ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಶಿಕ್ಷಕ ಸಮ್ಮಾನ – ಒಂದು ವರದಿ

ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವಯುತವಾದದ್ದು ಎಂದು ಹಿಮಾಚಲ ಪ್ರದೇಶದ ಶಿಮ್ಲಾ (ಕುಫ್ರಿ)ದಲ್ಲಿ 19, ಡಿಸೆಂಬರ್, 2021 ರಂದು ನಡೆದ ಶಿಕ್ಷಕ ಸಮ್ಮಾನ ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ಬೋಧಕರಾದ ಸ್ವಾಮಿ ಜ್ಞಾನಾನಂದ ಜಿ ಮಹಾರಾಜ್‌ರು ಹೇಳಿದರು. ಕಾರ್ಯಕ್ರಮದಲ್ಲಿ ಹಿಮಾಚಲದ ಪ್ರದೇಶದ ಮುಖ್ಯಮಂತ್ರಿಗಳಾದ ಜೈರಾಮ್ ಠಾಕೂರ್ ಭಾಗವಹಿಸಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಮೂವರು ಶಿಕ್ಷಣ ತಜ್ಞರಿಗೆ ಅವರು ಶಿಕ್ಷಾ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ABRSM) 2015 ರಿಂದ ಪ್ರತಿ ವರ್ಷ “ಶಿಕ್ಷಾ ಭೂಷಣ ಪ್ರಶಸ್ತಿ” ಯೊಂದಿಗೆ ಅಂತಹ ಖ್ಯಾತ ಶಿಕ್ಷಣತಜ್ಞರನ್ನು ಗೌರವಿಸುತ್ತಿದೆ.

ಪ್ರೊ. ಕಪಿಲ್ ಕಪೂರ್, ಅಧ್ಯಕ್ಷರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ, ಶಿಮ್ಲಾ, ಹಿರಿಯ ಶಿಕ್ಷಣತಜ್ಞ ಮತ್ತು ಕವಿಗಳಾದ ಡಾ. ಬದ್ರಿ ಪ್ರಸಾದ್ ಪಾಂಚೋಲಿ, ಲೇಖಕಿ ಮತ್ತು ಶಿಕ್ಷಣ ತಜ್ಞೆ ಮತ್ತು ಪ್ರಮುಖ ಸಮಾಜ ಸೇವಕಿ ಆದ ಶ್ರೀಮತಿ ರೇಣು ದಾಂಡೇಕರ್ ರವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ಪ್ರಶಸ್ತಿಗೆ ರೂ. 1 ಲಕ್ಷ, ಮತ್ತು ಸಿಲ್ವರ್ ಪ್ಲೇಟ್ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗಿದೆ.

ಪ್ರೊ. ಕಪಿಲ್ ಕಪೂರ್ ಅವರು ಜಾಗತಿಕವಾಗಿ ಮೆಚ್ಚುಗೆ ಪಡೆದ ಶಿಕ್ಷಣತಜ್ಞರಾಗಿದ್ದಾರೆ ಮತ್ತು ಅವರ ಬೋಧನಾ ಕೃತಿಗಳು, ಪ್ರಕಟಣೆಗಳು ಮತ್ತು ಸಂಶೋಧನೆಗಳು ಅವರನ್ನು ಸಮೃದ್ಧ ಬರಹಗಾರ ಮತ್ತು ಅತ್ಯುತ್ತಮ ಸಂಶೋಧಕರನ್ನಾಗಿ ಮಾಡಿದೆ. ಹಲವಾರು ಸಂಸ್ಥೆಗಳು ಅವರನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಿವೆ. ಪ್ರೊ. ಕಪೂರ್‌ರವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಮಿತಿಗಳ ಸದಸ್ಯರೂ ಕೂಡ ಆಗಿದ್ದಾರೆ.

