ಕಾರ್ಯಕರ್ತರ ಪ್ರವಾಸ

ಪ್ರವಾಸ ಜ್ಞಾನಾರ್ಜನೆಗೆ ಪೂರಕ. ದೈನಂದಿನ ಏಕತಾನತೆಯನ್ನು ಕಳೆದು ಹೊಸ ಉತ್ಸಾಹ, ಹುರುಪಿನೊಂದಿಗೆ ಮತ್ತೆ ನಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರವಾಸ ಸಹಕಾರಿಯಾಗುತ್ತದೆ. ಸಂಘ ಸಂಸ್ಥೆಗಳ ಕಾರ್ಯಕರ್ತರು ಪರಸ್ಪರ ಅರಿತು ಹೊಂದಾಣಿಕೆಯಿಂದ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರವಾಸ ಸಹಕಾರಿಯಾಗುತ್ತದೆ.

Tour

ಈ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಘಟಕವು ಐವತ್ತು ಜನ ಶಿಕ್ಷಕರು ಹಾಗೂ ಅವರ ಕುಟುಂಬದವರಿಗೆ ದಿನಾಂಕ 19-8-2017 ಮತ್ತು 20-8-2017 ರಂದು ಎರಡು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರವಾಸವು ದಿನಾಂಕ 19-8-2017 ರಾತ್ರಿ ಪ್ರಾರಂಭವಾಗಿ 20-8-2017 ರ ಬೆಳಗ್ಗೆ ಕಲ್ಲತ್ತಹಳ್ಳಿ ಜಲಪಾತ ಕ್ಕೆ ತಲುಪಲಾಯಿತು. ಅಲ್ಲಿ ದೇವರ ದರ್ಶನ ಮಾಡಿ ಕೆಮ್ಮಣ್ಣುಗುಂಡಿಗೆ ತಲುಪಿದೆವು. ಅಲ್ಲಿನ ಸೃಷ್ಟಿ ಸೌಂದರ್ಯವನ್ನು ವೀಕ್ಷಿಸಿ ಮತ್ತೆ ಬಾಬಾಬುಡನ್‌ಗಿರಿಯತ್ತ ಪ್ರಯಾಣ ಬೆಳೆಸಲಾಯಿತು. ಬಾಬಾ ಬುಡನ್ ಗಿರಿಯಲ್ಲಿ ಮಳೆ ಪ್ರಾರಂಭವಾಗಿದ್ದರಿಂದ ಚುಮು ಚುಮು ಚಳಿಯಲ್ಲಿ ದತ್ತ ಪೀಠವನ್ನು ವೀಕ್ಷಿಸಿ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಲಾಯಿತು. ಮಾರ್ಗ ಮಧ್ಯದಲ್ಲಿ ಪರಸ್ಪರರ ಪರಿಚಯ ಮಾಡಿಕೊಳ್ಳಲಾಯಿತು.

ಶ್ರೀ ಎಸ್.ಜಿ ತಾಂಬೆ ಮತ್ತು ಶ್ರೀ ಸುರೇಂದ್ರ ಇವರುಗಳು ಸಂಘದ ಬಗ್ಗೆ ಕಾರ್ಯಕ್ರಮಗಳ ಬಗ್ಗೆ ಎಲ್ಲರಿಗೂ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. ಚಿಕ್ಕಮಗಳೂರಿನಲ್ಲಿ ಮದ್ಯಾಹ್ನದ ಊಟ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿ ರಾತ್ರಿ ಹತ್ತು ಗಂಟೆಗೆ ಬೆಂಗಳೂರನ್ನು ತಲುಪಿದೆವು. ಕಾರ್ಯಕ್ರಮವನ್ನು ದಕ್ಷಿಣ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ವಾಸುಕಿ ಹಾಗೂ ಅಧ್ಯಕ್ಷರಾದ ಶ್ರೀ ಸುರೇಂದ್ರರವರು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದರು. ಪ್ರವಾಸದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಹಾಗು ಅವರ ಕುಟುಂಬ ಸುಮಧುರ ನೆನಪು ಹಾಗೂ ಅನುಭವ ದೊಂದಿಗೆ ಹಿಂತಿರುಗಿದರು.

Highslide for Wordpress Plugin