ದಿನಾಂಕ 12-11-2017 ರಂದು ಹುಬ್ಬಳ್ಳಿ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿ ನಡೆದ ‘ಕಾರ್ಯಕಾರಿಣಿಯ ವರದಿ
ಶಿಕ್ಷಕರ ವೇತನ ತಾರತಮ್ಯವನ್ನು ನಿವಾರಿಸಲು ‘ಒಂದು ದೇಶ, ಒಂದು ಶಿಕ್ಷಣ, ಒಂದು ವೇತನ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಒತ್ತಾಯಿಸಿದೆ.
ದೇಶದ 30 ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಶಿಕ್ಷಕರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ಜಾರಿ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಜಾರಿಯಾಗಿಲ್ಲ, ಹಾಗಾಗಿ ಇಡೀ ದೇಶಕ್ಕೆ ಅನ್ವಯ ವಾಗುವಂತೆ ಒಂದೇ ದೇಶ, – ಒಂದೇ ಶಿಕ್ಷಣ, – ಒಂದೇ ವೇತನ ವ್ಯವಸ್ಥೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಶ್ರೀ ಶಿವಾನಂದ ಸಿಂಧನಕೇರಾ ಮತ್ತು ದಕ್ಷಿಣ ಭಾರತ ಪ್ರಮುಖ ಪ್ರೊ. ಬಾಲಕೃಷ್ಣ ಭಟ್ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರದ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಶಿಕ್ಷಕರಿಗೆ ಯಥಾವತ್ತಾಗಿ ಜಾರಿ ಮಾಡಲಾಗಿದೆ, ರಾಜ್ಯದಲ್ಲಿ ಮಾತ್ರ ವೇತನ ಆಯೋಗ ರಚನೆ ಮಾಡಲಾಗಿದೆ. ಇದಕ್ಕೆಲ್ಲಾ ಕೊನೆ ಹಾಡಲು ಒಂದೇ ದೇಶ- ಒಂದೇ ಶಿಕ್ಷಣ, – ಒಂದೇ ವೇತನ ವ್ಯವಸ್ಥೆ ಜಾರಿಯಾಗಬೇಕು ಎಂದರು.
ಈ ವ್ಯವಸ್ಥೆ ಜಾರಿಯಿಂದ ಶಿಕ್ಷಣದ ಪಠ್ಯಕ್ರಮದಲ್ಲೂ ಏಕರೂಪತೆ ಬರುವ ಜತೆಗೆ ಶಿಕ್ಷಕರ ಸಂಬಳದ ತಾರತಮ್ಯವೂ ನಿವಾರಣೆಯಾಗಿ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ ಎಂದು ನಿರ್ಣಯ ಕೈಗೊಳ್ಳಲಾಯಿತು.
ಶಿಕ್ಷಕರ ನಿವೃತ್ತಿ ವಯಸ್ಸಿನಲ್ಲಿ ಏಕರೂಪತೆ ಜಾರಿಯಾಗಬೇಕು, ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ನಿವೃತ್ತಿ ವಯಸ್ಸು 65 ಕ್ಕೆ ನಿಗದಿಯಾಗಬೇಕು.
ದೇಶದ ಶಿಕ್ಷಣದ ಬಗ್ಗೆ ನಿಷ್ಪಕ್ಷಪಾತವಾದ ಮೌಲ್ಯಮಾಪನ ಆಗಬೇಕು, ಜತೆಗೆ ಚೀನಾ ವಸ್ತುಗಳ ವಿರುದ್ಧ ಆಂದೋಲನ ನಡೆಯುತ್ತಿರುವ ಈ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.
ಶಿಕ್ಷಕರಿಗೆ ಸಂಬಂಧಿಸಿದಂತೆ 23 ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ಮಹಿಳಾ ಶಿಕ್ಷಕಿಯರ ಸ್ಥಿತಿಗತಿ, ಸುರಕ್ಷತೆ, ಅವರಿಗೆ ಸಿಗುತ್ತಿರುವ ಸೌಲಭ್ಯಗಳು ಎಲ್ಲದರ ಬಗ್ಗೆಯೂ ಸಮೀಕ್ಷೆ ನಡೆಸುವ ಕಾರ್ಯವನ್ನು ಆರಂಭಿಸಲಾಗಿದೆ. ಕರ್ನಾಟಕ ರಾಜ್ಯದ ತುಂಬಾ ಸುಮಾರು ೨೦ ಸಾವಿರ ಶಿಕ್ಷಕಿಯರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಲು ಜಿಲ್ಲಾವಾರು ಗುರಿ ನಿರ್ಧರಿಸಲಾಯಿತು. ಈ ಸಮೀಕ್ಷೆಯ ಸಂಪೂರ್ಣ ಜವಾಬ್ದಾರಿಯನ್ನು ಂಃಖSಒ ರಾಷ್ಟೀಯ ಮಹಿಳಾ ಸಹಕಾರ್ಯದರ್ಶಿ ಶ್ರೀಮತಿ ಮಮತಾ ಡಿ.ಕೆ. ಇವರಿಗೆ ವಹಿಸಲಾಯಿತು.
