ಪ್ರಾಂತ ನೂತನ ಕಾರ್ಯಕಾರಿಣಿ

ec-meeting-photo-1

ec-meeting-photo-2

ದಿನಾಂಕ 31-7-2016 ರಂದು ಬೆಂಗಳೂರಿನಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ 2016-2018-19 ಅವಧಿಗೆ ಪ್ರಾಂತೀಯ ಕಾರ್ಯಕಾರಿಣಿಗೆ ಆಯ್ಕೆಯಾದ ಪದಾಧಿಕಾರಿಗಳು.

ಅಧ್ಯಕ್ಷರು: ಶ್ರೀಯುತ ಶಿವಾನಂದ ಸಿಂಧನಕೇರಾ, ಮೈಸೂರು

ಪ್ರಧಾನ ಕಾರ್ಯದರ್ಶಿ : ಶ್ರೀಯುತ ಚಿದಾನಂದ ಪಾಟೀಲ, ಕನಕಪುರ

ಮಹಾ ಪೋಷಕರು: ಪ್ರೊ|| ಕೃ. ನರಹರಿ, ಮಾಜಿ ಎಂ.ಎಲ್.ಸಿ

ಪೋಷಕರು : ಶ್ರೀ ಹೆಚ್. ನಾಗಭೂಷಣ್ ರಾವ್

ಮಾರ್ಗದರ್ಶಕರು : ಪ್ರೊ|| ಕೆ. ಬಾಲಕೃಷ್ಣಭಟ್, ಮಾಜಿ ಎಂ.ಎಲ್.ಸಿ  ; ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಂ.ಎಲ್.ಸಿ  ; ಶ್ರೀ ಅರುಣ್ ಶಹಾಪೂರ ಎಂ.ಎಲ್.ಸಿ
ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ : ಶ್ರೀ ಸಂದೀಪ್ ಬೂದಿಹಾಳ, ಹುಬ್ಬಳ್ಳಿ

ರಾಜ್ಯ ಉಪಾಧ್ಯಕ್ಷರು : ಶ್ರೀ ಆರ್ ಕೊಟ್ರಪ್ಪ, ಹಗರಿಬೊಮ್ಮನಹಳ್ಳಿ -ಶ್ರೀ ಜಿ. ನಂಜುಂಡ ಸ್ವಾಮಿ, ಮೈಸೂರು ಶ್ರೀ ಬಿ.ಹೆಚ್ ವರದರಾಜು, ಕನಕಪುರ- ಶ್ರೀಮತಿ.ರೋಹಿಣಿ ದೇಶಪಾಂಡೆ, ಬೆಳಗಾವಿ

ರಾಜ್ಯ ಕಾರ್ಯದರ್ಶಿಗಳು: ಶ್ರೀ ಬಿ.ಎಂ.ಎಸ್ ವೃಷಭೇಂದ್ರಸ್ವಾಮಿ, ಚಿತ್ರದುರ್ಗ- ಕುಮಾರಿ ಜಿ.ರೇಖಾ, ನೆಲಮಂಗಲ ಶ್ರೀ ಅರವಿಂದ ದೇಸಾಯಿ, ಕೊಪ್ಪಳ – ಶ್ರೀ ಜಿ.ಕೆ ತಳವಾರ, ಬಾಗಲಕೋಟೆ

ರಾಜ್ಯ ಕಾರ್ಯಾಲಯ ಪ್ರಮುಖ್: ಶ್ರೀ ಜಿ.ಎಸ್ ಕೃಷ್ಣಮೂರ್ತಿ, ಬೆಂಗಳೂರು

ರಾಜ್ಯಕೋಶಾಧ್ಯಕ್ಷ : ಶ್ರೀ ಜೆ.ಎಂ ಜೋಶಿ, ಬೆಂಗಳೂರು

ರಾಜ್ಯ ಮಹಿಳಾ ಪ್ರಮುಖರು : ಶ್ರೀಮತಿ ಡಿ.ಕೆ ಮಮತಾ, ರಾಮನಗರ

ಆಂತರಿಕ ಲೆಕ್ಕ ಪರಿಶೋಧಕರು : ಶ್ರೀ ಎಸ್. ನಾಗರಾಜ್, ಬೆಂಗಳೂರು

ಶಿಕ್ಷಕ ಸಮಾಚಾರ ಸಹ ಸಂಪಾದಕರು: ಶ್ರೀ ಎನ್. ನಾಗರಾಜ್, ಬೆಂಗಳೂರು

ಶೈಕ್ಷಣಿಕ ಪ್ರಕೋಷ್ಠ : ಶ್ರೀ ವಿ. ರಾಜ, ಬೆಂಗಳೂರು

ಮಾಧ್ಯಮ ಪ್ರಕೋಷ್ಠ : ಶ್ರೀ ಐ.ಕೆ ಪಾಟೀಲ-ಕಲ್ಬುರ್ಗಿ, ಶ್ರೀಮತಿ ವಿಜಯಲಕ್ಷ್ಮಿ-ಕನಕಪುರ ಶ್ರೀಮತಿ ರೇಣುಕಾ, ಕನಕಪುರ

