ಯು.ಜಿ.ಸಿ ಕಾರ್ಯದರ್ಶಿಗಳಾದ ಡಾ. ರಜನೀಶ್ ಜೈನ್ ಅವರಿಗೆ ಕೆ.ಆರ್.ಎಂ.ಎಸ್.ಎಸ್ ಮನವಿ

ಹುಬ್ಬಳ್ಳಿ/ದೆಹಲಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಡಾ. ರಘು ಅಕಮಂಚಿಯವರು ಇಂದು ಯು.ಜಿ.ಸಿ ಕಾರ್ಯದರ್ಶಿಗಳಾದ ಡಾ. ರಜನೀಶ್ ಜೈನ್ ರವರಿಗೆ ಯು.ಜಿ.ಸಿಗೆ ಸಂಬಂಧಪಟ್ಟ ಶಿಕ್ಷಕರ ಬೇಡಿಕೆಗಳ ಕುರಿತು ಮಾತುಕತೆ ನಡೆಸಿ ಮನವಿ ಅರ್ಪಿಸಿದರು.

ಸಹ ಪ್ರಾಧ್ಯಾಪಕರಿಂದ, ಸಹಾಯಕ ಪ್ರಾಧ್ಯಾಪಕರಾಗಿ ಪದೋನ್ನತಿಗೆ ಇರುವ ಯು.ಜಿ.ಸಿ 2018 ನ 6.3 ನಿಯಮದಲ್ಲಿ ತಿದ್ದುಪಡಿ ತಂದು, 2021 ರಿಂದ 2025 ರವರೆಗೆ ಪದೋನ್ನತಿಗೆ ಇರುವ ಷರತ್ತನ್ನು ವಿನಾಯಿತಿಯ ಮನವಿಗೆ ಸ್ಪಂದಿಸಿದ ಕಾರ್ಯದರ್ಶಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಅಧ್ಯಾಪಕರು ಸಂಶೋಧನೆಗೆ ತೊಡಗಲು ಹಿಂದೆ ಇದ್ದ ಎಫ್.ಡಿ.ಪಿ ಪ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ ಅನ್ನು ಪುನಃ ಪ್ರಾರಂಭಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗಾಗಿ ಯು.ಜಿ.ಸಿ ಮಾರ್ಗಸೂಚಿಗಳನ್ನು ಹಾಗೂ ನಡಾವಳಿಗಳನ್ನು ಅತೀ ಶಿಘ್ರ ಬಿಡುಗಡೆ ಮಾಡಬೇಕೆಂದು ಕೂಡಾ ಮನವಿ ಮಾಡಿಕೊಂಡರು.

ಕಾಲೇಜು ಅಧ್ಯಾಪಕರು ಕೂಡಾ ಸಂಶೋಧನಾ ಮಾರ್ಗದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲು ವಿಶ್ವವಿದ್ಯಾಲಯಗಳಿಗೆ ಸೂಚಿಸಬೇಕೆಂದು ಕೇಳಿಕೊಂಡರು.

ರಜಾದಿನವಾಗಿದ್ದರೂ ಕೂಡ 45 ನಿಮಿಷಗಳ ಕಾಲ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ನಮ್ಮ ಮನವಿ ಈಡೇರಿಸಲು ಭರವಸೆ ನೀಡಿದ ಯು.ಜಿ.ಸಿ ನವದೆಹಲಿ ಕಾರ್ಯದರ್ಶಿಗಳು ಆದ ಡಾ. ರಜನೀಶ್ ಜೈನ್ ಇವರಿಗೆ ಕೆ.ಆರ್.ಎಂ.ಎಸ್.ಎಸ್ ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಧನ್ಯವಾದಗಳನ್ನು ಸಮರ್ಪಿಸಿದೆ.

ನಿಯೋಗದಲ್ಲಿ ಕರ್ನಾಟಕ ರಾಜ್ಯ ಮಾದ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ ಮತ್ತು ಕಾರ್ಯದರ್ಶಿಗಳಾದ ಚಿದಾನಂದ ಪಾಟೀಲ ಉಪಸ್ಥಿತರಿದ್ದರು.

Highslide for Wordpress Plugin