ದಿನಾಂಕ 1-8-2018 ರ ನಂತರ ನೇಮಕಾತಿಯಾದ ಶಿಕ್ಷಕರಿಗೆ ಪಾವತಿಸಿರುವ ವಿಶೇಷ ಭತ್ಯೆಯನ್ನು ವಸೂಲಿ ಮಾಡುವಂತೆ ದಿನಾಂಕ 4-11-2017 ರಂದು ಎಲ್ಲ ಸಂಬಳ ಬಟವಾಡೆ ಅಧಿಕಾರಿಗಳಿಗೆ ನೀಡಿರುವ ಸೂಚನೆಯನ್ನು ಹಿಂಪಡೆಯವುದು, ಈಗಾಗಲೇ ಪಾವತಿಸಿದ ಸಂಬಳವನ್ನು ಮರಳಿ ತುಂಬುವಂತೆ ಸೂಚಿಸುವುದು ಸಮಂಜಸವಲ್ಲ, ಅಧಿಕಾರಿಗಳು ಮಾಡಿದ ತಪ್ಪಿಗೆ ಅವರ ಮೇಲೆ ಕ್ರಮಕೈಗೊಳ್ಳುವುದನ್ನು ಬಿಟ್ಟು ಶಿಕ್ಷಕರಿಂದ ಹಣ ಮರು ಪಾವತಿಗೆ ಆದೇಶಿಸಿರುವುದು ಶಿಕ್ಷಕರಲ್ಲಿ ಕಳವಳಕ್ಕೆ ಕಾರಣವಾಗಿದೆ, ಆದ್ದರಿಂದ ಇಲ್ಲಿಯವರೆಗೆ ಪಾವತಿಸಿದ ವಿಶೇಷ ಭತ್ಯೆಯ ವಸೂಲಾತಿಯನ್ನು ಕೈಬಿಟ್ಟು ಎಲ್ಲಾ ಶಿಕ್ಷಕರಿಗೆ ಸಮಾನವಾಗಿ ವಿಶೇಷ ಭತ್ಯೆ ನೀಡುವಂತೆ ಸರಕಾರಿ ಆದೇಶ ಹೊರಡಿಸಲು ಆಗ್ರಹಿಸುವಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಕಾರ್ಯಕಾರಿಣಿಯಲ್ಲಿ ನಿರ್ಣಯಿಸಲಾಯಿತು.
ಕಾರ್ಯಕಾರಿಣಿಯಲ್ಲಿ ಇಲ್ಲಿಯವರೆಗೂ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಶ್ರೀ ಶಿವಾನಂದ ಸಿಂಧನಕೇರಾ ಇವರು ಇತ್ತೀಚಿಗೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ಕರ್ನಾಟಕ ಅಧ್ಯಾಪಕ ಪರಿಷತ್ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು ಹಾಗೂ ರಾಷ್ಟ್ರೀಯ ಮಹಿಳಾ ಸಹ ಕಾರ್ಯದರ್ಶಿಯಾದ ಶ್ರೀಮತಿ ಮಮತಾ ಡಿ.ಕೆ. ಇವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ ಮತ್ತು ಶ್ರೀ ಸಂದೀಪ ಬೂದಿಹಾಳ, ಕರ್ನಾಟಕ ಅಧ್ಯಾಪಕ ಪರಿಷತ್ನ ರಾಜ್ಯಾಧ್ಯಕ್ಷರಾದ ಡಾ. ರಘು ಅಕಮಂಚಿ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಶ್ರೀಧರ ಪಾಟೀಲ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶ್ರೀ ಬಸವರಾಜ ದೇವರಮನಿ, ಖಜಾಂಚಿ ಶ್ರೀ ರವಿಚಂದ್ರ ಕೊಣ್ಣೂರ ಹಾಗೂ ರಾಜ್ಯದ ಎಲ್ಲ ಜಿಲ್ಲೆಯಿಂದ 100 ಕ್ಕೂ ಹೆಚ್ಚು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶ್ರೀ ಸಂದೀಪ ಬೂದಿಹಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ, 94491 93705