ರಾಜ್ಯ ಕಾರ್ಯಕಾರಿಣಿ ಸದಸ್ಯರು: ಶ್ರೀ ಶಾಂತಕುಮಾರ್ ಬಿರಾದಾರ್-ಬೀದರ್, ಶ್ರೀ ಶರಣು ಗೋಗೇರಿ-ಗದಗ್, ಶ್ರೀ ಬಸವರಾಜ್ ಹಳ್ಳಿ-ವಿಜಯಪುರ, ಶ್ರೀ ಸಿದ್ಧಲಿಂಗ ಸ್ವಾಮಿ-ರಾಮನಗರ,  ಶ್ರೀಮತಿ ಮಾಲಿನಿ-ಬೆಂಗಳೂರು, ಶ್ರೀ ಹೆಚ್. ಎ. ಸರ್ವೇಶ್-ನಂಜನಗೂಡು, ಶ್ರೀ ಗುಂಡಾಚಾರ್-ಬಳ್ಳಾರಿ

ವಿಭಾಗ ಪ್ರಮುಖರು : ಕಲ್ಬುರ್ಗಿ- ಶ್ರೀ ಮಹೇಶ ಬಸರಕೋಡ, ಶ್ರೀ ಗುಂಡಾಚಾರ್ ; ಬೆಳಗಾವಿ – ಶ್ರೀ ಸಂತೋಷ ಹೊನ್ನಳ್ಳಿ, ಶ್ರೀ ಮುಕುಂದ ಗೋಖಲೆ, ಶ್ರೀ ಅಶೋಕ ಚಿಮ್ಮಲ ; ಮಂಗಳೂರು – ಶ್ರೀ ಹೆಚ್.ಡಿ. ಶಿವರಾಂ ; ತುಮಕೂರು-ಶ್ರೀ ಕೃಷ್ಣಮೂರ್ತಿ ಶ್ರೇಷ್ಠಿ, ಶ್ರೀ ಪಿ.ಆರ್.ಬಸವರಾಜ್, ಶ್ರೀ.ಬಿ.ಎನ್.ಎಂ ಸ್ವಾಮಿ, ಬೆಂಗಳೂರು- ಶ್ರೀ ಗಂಗಾಧರ, ಶ್ರೀ ಸಿ. ಪುಟ್ಟಸ್ವಾಮಿ ; ಮೈಸೂರು – ಎಸ್. ನಂದೀಶ್

ವಿಶೇಷ ಆಹ್ವಾನಿತರು : ಶ್ರೀ ಅಮರನಾಥ ಪಾಟೀಲ ಎಂ.ಎಲ್.ಸಿ, ಕಲ್ಬುರ್ಗಿ  ; ಪ್ರೊ|| ಎಸ್. ವಿ. ಸಂಕನೂರು ಎಂ.ಎಲ್.ಸಿ, ಗದಗ್  ; ಶ್ರೀ ಹಣಮಂತ ನಿರಾಣಿ ಎಂ.ಎಲ್.ಸಿ, ಬಾಗಲಕೋಟೆ ; ಶ್ರೀ ರಾಮ ಚಂದ್ರಗೌಡ, ಎಂ.ಎಲ್.ಸಿ , ಬೆಂಗಳೂರು ; ಡಾ|| ರಘು ಅಕಮಂಚಿ-ಹುಬ್ಬಳ್ಳಿ, ಡಾ|| ಜಯಕರ ಶೆಟ್ಟಿ-ಬೆಂಗಳೂರು

