ಕಲ್ಬುರ್ಗಿಯಲ್ಲಿ ಗುರುವಂದನಾ : ಸಂಸ್ಕಾರಯುತ ಶಿಕ್ಷಣದ ವೃತ್ತಿ ರಾಷ್ಟ್ರೀಯ ಭಾವ ಮೂಡಿಸಲು ಶಿಕ್ಷಕರಿಗೆ ಸಲಹೆ

ನಾವು ಪಡೆಯುವ ಶಿಕ್ಷಣ ಕೇವಲ ಮಾಹಿತಿಯನ್ನು ಮಾತ್ರ ಒದಗಿಸುತ್ತಿದ್ದು, ನಮ್ಮಲ್ಲಿ ಶ್ರದ್ದೆ, ಆತ್ಮವಿಶ್ವಾಸ, ಉತ್ಸಾಹ ಹಾಗೂ ಘನತೆ ಹೆಚ್ಚಿಸಲು ಕಾರಣವಾಗಬೇಕು. ಶಿಕ್ಷಕರಾದವರು ವೃತ್ತಿ ನೈಪುಣ್ಯತೆ ಜೊತೆ ಸಂಸ್ಕಾರಯುತ ರಾಷ್ಟ್ರೀಯ ಮನೋಭಾವ ಬೆಳೆಸಿಕೊಳ್ಳಿಸಿಕೊಳ್ಳುವಂತಹ ಶಿಕ್ಷಣ ನೀಡುವಂತಾಗಬೇಕು ಎಂದು ನೂತನ ವಿದ್ಯಾಲಯ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಸುರೇಶ ಹೇರೂರ ಸಲಹೆ ನೀಡಿದರು.

ನಗರದ ನಳಂದ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಗುರುವಂದನಾ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

Kalburgi-guruvandana

ಮಾಧ್ಯಮಿಕ ಶಿಕ್ಷಕ ಸಂಘವು ಶಿಕ್ಷಕರಲ್ಲಿ ವೃತ್ತಿ ನಿಷ್ಠೆ ಹಾಗೂ ಘನತೆಗಳನ್ನು ಜಾಗೃತಗೊಳಿಸಿ ಅವರಲ್ಲಿ ಕರ್ತವ್ಯ ಪ್ರಜ್ಞೆ ಹೆಚ್ಚಿನ ಜ್ಞಾನ ಗಳಿಸುವ ಹಂಬಲ ಮಕ್ಕಳ ಬಗ್ಗೆ ಆತ್ಮೀಯತೆ ಭಾವನೆಯನ್ನು ಮೂಡಿಸಲು ಸತತವಾಗಿ ಪ್ರಯತ್ನಿಸುತ್ತಿದೆ. ಶಿಕ್ಷಕರನ್ನು ಸರಿಪಡಿಸಿದರೆ ಸಮಾಜವು ತಾನೇ ಸರಿಯಾಗುತ್ತದೆ ವೈಯಕ್ತಿಕ ಹಿತದೊಂದಿಗೆ ರಾಷ್ಟ್ರಹಿತವು ಸುರಕ್ಷಿತವಾಗುತ್ತದೆ.

ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಯಳಸಂಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಾಧ್ಯಮಿಕ ಶಿಕ್ಷಕ ಸಂಘವು ಶಿಕ್ಷಕರ ಹಾಗೂ ಶಿಕ್ಷಣ ಕೇತ್ರದ ಬೇಡಿಕೆಗಳಿಗಷ್ಟೆ ಹೋರಾಟ ಮಾಡದೆ ಸಮಾಜದಲ್ಲಿ ಶಿಕ್ಷಕರಿಗೆ ಗೌರವ ಸಮ್ಮಾನ ಸಿಗುವಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸತತ ಪ್ರಯತ್ನಶೀಲವಾಗಿದೆ. ಗುರುಗಳ ತ್ಯಾಗಮಯ ಜೀವನ ಅನುಕರಣಿಯ ಆಚಾರ ವಿಚಾರಗಳಿಂದ ಸಮಾಜದಲ್ಲಿ ಶ್ರೇಷ್ಠ ಣಾಗರೀಕರ ನಿರ್ಮಾಣ ವಾಗಿದೆ. ಈ ಕಾರಣದಿಂದಲೇ ಪುರಾತನ ಪರಂಪರೆಯನ್ನಯ ಸ್ಮರಿಸುತ್ತ ಮಹರ್ಷಿ ವೇದವ್ಯಾಸರ ಪ್ರೇರಣಾದಾಯಕ ಜೀವನವನ್ನು ಗಮನಿಸಿ ವರ್ತಮಾನದಲ್ಲಿ ಭಾರತೀಯ ಪರಂಪರೆಯನ್ನು ನಿರ್ಮಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ.

ಶಿಕ್ಷಕರಿಗಾಗಿ ಶಿಕ್ಷರಿಂದಲೇ ನಡೆಸಲ್ಪಡುವ ಶಿಕ್ಷಕ ಸಮಾಚಾರ ಪತ್ರಿಕ ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಸದಸ್ಯತ್ವಕ್ಕೆ ವಿಭಾಗ ಪ್ರಮುಖ ಮಹೇಶ ಬಸರಕೋಡ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಿವಲಿಂಗಪ್ಪ ಮೂಲಗೆ, ಎಸ್ ಬಿ ಸ್ವಾಮಿ, ಕೆ. ಬಸವರಾಜ, ಚಂದ್ರಶೇಖರ ಗೋಸಾಲ, ಕೆ. ಬಸವರಾಜ, ಮಡಿವಾಳಪ್ಪ ಬಿರಾದಾರ, ಮಹೇಶ, ಪ್ರಭುಲಿಂಗ ಮುಲಗೆ ಮುಂತಾದವರು ಹಾಜರಿದ್ದರು ಶಿಕ್ಷಕ ಶಿವಶರಣ ರುದನೂರ ಸ್ವಾಗತಿಸಿದರು. ವಿಭಾಗ ಪ್ರಮುಖ ಮಹೇಶ ದೇವಣಿ ವಂದಿಸಿದರು. ಸಂಜೀವಕುಮಾರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin