ಮಾಧ್ಯಮಿಕ ಶಿಕ್ಷಕ ಸಂಘದ ಆಳಂದ ತಾಲೂಕ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ಕನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಲಬುರ್ಗಿ, ದಿಗಂಬರ ಜೈನ ಪಾಠ ಶಾಲೆ ಆಳಂದದಲ್ಲಿ ಜಿಲ್ಲಾ ಅಧ್ಯಕ್ಷ ಶ್ರೀ ಚಂದ್ರಶೇಖರ ಎಸ್. ಪಾಟೀಲ ಹಾಗೂ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಅಮೃತ ಮಾಲಿ ಪಾಟೀಲ ಇವರುಗಳ ಉಪಸ್ಥಿತಿಯಲ್ಲಿ ಶಿಕ್ಷಕರುಗಳು ಸಭೆ ಸೇರಿ ಕೇಂದ್ರ ಸಂಘದ ಅನುಮತಿ ಮೇರೆಗೆ ಈ ಕೆಳಕಂಡ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧ ಆಯ್ಕೆ ಮಾಡಲಾಯಿತು. ಹಾಗೂ ಸಂಘದ ನಿಯಮಗಳಿಗೆ ಬದ್ದರಾಗಿ, ಹಿರಿಯರ ಮಾರ್ಗದರ್ಶನದಲ್ಲಿ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಿ ಸಂಘಟನೆಯನ್ನು ಬಲಪಡಿಸಲು ಕೋರಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಿ. ಜಿ. ಗೋಸಾಲ ಹಾಗೂ ಖಜಾಂಚಿಗಳಾದ ಶ್ರೀ ಮಹೇಶ ದೇವಣಿ ಹಾಜರಿದ್ದರು ಎಂದು ವಿಭಾಗ ಪ್ರಮುಖ ಶ್ರೀ ಮಹೇಶ ಬಸರಕೋಡ ಹಾಗೂ ಶ್ರೀ ಐ. ಕೆ. ಪಾಟೀಲ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.

ಪದಾಧಿಕಾರಿಗಳ ಪಟ್ಟಿ : ಉಪಾಧ್ಯಕ್ಷರು : 1. ಶ್ರೀ ಕೆ. ಬಸವರಾಜ ; 2. ಶ್ರೀ ಅಪ್ಪಾಸಾಹೇಬ ಬಿರಾದಾರ ; 3. ಶ್ರೀ ಲಕ್ಷ್ಮಿಕಾಂತ ಬೀದಿ ; ಪ್ರಧಾನ ಕಾರ್ಯದರ್ಶಿ : ಶ್ರೀ ಮಡಿವಾಳಪ್ಪ ಬಿರಾದಾರ ; ಖಜಾಂಚಿ : ಶ್ರೀ ಶಿವರಾಜ ಖಂಡಾಳೆ ; ಸಂಘಟನಾ ಕಾರ್ಯದರ್ಶಿ : ಶ್ರೀ ರಾಜೇಂದ್ರ ಕೊರಬಾ ; ಸಹ ಕಾರ್ಯದರ್ಶಿ : 1. ಶ್ರೀ ವಿನೋದ ಬರ್ಮಾ ; 2. ಶ್ರೀ ಗಜಾನಂದ ಕುಂಬಾರ

ಕಾರ್ಯಕಾರಿ ಸಮಿತಿ ಸದಸ್ಯರು : ಶ್ರೀ ಗುರಯ್ಯ ಸ್ವಾಮಿ, ಶ್ರೀ ಲಿಂಗರಾಜ ಪಾಟೀಲ, ಶ್ರೀ ಸಂಜು ಪಾಟೀಲ, ಶ್ರೀ ಶರಣಬಸಪ್ಪ ವಡಗಾಂವ, ಶ್ರೀ ಸುಜೇಯಂದ್ರಕುಮಾರ, ಶ್ರೀ ಸಂಜೀವ ಕುಮಾರ ಪಾಟೀಲ, ಶ್ರೀಮತಿ ಉಮಾದೇವಿ ಬಿರಾದಾರ, ಶ್ರೀ ಮಹೇಶ ಬಸರಕೋಡ – ವಿಭಾಗ ಪ್ರಮುಖರು ಮಹಿಳಾ ಪ್ರಮುಖರು : ಶ್ರೀಮತಿ ಜ್ಯೋತಿ ಪಾಟೀಲ

ವರದಿ : ಚಂದ್ರಶೇಖರ್ ಎಸ್. ಪಾಟೀಲ್, ಅಧ್ಯಕ್ಷರು, ಕಲ್ಬುರ್ಗಿ ಘಟಕ

Highslide for Wordpress Plugin