ಡಾ. ಬದ್ರಿ ಪ್ರಸಾದ್ ಪಾಂಚೋಲಿ ಅವರು ಶಿಕ್ಷಣ ತಜ್ಞರು, ಕವಿ, ನಾಟಕಕಾರರು, ಪತ್ರಕರ್ತರು, ಭಾಷಾ ವಿಜ್ಞಾನಿಯಾಗಿ ಮತ್ತು ಸಾಮಾಜಿಕ ಚಿಂತಕರಾಗಿದ್ದಾರೆ, ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿದ ಅತ್ಯುತ್ತಮ ಕೊಡುಗೆಗಾಗಿ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಅವರಿಗೆ ಪ್ರಶಸ್ತಿ ಲಭಿಸಿವೆ. ಅವರು ಇತ್ತೀಚೆಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ದೀನದಯಾಳ್ ಉಪಾಧ್ಯಾಯ, ಹಿಂದಿ ಸೇವಾ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀಮತಿ ರೇಣು ದಾಂಡೇಕರ್ ಅವರು ಲೋಕಮಾನ್ಯ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಚಿಖಲ್ ಗಾಂವ್ ಅಧ್ಯಕ್ಷರಾಗಿದ್ದಾರೆ. ಒಬ್ಬ ಸಮೃದ್ಧ ಬರಹಗಾರರು, ಸಮಾಜ ಸೇವಕಿ ಮತ್ತು ಚಾಣಾಕ್ಷ ಶಿಕ್ಷಕರಾಗಿದ್ದು, ಶ್ರೀಮತಿ ದಾಂಡೇಕರ್ ಅವರು ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ ಹಲವಾರು ಸಂಸ್ಥೆಗಳಿಗೆ ಗೌರವ ಮತ್ತು ಪ್ರಶಸ್ತಿಯನ್ನು ಪಡೆದಿದ್ದಾರೆ.

ಭಗವದ್ಗೀತೆಯ ಕುರಿತು ತಂತ್ರಜ್ಞಾನ ಮತ್ತು ಸಂಶೋಧನೆಗಳನ್ನು ಜನಪ್ರಿಯಗೊಳಿಸುವುದಕ್ಕೆ ಹೆಸರುವಾಸಿಯಾದ ಸ್ವಾಮಿ ಜ್ಞಾನಾನಂದ ಜಿ ಮಹಾರಾಜ್ ಅವರು ಸಭಿಕರನ್ನು ಮತ್ತು ಶಿಕ್ಷಾ ಭೂಷಣ ಪ್ರಶಸ್ತಿ ಪುರಸ್ಕೃತರನ್ನು ಆಶೀರ್ವದಿಸಿದರು. ಜ್ಞಾನಾನಂದ ಜಿ ಮಹಾರಾಜ್ ಅವರು ನಮ್ಮ ವೈಯಕ್ತಿಕ ಜೀವನದಲ್ಲಿ ಶುದ್ಧತೆಯನ್ನು ತರಬೇಕೆಂದು ಹೇಳಿದರು ಮತ್ತು ಆಧ್ಯಾತ್ಮಿಕ ಮತ್ತು ನೈತಿಕ ಬೆಳವಣಿಗೆಗಾಗಿ ಪ್ರಸ್ತುತ ಯುಗದಲ್ಲಿ ನಾವೆಲ್ಲ ಪ್ರಯತ್ನಿಸಬೇಕೆಂದು ಕೇಳಿಕೊಂಡರು.

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀಯುತ ಜೈರಾಮ್ ಠಾಕೂರ್‌ರವರು, ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುವುದು ಮಾತ್ರವಲ್ಲದೆ ಸಮಾಜ ಸುಧಾರಣೆಗಳನ್ನು ತರುವಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಅನುಕರಣೀಯ ಸಾಧನೆಗಾಗಿ ಶಿಕ್ಷಾ ಭೂಷಣ ಪ್ರಶಸ್ತಿ ಪುರಸ್ಕೃತರನ್ನು ಅವರು ಶ್ಲಾಘಿಸಿದರು.