ಬೆಳಗಾವಿ ವಿಭಾಗ ಶಿಕ್ಷಣ ಪ್ರಕೋಷ್ಠ ಪ್ರಮುಖ್ : ದಯಾನಂದ ಶಿಕ್ಕೇರಿ, ಬಾಗಲಕೋಟೆ

31-7-2016 ರಂದು ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರಾ ಅವರು ಕಳೆದ ವರ್ಷದಲ್ಲಿ ಸಂಘವು ನಡೆಸಿದ ಚಟುವಟಿಕೆಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ನಂತರ ಜಿಲ್ಲಾ ಘಟಕಗಳು ಕಳೆದ ವರ್ಷದಲ್ಲಿ ನಡೆಸಿದ ಕಾರ್ಯಕ್ರಮಗಳ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ಶಿಕ್ಷಕ ಸಂಘವು 2016-17 ನೇ ಸಾಲಿಗಾಗಿ ಯೋಜಿಸಿರುವ ಕಾರ್ಯಕ್ರಮಗಳ ವಿವರವನ್ನು ನೀಡಲಾಯಿತು. ಈ ಕಾರ್ಯಕ್ರಮಗಳನ್ನು ಎಲ್ಲಾ ಜಿಲ್ಲಾ ಘಟಕಗಳೂ ನಡೆಸುವಂತೆ ಸೂಚನೆ ನೀಡಲಾಯಿತು. ಪ್ರತಿ ಜಿಲ್ಲೆಯಲ್ಲಿಯೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಾಧ್ಯವಾದಷ್ಟು ಶೀಘ್ರವಾಗಿ ನಡೆಸುವಂತೆ, ಜಿಲ್ಲೆಗಳಲ್ಲಿ ಗುರುವಂದನಾ ಕಾರ್ಯಕ್ರಮವನ್ನು ನಡೆಸಲು ತಿಳಿಸಲಾಯಿತು. ಆಗಸ್ಟ್ 15 ನೇ ತಾರೀಖಿನಿಂದ ಆಗಸ್ಟ್ 30 ನೇ ತಾರೀಖಿನವರೆಗೆ ಸದಸ್ಯತಾ ಅಭಿಯಾನವನ್ನು ಎಲ್ಲಾ ಜಿಲ್ಲೆಗಳೂ ಕೈಗೊಳ್ಳಬೇಕು. ಪದಾಧಿಕಾರಿಗಳಿಂದ ಆಜೀವ ಸದಸ್ಯತ್ವನ್ನು ಮಾಡಿಸುವಂತೆ ನಿರ್ಧರಿಸಲಾಯಿತು. ಆಜೀವ ಸದಸ್ಯತಾ ಶುಲ್ಕ ರೂ. 500/- ಇತರರಿಂದ ವಾರ್ಷಿಕ ಸದಸ್ಯತ್ವ ಮಾಡಿಸಬೇಕು. ವಾರ್ಷಿಕ ಸದಸ್ಯತಾ ರೂ. 100/- ಸದಸ್ಯತಾ ಶುಲ್ಕದ ಜೊತೆಗೆ ಶಿಕ್ಷಕ ಸಮಾಚಾರದ ವಾರ್ಷಿಕ ಚಂದ ರೂ. 100/- ನ್ನು ಸದಸ್ಯರಿಂದ ಸಂಗ್ರಹಿಸಬೇಕೆಂದು ತೀರ್ಮಾನಿಸಲಾಯಿತು. ಸೆಪ್ಟೆಂಬರ್ ತಿಂಗಳಿನಲ್ಲಿ ಅಂಬೇಡ್ಕರ್ ಮತ್ತು ಶಿಕ್ಷಣದ ವಿಷಯವಾಗಿ ಹಾಗೂ ಶಾಶ್ವತ ಜೀವನ ಮೌಲ್ಯಗಳು ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಬೇಕು. ಅಕ್ಟೋಬರ್ ಮಾಹೆಯಲ್ಲಿ ಒಂದು ಅಥವಾ ಎರಡು ದಿನಗಳ ಅಭ್ಯಾಸ ವರ್ಗವನ್ನು ಆಯೋಜಿಸಬೇಕೆಂದು ನಿರ್ಧರಿಸಲಾಯಿತು. ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವಿಷಯವಾರು ಮಾಹಿತಿ ಹಂಚಿಕೆಯ ಕಾರ್ಯಕ್ರಮ ನಡೆಸಬೇಕೆಂದು ತಿಳಿಸಲಾಯಿತು.

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಿಂದ ನೇತಾಜಿ ಸುಭಾಷ್ ಚಂದ್ರಬೋಸರ ಜನ್ಮ ದಿನ ಜನವರಿ 23 ರ ಅವಧಿಯಲ್ಲಿ ಸಂಕಲ್ಪ ದಿನಾಚರಣೆಯನ್ನು ಆಚರಿಸುವಂತೆ ಸೂಚಿಸಲಾಯಿತು. ಮಾರ್ಚ್ 29 ರಂದು ಯುಗಾದಿ ಹಬ್ಬ. ಅಂದು ಹೊಸ ವರ್ಷವಾಗಿ ಆಚರಿಸುವಂತೆ, ಅಂದು ಎಲ್ಲರಿಗೂ ಶುಭಾಶಯ ಪತ್ರಗಳನ್ನು ಕಳುಹಿಸಿ ಯುಗಾದಿಯ ಮಹತ್ವವನ್ನು ತಿಳಿಸುವಂತೆ ಕೋರಲಾಯಿತು. ಈ ಕಾರ್ಯಕ್ರಮಗಳೊಂದಿಗೆ ಮಹಿಳಾ ಶಿಕ್ಷಕಿಯರ ಸಮಾವೇಶವನ್ನು ಎಲ್ಲಾ ಜಿಲ್ಲೆಗಳಲ್ಲೂ ನಡೆಸುವಂತೆ ಸಲಹೆ ನೀಡಲಾಯಿತು.

