ಬೆಂಗಳೂರು ಉತ್ತರ ಜಿಲ್ಲೆ ಪ್ರತಿಭಾ ಪುರಸ್ಕಾರ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕವು ದಿನಾಂಕ 12-8-2018 ರಂದು ಮಲ್ಲೇಶ್ವರಂನ, ಹಿಮಾಂಶು ಜ್ಯೋತಿ ಕಲಾಪೀಠಶಾಲೆಯಲ್ಲಿ 33 ನೇ ಪ್ರತಿಭಾ ಪುರಸ್ಕಾರ ಸಮಾರಂಭವು ಜರುಗಿತು.

ಸಮಾರಂಭ ಪ್ರಾರಂಭವಾಗುವ ಮೊದಲು ವಿಧಾನ ಪರಿಷತ್ ಸದಸ್ಯರಾದ ಶ್ರೀ ಅ. ದೇವೇಗೌಡರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಚಿದಾನಂದ ಪಾಟೀಲರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರತಿಭಾ ಪುರಸ್ಕಾರ ಸಮಾರಂಭವು ಶ್ರೀಮತಿ ಸಾವಿತ್ರಿ ಗುಣಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

b-north-prathibha-puraskar-photo-1

ಜಿಲ್ಲಾ ಕಾರ್ಯದರ್ಶಿ ಶ್ರೀ ಎಸ್. ಜಿ. ತಾಂಬೆಯವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಗಣ್ಯರೆಲ್ಲರೂ ದೀಪವನ್ನು ಪ್ರಜ್ವಲಿಸಿದರು. ಗೌರವ ಅಧ್ಯಕ್ಷರಾದ ಶ್ರೀ ಜೆ.ಎಂ ಜೋಶಿಯವರು ಪ್ರಸ್ತಾವಿಕ ನುಡಿಗಳನ್ನು ಹೇಳಿದರು. ಪ್ರಥಮಿಗರಲ್ಲಿ ಪ್ರಥಮಿಗಳಾದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಶೇ 85 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಶಾಲಾ ಶಿಕ್ಷಕರ ಮಕ್ಕಳು ಮತ್ತು ಅವರ ಪೋಷಕರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀ ಅ ದೇವೇಗೌಡರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು. ಕಾಲೇಜು ಮುಗಿಯುವರೆಗೆ ಮೊಬೈಲ್ ಬಳಸಬೇಡಿ ಗುರುಹಿರಿಯಿಗೆ ಗೌರವಿಸಿ ವಿದ್ಯಾಭ್ಯಾಸ ಮುಗಿಸಿ ವಿದೇಶಕ್ಕೆ ಹಾರಿ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂದರು.

ಮತ್ತೋರ್ವ ಅತಿಥಿಗಳಾದ ಯೋಗ ಗುರು ಶ್ರೀ ಉಮಾಮಹೇಶ್ವರ ಅವರು ಮಾತನಾಡಿ ಶಿಸ್ತು, ವಿನಯ, ಆರೋಗ್ಯ ಇದ್ದರೆ ನೀವು ಏನನ್ನಾದರೂ ಸಾಧಿಸಬಹುದು. ಸಮವಸ್ತ್ರ ಇರುವುದೇ ಶಿಸ್ತನ್ನು ರೂಡಿಸಿಕೊಳ್ಳಲು ಸಮವಸ್ತ್ರ ಇಲ್ಲ ಅಂದರೆ ಶಿಸ್ತು ಇರುವುದಿಲ್ಲ. ಜೊತೆಗೆ ದಿನವೂ ಕನಿಷ್ಠ 30 ನಿಮಿಷವಾದರೂ ಯೋಗಾಸನ ಮಾಡಿ ಎಂದು ಹೇಳಿ ಎಲ್ಲರಿಗೂ ಒಂದು ಆಸನ ಮಾಡಿಸಿದರು. ಉಳಿದ ಶಾಲಾ ಪ್ರಥಮಿಗರನ್ನು ಒಬ್ಬೊಬ್ಬರನ್ನು ಕರೆದು ಪುರಸ್ಕರಿಸಲಾಯಿತು.

ಉತ್ತರ ಜಿಲ್ಲೆಯ ವಲಯ 3 ರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರತಿಭಾ ಅಲೆಕ್ಸಾಂಡರ್ ಮಾತನಾಡಿ ನೀವೆಲ್ಲಾ ಈಗಲೇ ಗುರಿ ಇಟ್ಟುಕೊಳ್ಳಿ ಆ ಗುರಿ ತಲುಪಲು ನಿತ್ಯ ಪ್ರಯತ್ನಿಸಬೇಕು. ನಾನು ಶಿಕ್ಷಣ ಅಧಿಕಾರಿಯಾಗಬೇಕೆಂದು ಎಸ್.ಎಸ್.ಎಲ್.ಸಿ ಇರುವಾಗಲೇ ನಿರ್ಧರಿಸಿದ್ದೆ ಅದನ್ನು ತಲುಪಲು ಶ್ರಮ ವಹಿಸಿದೆ. ನಾನೊಬ್ಬ ಬಸ್ ಕಂಡಕ್ಟರ್ ಮಗಳು. ಈಗ ಅಧಿಕಾರಿಯಾಗಿದ್ದೇನೆ. ಕೆಲವು ನೈಜ ಘಟನೆಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಯಶಸ್ಸು ಗಳಿಸಲು ಯಾವುದೇ ಶಾರ್ಟ್‌ಕಟ್ ಇಲ್ಲ ಎಂಬುದನ್ನು ತಿಳಿಯಿರಿ ಎಂದರು.

