ಪಠ್ಯಕ್ರಮಗಳನ್ನು ಬದಲಾಯಿಸುವ ತೀರ್ಮಾನವನ್ನು ವಿರೋಧಿಸಿ ರಾಜ್ಯಪಾಲರಿಗೆ ಮನವಿ

ರಾಜ್ಯ ಸರ್ಕಾರ ಶಿಕ್ಷಣ ತಜ್ಞರು, ಶಿಕ್ಷಕರ ಜೊತೆ ಚರ್ಚೆ ಇಲ್ಲದೆ ಪಠ್ಯಕ್ರಮಗಳನ್ನು ಬದಲಾಯಿಸುವ ತೀರ್ಮಾನವನ್ನು ವಿರೋಧಿಸಿ ಜ. 3 ರಂದು ರಾಜಭವನದಲ್ಲಿ ರಾಜ್ಯಪಾಲರಾದ ಶ್ರೀ ವಾಜುಭಾಯ್ ವಾಲಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಶ್ರೀ ರಾಮಚಂದ್ರ ಗೌಡ, ಶ್ರೀಮತಿ ತಾರಾ ಮತ್ತು  ಶ್ರೀ ಅರುಣ್ ಶಹಾಪುರ್ ಅವರ ನೇತೃತ್ವದ ನಿಯೋಗದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ಸಿಂಧನಕೇರಾ,ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ಪಿ ಆರ್ ಬಸವರಾಜ, ರಾಜ್ಯ ಉಪಾಧ್ಯಕ್ಷರಾದ ಬಿ.ಹೆಚ್. ವರದರಾಜ, ಶ್ರೀಮತಿ ಡಿ.ಕೆ.ಮಮತಾ, ಉಪಸ್ಥಿತರಿದ್ದರು.

Governor-Meet

Governor-Meet1

Highslide for Wordpress Plugin