಿಕೆಗಳನ್ನು ಬಗೆಹರಿಸಬೇಕೆಂದು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿದರು. ಈ ಹೋರಾಟವು ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.

Highslide for Wordpress Plugin