ಹಿಮಾಂಶು ಜ್ಯೋತಿ ಕಲಾ ಪೀಠ ಸಂಸ್ಥೆಯ ಅಧ್ಯಕ್ಷರಾದ ಡಾ|| ಬಿ ವಿ ಎ ರಾವ್ ಮಾಡನಾಡಿ ಈಗಿನ ಶಿಕ್ಷಣದಲ್ಲಿ ಮೌಲ್ಯಗಳೇ ಇಲ್ಲ. ಎಲ್ಲರೂ ಅಂಕಗಳ ಹಿಂದೆ ಓಡುತ್ತಿದ್ದಾರೆ. ಹಿರಿಯರಿಗೆ ಗೌರವಿಸುವುದಿಲ್ಲ. ನೀವೆಲ್ಲಾ ಉತ್ತಮ ಪ್ರತಿಭೆಗಳು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಗಳಿಸಿಕೊಳ್ಳಿ ನಿಮಗೆ ಇಷ್ಟವಾದ ಶಿಕ್ಷಣವನ್ನು ಪಡೆಯಬೇಕು. ಹಾಗೆಯೇ ಪಾಲಕರೂ ಕೂಡ ಮಕ್ಕಳಿಗೆ ಇದೇ ಕೋರ್ಸ್ ಮಾಡಿ ಎಂದು ಒತ್ತಾಯಿಸಬಾರದು ಎಂದರು. ಸ್ಕಿಲ್ ಬೇಸ್ಡ್ ಎಜ್ಯುಕೇಶನ್ ತುಂಬಾ ಅವಶ್ಯವಿದೆ. ಅನೇಕ ವಿದೇಶ ಕಂಪನಿಗಳಲ್ಲಿ ಅಂಕಗಳ ಆಧಾರವಾಗಿ ಕೆಲಸ ಕೊಡುವುದಿಲ್ಲ. ಅವರ ಕೌಶಲ್ಯ ನೋಡಿ ಕೊಡುತ್ತಾರೆಂದು ತಿಳಿಸಿದರು.

ಮತ್ತೊರ್ವ ಅತಿಥಿಗಳಾದ ಡಾ|| ಸಿ.ಎನ್ ಅಶ್ವತ್ ನಾರಾಯಣ ಶಾಸಕರು, ಮಲ್ಲೇಶ್ವರಂ ಇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸರಕಾರದ ಸವಲತ್ತುಗಳ ಬಗ್ಗೆ ತಿಳಿಸಿದರು. ನೀವು ಇಚ್ಛಿಸಿದ ಕೋರ್ಸ್‌ನ್ನೇ ತೆಗೆದುಕೊಂಡು ಉತ್ತಮ ಸಾಧನೆ ಮಾಡಿ ನಿಮ್ಮ ಪ್ರತಿಭೆ ಮುಂದೆಯೂ ಹೀಗೆಯೇ ಇರಬೇಕೆಂದು ತಿಳಿಸಿದರು. ಎಲ್ಲ ಶಾಲಾ ಪ್ರಥಮಿಗರಿಗೆ ಶ್ರೀಮತಿ ವಾಸುಕಿ ಕಾರ್ಯದರ್ಶಿಗಳು ಬೆಂಗಳೂರು ದಕ್ಷಿಣ ಜಿಲ್ಲೆ ಇವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಶ್ರೀ ಚಿದಾನಂದ ಪಾಟೀಲರು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಶ್ರೀ ನಾರಾಯಣ ಭಟ್ಟ ಅವರು ದಾನಿಗಳಿಗೆ ಕೃತಜ್ಞತೆಗಳನ್ನು ತಿಳಿಸಿದರು. ಕುಮಾರಿ ಸ್ನೇಹಾ ಮಲ್ಲಿಕಾರ್ಜುನ ಕೊಡಗಿ ಪುರಸ್ಕೃತರ ಪರವಾಗಿ ಅನಿಸಿಕೆ ಹೇಳಿದಳು. ಕಾರ್ಯದರ್ಶಿ ಶ್ರೀ ಗಂಗಪ್ಪನವರು ವಂದನಾರ್ಪಣೆ ಮಾಡಿದರು. ಶ್ರೀ ಗಂಗಾಧರ ನಿರೂಪಣೆ ಮಾಡಿದರು. ಶ್ರೀ ಹರಿದಾಸ್ ಶ್ರೀ ಜನಾರ್ಧನ್ ಶ್ರೀ ಕುಮಾರ್, ಶ್ರೀಮತಿ ದಾಕ್ಷಾಯಿಣಿ, ಶ್ರೀ ಮಲ್ಲಿಕಾರ್ಜುನ ಕೊಡಗಿ, ಶ್ರೀ ಪ್ರಸನ್ನ ಕುಮಾರ ಅವರುಗಳು ಶಾಲಾ ಪ್ರಥಮಿಗರ ಪಟ್ಟಿಯನ್ನು ಓದಿದರು. ಕಾರ್ಯಕ್ರಮವು ಶ್ರೀಮತಿ ಜ್ಯೋತಿ ಮಹೇಶ್ವರವರ ವಂದೇಮಾತರಂದೊಂದಿಗೆ ಮುಕ್ತಾಯವಾಯಿತು. ವಿವಿಧ ಶಾಲೆಗಳಿಂದ ಸುಮಾರು ೨೦೦ ಶಾಲಾ ಪ್ರಥಮಿಗರು ಹಾಗೂ ೪೦ ಶಿಕ್ಷಕರು ಮತ್ತು ಪಾಲಕರು ಭಾಗವಹಿಸಿದ್ದರು.

Highslide for Wordpress Plugin