ಪ್ರೌಢಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಪದೋನ್ನತಿಗಾಗಿ ಬಡ್ತಿ ಮತ್ತು ಭರ್ತಿಗೆ ಆಗ್ರಹಿಸಿ ಮನವಿ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ದಿನಾಂಕ 23-10-2016 ರಂದು ನಡೆದ ಪ್ರಾಂತ ಕೋರ್ ಕಮಿಟಿ ಸಭೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಉಪನ್ಯಾಸಕರ ಪದೋನ್ನತಿಗೆ ಆಗ್ರಹಿಸಿ, ಎಲ್ಲಾ ಜಿಲ್ಲಾ ಘಟಕಗಳ ಮೂಲಕ ಮನವಿಯನ್ನು ಸಲ್ಲಿಸುತ್ತಿದೆ.
ಶಿಕ್ಷಕರ ಪ್ರಮುಖ ಬೇಡಿಕೆಗಳು
- ಪ್ರೌಢಶಾಲೆಗಳ ಸಹ ಶಿಕ್ಷಕರನ್ನು ಮುಖ್ಯ ಶಿಕ್ಷಕರನ್ನಾಗಿ ಹಾಗೂ ಪದವಿ ಪೂರ್ವ ಉಪನ್ಯಾಸಕರಾಗಿ ಮತ್ತು ದೈಹಿಕ ಶಿಕ್ಷಕರ, ವೃತ್ತಿ ಶಿಕ್ಷಕರ ಪದೋನ್ನತಿಗಾಗಿ ಆಗ್ರಹ.
- ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಶಿಕ್ಷಣಾಧಿಕಾರಿಗಳಾಗಿ ಪದೋನ್ನತಿಗಾಗಿ ಆಗ್ರಹ.
- ಪದವಿ ಪೂರ್ವ ಉಪನ್ಯಾಸಕರನ್ನು ಪ್ರಾಂಶುಪಾಲರಾಗಿ ಪದೋನ್ನತಿಗಾಗಿ ಆಗ್ರಹ.
- ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯ ಶಿಕ್ಷಕರ ಕಾಲ್ಪನಿಕ ವೇತನ ಬಿಡುಗಡೆಗಾಗಿ ಆಗ್ರಹ.
- ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿಯ ಖಾಲಿ ಹುದ್ದೆಗಳ ನೇಮಕಾತಿಗಾಗಿ ಆಗ್ರಹ.
- ಸಹ ಶಿಕ್ಷಕರಿಗೆ ಮಾತ್ರ ನೀಡಿದ ವಿಶೇಷ ವೇತನ ಭತ್ಯೆಯನ್ನು ದೈಹಿಕ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ವೃತ್ತಿ ಶಿಕ್ಷಕರು ಹಾಗೂ ಸಂಗೀತ ಶಿಕ್ಷಕರುಗಳಿಗೂ ವಿಸ್ತರಿಸಲು ಆಗ್ರಹ.
- ಪದವಿ ಪೂರ್ವ ಪ್ರಾಂಶುಪಾಲರಿಗೆ ಮಾತ್ರ ನೀಡಿದ ವಿಶೇಷ ವೇತನ ಭತ್ಯೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಗೂ ನೀಡಲು ಆಗ್ರಹ.
- ಜೂನ್ 2016 ರ ವರೆಗೆ ಖಾಲಿಯಾದ ಅನುದಾನಿತ ಶಾಲೆಗಳಲ್ಲಿಯ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿಯ ಬೋಧಕ, ಬೋಧಕೇತರ ಸಿಬ್ಬಂದಿಯ ಭರ್ತಿಗಾಗಿ ಆಗ್ರಹ.
- ಮಾಧ್ಯಮಿಕ ಮತ್ತು ಪದವಿಪೂರ್ವ ಉಪನ್ಯಾಸಕರ ಶಿಕ್ಷಕರ ವೇತನ ತಾರತಮ್ಮ ನಿವಾರಣೆಗಾಗಿ ಆಗ್ರಹ.
- 2016-17 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಕಳೆದ ವರ್ಷದ ಮಾದರಿಯಲ್ಲಿಯೇ ನಡೆಸಬೇಕೆಂದು ಆಗ್ರಹ.
- ಎಲ್ಲ ಅನುದಾನಿತ ಶಾಲೆಗಳಲ್ಲಿಯ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ವೈದ್ಯಕೀಯ ಸೌಲಭ್ಯವನ್ನು ನೀಡಲು ಆಗ್ರಹ.
- ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಆಗ್ರಹ.
- ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುದಾನವನ್ನು ವಿಸ್ತರಿಸಲು ಆಗ್ರಹ. ಸರಕಾರ ಹಾಗೂ ಸಂಘ ಸಂಸ್ಥೆಗಳ ಸ್ವಾಯತ್ತತೆಯ ಕಟ್ಟಡಗಳಲ್ಲಿ ನಡೆಯುತ್ತಿರುವ ಅನುದಾನಿ ರಹಿತ ಶಾಲೆಗಳ ಕರಾರು ಪತ್ರವನ್ನು ಮುಂದುವರೆಸುವ ಕುರಿತು ಆಗ್ರಹ.
- ಸರಕಾರಿ ಹಾಗೂ ಅನುದಾನಿತ ಎಲ್ಲ ಶಿಕ್ಷಕರಿಗೆ ಕೊಡಮಾಡುವ ಜಿಲ್ಲಾ ಮತ್ತು ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪರುಸ್ಕಾರಗಳನ್ನು ಅನುದಾನರಹಿತ ಶಾಲೆಗಳಿಗೂ ವಿಸ್ತರಿಸಲು ಆಗ್ರಹ.
- ನಗರದಲ್ಲಿ ಬಹಳಷ್ಟು ಶಾಲೆಗಳಿಗೆ ಆಟದ ಮೈದಾನದ ಕೊರತೆ ಇದ್ದು ನಗರದ ಆಯಾ ಭಾಗಗಳಲ್ಲಿ ಆಟದ ಮೈದಾನಗಳನ್ನು ನಿರ್ಮಿಸಲು ಆಗ್ರಹ.