ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ

ದಿನಾಂಕ 10-6-2017 ರಂದು ಸಭೆ ಸೇರಿದ್ದ ಮಾಧ್ಯಮಿಕ ಶಿಕ್ಷಕ ಸಂಘದ ಕೇಂದ್ರ ಪದಾಧಿಕಾರಿಗಳು ಪಠ್ಯ ಪುಸ್ತಕಗಳ ದೋಷಗಳು, ವಿತರಣೆಯಲ್ಲಿನ ಲೋಪ ಹಾಗೂ ಇನ್ನಿತರ ಬೇಡಿಕೆಗಳನ್ನು ಪೂರೈಸಲು ಮುಖ್ಯ ಮಂತ್ರಿಗಳನ್ನು ಆಗ್ರಹಿಸುವಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿಯನ್ನು ನಡೆಸಿ ಶಿಕ್ಷಕರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಬೇಕೆಂದು ಕರೆ ನೀಡಿದ್ದರು.

bengaluru

Mysore

Bagalkot

Ballary

Ramnagar

Yadgir

Nippani

Chikkodi

Hubballi--Darvad

Mandya

Chamaraja-nagar

Belgavi--manavi

ಈ ಕರೆಗೆ ಅನುಗುಣವಾಗಿ ರಾಜ್ಯದ 20 ಜಿಲ್ಲೆಗಳಲ್ಲಿ ನಮ್ಮ ಸಂಘದ ಪದಾಧಿಕಾರಿಗಳು ಅನೇಕ ಶಿಕ್ಷಕರ ಜೊತೆಯಲ್ಲಿ 2 ಗಂಟೆಗಳ ಕಾಲ ಸತತ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಪಠ್ಯಪುಸ್ತಕಗಳ ದೋಷ ನಿವಾರಣೆ ಹಾಗೂ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು, ಮಾನ್ಯ ಶಾಸಕ ಶ್ರೀ ಅರುಣ್ ಶಹಾಪೂರ ಅವರ ನೇತೃತ್ವದಲ್ಲಿ ದಿನಾಂಕ 14-6-2017 ರಂದು ಮಾನ್ಯ ಶಿಕ್ಷಣ ಸಚಿವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬೇಡಿಕೆಗಳು :
1. ಪಠ್ಯ ಪುಸ್ತಕದಲ್ಲಿನ ತಪ್ಪುಗಳಿಂದಾಗಿ ಶಿಕ್ಷಕರಲ್ಲಿ ಉಂಟಾದ ಗೊಂದಲ ನಿವಾರಣೆ.
2. ಇನ್ನೂ ಪಠ್ಯಪುಸ್ತಕಗಳು ವಿತರಣೆಯಾಗದಿರುವ ಸ್ಥಳಗಳಲ್ಲಿ ಕೂಡಲೇ ವಿತರಿಸುವಂತೆ ಆಗ್ರಹ.
3. ಸರಿಯಾಗಿ ಮುದ್ರಿತವಾಗದಿರುವ ಪುಸ್ತಕಗಳನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹ.
4. ಪ್ರೌಢಶಾಲಾ ಶಿಕ್ಷಕರಿಗೆ, ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿ ನೀಡುವಂತೆ ಆಗ್ರಹ.
5. ಒಂದೇ ದೇಶ, ಒಂದೇ ಶಿಕ್ಷಣ ನೀತಿ ಹಾಗೂ ಒಂದೇ ವೇತನ ಶ್ರೇಣಿ. ಈ ಕೋರಿಕೆಗಾಗಿ ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗ ವರದಿಯನ್ನು ರಾಜ್ಯದಲ್ಲೂ ಯಥಾವತ್ತಾಗಿ ಜಾರಿಮಾಡಲು ಒತ್ತಾಯ.
6. ಸಮಾನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಶಿಕ್ಷಕರು/ ಮುಖ್ಯ ಶಿಕ್ಷಕರು ಹಾಗೂ ಟಿ.ಜೆ.ಟಿ. ಶಿಕ್ಷಕರಿಗೆ ಒಂದು ವಿಶೇಷ ವೇತನ ಮಂಜೂರಾತಿಯಲ್ಲಿ ಗೊಂದಲ ನಿವಾರಣೆ.

Highslide for Wordpress Plugin