ವಿಷಯ ಪುನಃಶ್ಚೇತನ ಕಾರ್ಯಾಗಾರ

ದಿನಾಂಕ 30-11-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕದ ವತಿಯಿಂದ ಒಂದು ದಿನದ ಗಣಿತ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಎಸ್.ವಿ.ಎನ್. ಆಂಗ್ಲಶಾಲೆ, ನಾಗವಾರ ಇಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಸಂಘದ ಪೋಷಕರಾದ ಕೃ. ನರಹರಿಯವರು ಉದ್ಘಾಟಿಸಿ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇಂತಹ ಪುನಶ್ಚೇತನ ಕಾರ್ಯಾಗಾರಗಳು ಸಹಕಾರಿಯಾಗಲಿ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಎಸ್.ವಿ.ಎನ್. ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಯವರಾದ ಶ್ರೀ ಸುಬ್ಬರಾಜುರವರು ವಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಎಸ್. ಜಿ. ತಾಂಬೆರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿಷಯ ತಜ್ಞರಾದ ಶ್ರೀ ಸುಬ್ರಮಣಿಯವರು ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಮಧ್ಯಾಹ್ನದ ಅವಧಿಯನ್ನು ಸಮಾಜ ಸೇವಕರು, ಮಾಜಿ ಶಾಸಕರು ಆದ ರಾಜಣ್ಣನವರು ಭಾಗವಹಿಸಿ ನೈಸರ್ಗಿಕ ಆಹಾರ ಪದ್ಧತಿಯಿಂದ ದೊರೆಯುವ ಅನುಕೂಲಗಳು ಮತ್ತು ಮಾತೆಯರ ಪಾತ್ರದ ಬಗ್ಗೆ ಶಿಕ್ಷಕರಿಗೆ ಬಹುಸುಂದರವಾಗಿ ವಿವರಿಸಿದರು. ಮಕ್ಕಳ ಬೆಳವಣಿಗೆ ಮತ್ತು ಅವರು ಕಲಿಕೆಯ ಆಸಕ್ತಿ ಉಂಟುಮಾಡುವಲ್ಲಿ ಗಮನಿಸಬೇಕಾದ ಅಂಶವನ್ನು ತಿಳಿಸಿದರು.

ಸಂಜೆ ೪ ಗಂಟೆಗೆ ಸಮಾರೋಪ ನಡೆಸಲಾಯಿತು. ಕಾರ್ಯಾಗಾರದಲ್ಲಿ ಅನುದಾನಿತ, ಸರ್ಕಾರಿ, ಅನುದಾನ ರಹಿತ ಶಾಲೆಯ ಸುಮಾರು ೭೦ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿವಕುಮಾರ ಸ್ವಾಮಿ ನಡೆಸಿಕೊಟ್ಟರು. ಶ್ರೀ ಗಂಗಪ್ಪ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಹಾಗೂ ಖಜಾಂಚಿಗಳಾದ ಶ್ರೀ ಹರಿದಾಸ್ ಉಪಸ್ಥಿತರಿದ್ದರು.

ವರದಿ : ಶ್ರೀ ಗಂಗಪ್ಪ

Highslide for Wordpress Plugin