ಮಾಧ್ಯಮಿಕ ಶಿಕ್ಷಕ ಸಂಘದ ಸಹಕಾರ್ಯದರ್ಶಿಗಳಾದ ಚಿದಾನಂದ ಪಾಟೀಲರು ಮಾತನಾಡಿ ಶಿಕ್ಷಕರ, ಶಿಕ್ಷಣದ ಪ್ರಮುಖ ಸಮಸ್ಯೆಗಳ ಬಗ್ಗೆ ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಚಳುವಳಿಯನ್ನು ಪ್ರಾರಂಭಿಸುವಂತೆ ಹೇಳಿದರು. ಈ ಚಳುವಳಿಯಲ್ಲಿ ಎಲ್ಲಾ ಶಿಕ್ಷಕರು ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆದು ರವಾನಿಸುವಂತೆ ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ರಮ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕೆಂದು ಮಾಹಿತಿ ನೀಡಲಾಯಿತು.

ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರೂ ಹಾಗೂ ವಿಧಾನ ಪರಿಷತ್ ಸದಸ್ಯರೂ ಆದ ಶ್ರೀ ಅರುಣ ಶಹಾಪೂರರು ಮಾತನಾಡಿ ಶಿಕ್ಷಕರ ದೀರ್ಘಕಾಲದ ಸಮಸ್ಯೆಗಳು ಹಾಗೂ ಇಂದಿನ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ವಿವರ ನೀಡಿದರು. ಕೇಂದ್ರ ಸರ್ಕಾರ ರೂಪಿಸುತ್ತಿರುವ ಹೊಸ ಶೈಕ್ಷಣಿಕ ನೀತಿಯ ಬಗ್ಗೆ ವಿಚಾರಗಳನ್ನು ಸಭೆಗೆ ತಿಳಿಸಿದರು. ಈ ವಿಷಯವಾಗಿ ನಡೆಯುತ್ತಿರುವ ಚರ್ಚೆ, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಶಿಕ್ಷಣದಲ್ಲಿ ಮುಂದೇನಾಗಬಹುದು ಎಂಬ ಭೀತಿ, ಸರ್ಕಾರ, ಶಿಕ್ಷಕರ ಮಧ್ಯೆ ಇರುವ ಗೊಂದಲಗಳನ್ನು ಹಾಗೂ ವಾಸ್ತವ ಸಂಗತಿಗಳನ್ನು ಶ್ರೀ ಅರುಣ ಶಹಾಪೂರರು ಎಳೆ ಎಳೆಯಾಗಿ ವಿವರಿಸಿದರು. ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟನಾತ್ಮಕವಾಗಿ ಹೋರಾಡಿ, ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ಕೈ ಜೋಡಿಸೋಣ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.

ಡಿಸೆಂಬರ್ 2016 ರಲ್ಲಿ ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶ್ರೀ ಪಿ.ಆರ್ ಬಸವರಾಜ್‌ರವರ ಹೆಸರನ್ನು ಸೂಚಿಸಿರುವ ಬಗ್ಗೆ ಶ್ರೀ ಶಿವಾನಂದ ಸಿಂಧನಕೇರ ಸಭೆಗೆ ತಿಳಿಸಿದರು. ಸಭೆಯು ಸರ್ವಾನುಮತದಿಂದ ಪಿ. ಆರ್. ಬಸವರಾಜರವರ ಆಯ್ಕೆಯನ್ನು ಅನುಮೋದಿಸಿತು. ಶ್ರೀಯುತ ಬಸವರಾಜ್‌ರವರ ಗೆಲುವಿಗಾಗಿ ಎಲ್ಲರೂ ಶ್ರಮಿಸಲು ಸಭೆ ನಿರ್ಣಯಿಸಿತು.

ಶಿಕ್ಷಕ ಸಂಘದ ಪೋಷಕರಾದ ಶ್ರೀಯುತ ಹೆಚ್. ನಾಗಭೂಷಣರಾವ್ ನೂತನ ಕಾರ್ಯಕಾರಿಣಿಗೆ ಶುಭ ಹಾರೈಸಿ, ಹೆಚ್ಚಿನ ಹೊಣೆಗಾರಿಕೆಯಿಂದ ಸಂಘದ ಬೆಳವಣಿಗೆಗೆ ಶ್ರಮಿಸುವಂತೆ ಕರೆ ನೀಡಿದರು.

Highslide for Wordpress Plugin