ಗುರುವಂದನಾ ಕಾರ್ಯಕ್ರಮ – ಬೆಳಗಾವಿ

ನಗರದ ಬಿ.ಕೆ ಮಾಡಲ್ ಪ್ರೌಢಶಾಲೆಯ ಸಭಾಂಗಣದಲ್ಲಿ 5-8-2021 ರಂದು ಬೆಳಗಾವಿ ಜಿಲ್ಲೆ ಹಾಗೂ ನಗರ ವತಿಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಖಜಾನೆಯ ಸಹ-ನಿರ್ದೇಶಕರಾದ ಶ್ರಿ.ಎಸ್.ವಿ ಹಲ್ಯಾಳ ಹಾಗೂ ಶ್ರೀ ರವಿ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಗರವಲಯ ಬೆಳಗಾವಿ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾದ ಶ್ರೀ ವಿಶ್ವಜೀತ ಹಸಬೆಯವರು ವಹಿಸಿದ್ದರು. ಬೌದ್ಧಿಕ ಮಾರ್ಗದರ್ಶಕರಾಗಿ ಶ್ರೀ ಪರಮೇಶ್ವರಜಿ ಹೆಗಡೆ, ಅಧ್ಯಕ್ಷರು ವಿದ್ಯಾಭಾರತಿ, ಕರ್ನಾಟಕ ರಾಜ್ಯ, ಶ್ರೀ ಆರ್.ಪಿ ವಂಟಗುಡಿ, ರಾಜ್ಯ ಕಾರ್ಯದರ್ಶಿಗಳು, ಶ್ರೀಮತಿ ಎಸ್.ಎ.ಚಾಟೆ ಪ್ರಭಾರಿ ಮುಖ್ಯೋಪಾಧ್ಯಪಕಿ, ಶ್ರೀ ಉಮೇಶ್ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿಗಳು, ಶ್ರೀ ಸಂಜೀವ ಕೋಷಿ, ನಗರ ಅಧ್ಯಕ್ಷರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮವು ಶ್ರೀಮತಿ ವೀಣಾ ಪಾಟೀಲ ಅವರ ಸರಸ್ವತಿಯ ಗೀತೆಯೊಂದಿಗೆ ಪ್ರಾರಂಭವಾಯಿತು. ಪ್ರ್ರಾಸ್ತಾವಿಕ ಭಾಷಣ ಉಮೇಶ್ ಕುಲಕರ್ಣಿಯವರು ಮಾಡಿದರು. ಅತಿಥಿಗಳಿಗೆ ವಿಶ್ವಾಸ ಗಾವಡೆಯವರು ಸ್ವಾಗತ ಕೋರಿದರು. ಸುರೇಶ ಕಲ್ಲೇಕರ್ ಅವರು ಅತಿಥಿಗಳ ಪರಿಚಯ ಮಾಡಿದರು. ಗುರುವ್ಯಾಸರ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಗಣ್ಯರಿಂದ ಪೂಜೆ ಸಲ್ಲಿಸಲಾಯಿತು. ಆರ್.ಪಿ ವಂಟಗುಡಿಯವರು ಅತಿಥಿಗಳಿಗೆ ಪುಷ್ಪ ನೀಡಿ ಸತ್ಕರಿಸಿದರು. ಶ್ರೀ ಪರಮೇಶ್ವರಜಿ ಹೆಗಡೆಯವರು ಬೌದ್ಧಿಕ ನುಡಿಗಳಲ್ಲಿ ಪ್ರಾಚೀನ ಕಾಲದ ವೇದ ಉಪನಿಷತ್ತ್ತುಗಳನ್ವಯ ಗುರುಕುಲಗಳಲ್ಲಿ ಗುರುಗಳ ಮಹತ್ವ ಹೇಗಿತ್ತು? ಎಂಬುದರ ಕುರಿತು ಮಾತನಾಡಿದರು. ಶ್ರೀ ಎಸ್.ವಿ ಹಲ್ಯಾಳ ಅವರು ಸಂತ ಶಿಶುನಾಳ ಶರೀಫ ಸಾಹೇಬರ ಹಾಗೂ ಗುರುಗೋವಿಂದ ಭಟ್ಟರ ಸಂಬಂಧ ಹೇಗೆ ಅನನ್ಯವಾಗಿತ್ತು? ಎಂಬುದರ ಕುರಿತು ಮಾತನಾಡುತ್ತ, ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡಬೇಕಾಗಿರುವ ಅವಶ್ಯಕತೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀ ರವಿ ಭಜಂತ್ರಿ ಅವರು ಸಮಾಜ ಸುಧಾರಣೆಗೆ ಗುರುಗಳ ಪಾತ್ರದ ಕುರಿತು ಮಾತನಾಡಿದರು. ಅಧ್ಯಕ್ಷರ ಭಾಷಣದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾಧ್ಯಕ್ಷರಾದ ಆರ್.ಆರ್ ಕುಡತುರಕರ, ಜಿಲ್ಲಾ ಘಟಕ, ನಗರ ಘಟಕದ ಪದಾಧಿಕಾರಿಗಳು ಸೇರಿದಂತೆ ನಗರದ 120 ಶಿಕ್ಷಕರು ಹಾಜರಿದ್ದರು. ಕಾರ್ಯಕ್ರಮವನ್ನು ಶ್ರೀ ರಾಮಚಂದ್ರ ಭಟ್ಟರವರು ನಿರೂಪಿಸಿದರು. ಶ್ರೀ ಎಂ.ಬಿ ಅಂಗಡಿಯವರು ವಂದನಾರ್ಪಣೆ ಸಲ್ಲಿಸಿದರು.

Highslide for Wordpress Plugin