ಎಸ್. ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ: ಶಿಕ್ಷಕರ ಕಾರ್ಯಾಗಾರ

ಕಲ್ಬುರ್ಗಿ : ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ. ಜ್ಞಾನಧಾರೆ ಎರೆಯಬೇಕಾದ ಶಿಕ್ಷಕ ಹಾಗೂ ಅದನ್ನು ಸ್ವೀಕರಿಸಿ ಪ್ರಯತ್ನಶೀಲರಾಗಬೇಕಾದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆ ಆಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ನಮೋಶಿ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ದಿಶಾ ವಿಜ್ಞಾನ ಪಿಯು ಕಾಲೇಜಿನಲ್ಲಿ 10-12-2016 ಶುಕ್ರವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

disha

disha1

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು. ಮೊದಲು ಅವರು ಅಧ್ಯಯನಶೀಲರಾಗಬೇಕು. ಎಲ್ಲ ವಿಷಯಗಳ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಅದರಲ್ಲೂ ಬೋಧನೆ ವಿಷಯದ ಮೇಲೆ ಹೆಚ್ಚಿನ ಹಿಡಿತ ಇರಬೇಕು. ಹೀಗಾದಲ್ಲಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ನೀಡಲು ಸಾಧ್ಯವಾಗುತ್ತದೆ. ತಾನು ಬೋಧಿಸುವ ವಿಷಯ ಮತ್ತು ವಿದ್ಯಾರ್ಥಿಗಳನ್ನು ಪ್ರೀತಿಸಬೇಕು ಎಂದು ಸಲಹೆ ನೀಡಿದರು. ಶಿಕ್ಷಕರಿಗೆ ಸಾಕಷ್ಟು ಸಮಸ್ಯೆಗಳಲ್ಲಿದ್ದು ಅವರ ಬೇಡಿಕೆಗಳಿಗೆ ಸರಕಾರ ಸ್ಪಂಧಿಸಬೇಕು. ಜಿಲ್ಲಾ ಫಲಿತಾಂಶದ ಸುಧಾರಣೆಗೆ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ದಿಶಾ ಪಿ ಯು ಕಾಲೇಜಿನ ಅಧ್ಯಕ್ಷ ಶಿವಾನಂದ್ ಖಜೂರಗಿ ಮಾತನಾಡಿ. ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮತ್ತು ಪರಿಶ್ರಮ ಕಡಿಮೆಯಾಗುತ್ತಿದೆ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ತಾನಾಗಿಯೇ ಸಿಗುವುದಿಲ್ಲ, ಅದಕ್ಕಾಗಿ ಅವಿರತ ಶ್ರಮ, ಬದ್ಧತೆ ಬೇಕಾಗುತ್ತದೆ. ಒಂದು ವೇಳೆ, ಈ ಗುಣಗಳು ಇರದಿದ್ದರೆ ಸಾಧನೆ ಸಾಧ್ಯವಿಲ್ಲ ಎಂದು ಹೇಳಿದರು.

ವಿದ್ಯಾರ್ಥಿಯು ಸಮಾಜದಲ್ಲಿ ಉತ್ತಮ ಪ್ರಜೆಯಾಗ ಬೇಕಾದರೆ, ವ್ಯಕ್ತಿತ್ವ ರೂಪಿಸುವ ಕೆಲಸ ಶಾಲಾ ಹಂತದಿಂದಲೇ ಆರಂಭಿಸಬೇಕು. ಸಫಲತೆಯ ಮೆಟ್ಟಿಲು ಹತ್ತಲು ಶಿಕ್ಷಕರ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.

ಉಪ ನಿರ್ದೇಶಕ ಶಾಂತಗೌಡ ಪಾಟೀಲ್ ಮಾತನಾಡಿ, ಪ್ರಯತ್ನ ಮತ್ತು ಸಹಕಾರದೊಂದಿಗೆ ಜಿಲ್ಲಾ ಫಲಿತಾಂಶ ಹೆಚ್ಚಿಸುವಲ್ಲಿ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವಿಭಾಗ ಪ್ರಮುಖ ಮಹೇಶ್ ಆರ್. ಬಸರಕೋಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಂದ್ರಶೇಖರ್ ಪಾಟೀಲ್ ಸ್ವಾಗತಿಸಿದರು. ಅಶೋಕ್ ಜೋಶಿ ವಂದಿಸಿದರು.

Highslide for Wordpress Plugin