ಪ್ರಸ್ತುತ ಯುಗದಲ್ಲಿ ಪ್ರತಿಯೊಬ್ಬರೂ ಶಿಕ್ಷಣದ ಆಧುನೀಕರಣಕ್ಕೆ ಒತ್ತು ನೀಡುತ್ತಿದ್ದಾರೆ, ಆದರೆ ಅವರಾರು ಹಿಂದಿನ ಇತಿಹಾಸದಿಂದ ಏನನ್ನು ಕಲಿಯುತ್ತಿಲ್ಲ. ನಮ್ಮ ಭವಿಷ್ಯಕ್ಕಾಗಿ ಬಲವಾದ ಅಡಿಪಾಯವನ್ನು ನಿರ್ಮಿಸಲು ನಾವು ನಮ್ಮ ಹೆಮ್ಮೆಯ ಇತಿಹಾಸದಿಂದ ಕಲಿಯಬೇಕಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉನ್ನತಿ ಮತ್ತು ಸುಧಾರಣೆಗಳಿಗಾಗಿ ಕೆಲಸ ಮಾಡುತ್ತಿರುವ ABRSM ನ ಪಾತ್ರವನ್ನು ಶ್ಲಾಘಿಸಿದರು. ಎಬಿಆರ್‌ಎಸ್‌ಎಂ ಶಿಕ್ಷಣ ವ್ಯವಸ್ಥೆಯನ್ನು ಅರ್ಥಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ನೀತಿ ನಿರೂಪಣೆಯಲ್ಲಿ ಸರ್ಕಾರಗಳಿಗೆ ನಿಜವಾದ ಸಲಹೆಗಳನ್ನು ನೀಡುತ್ತದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಹೇಳಿದರು.

ಸ್ವಾಮಿ ಜ್ಞಾನಾನಂದ ಜೀ ಮಹಾರಾಜರ ಸಾಂಪ್ರದಾಯಿಕ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು ಮತ್ತು ಮುಖ್ಯ ಅತಿಥಿ ಶ್ರೀ ಜೈರಾಮ್ ಠಾಕೂರ್, ABRSM ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಹೆಂದ್ರ ಕಪೂರ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ABRSM ನ ವಿವಿಧ ಚಟುವಟಿಕೆಗಳು ಮತ್ತು ಶಿಕ್ಷಾ ಭೂಷಣ ಪ್ರಶಸ್ತಿಯ ಹಿಂದಿನ ಮುಖ್ಯ ಉದ್ದೇಶದ ಕುರಿತು ಮಾತನಾಡಿದರು.

ABRSM ನ ರಾಷ್ಟ್ರೀಯ ಅಧ್ಯಕ್ಷರಾದ ಪ್ರೊ. ಜೆ.ಪಿ ಸಿಂಘಾಲ್ ಅವರು ABRSM ನ ಚಟುವಟಿಕೆಗಳನ್ನು ಮತ್ತು ಅದರ ಸಾಂಸ್ಕೃತಿಕ ಪರಂಪರೆ ಮತ್ತು ಹೆಮ್ಮೆಯೊಂದಿಗೆ ಅಂತಿಮವಾಗಿ ಭಾರತೀಯರನ್ನು ಸಂಪರ್ಕಿಸುವ ಗುಣಮಟ್ಟದ ಶಿಕ್ಷಣವನ್ನು ತರುವಲ್ಲಿ ಅದರ ಧ್ಯೇಯವನ್ನು ಅವರು ತಿಳಿಸಿದರು.

ಸಮಾಜದಲ್ಲಿ ಸವಾಂಗೀಣ ಬದಲಾವಣೆ ತರುವ ಪ್ರಮುಖ ವ್ಯಕ್ತಿಗಳು ಶಿಕ್ಷಕರು ಎಂದು ಹೇಳಿದರು. ಕಾರ್ಯಕ್ರಮವನ್ನು ಡಾ. ನಾರಾಯಣ್ ಲಾಲ್ ಗುಪ್ತಾ ನಡೆಸಿಕೊಟ್ಟರು ಮತ್ತು ವಂದನಾರ್ಪಣೆಯನ್ನು ಪವನ್ ಮಿಶ್ರಾ ಸಲ್ಲಿಸಿದರು. ದೇಶದ ವಿವಿಧ ರಾಜ್ಯಗಳ ಶಿಕ್ಷಕರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹಿಮಾಚಲ ಪ್ರದೇಶ ಶಿಕ್ಷಕ ಮಹಾಸಂಘ ಸಂಘಟಿಸಿತ್ತು.

ಎಬಿಆರ್‌ಎಸ್‌ಎಮ್‌ನ ಕೇಂದ್ರೀಯ ಕಾರ್‍ಯಕರ್ತ ಬೈಠಕ್
ಶಿಮ್ಲಾದ ಕುಫ್ರಿಯಲ್ಲಿ 2021 ರ ಡಿಸೆಂಬರ್‌  17 ಮತ್ತು 18 ರಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಕೇಂದ್ರಿಯ ಕಾರ್‍ಯಕರ್ತ ಬೈಠಕ್ ನಡೆಯಿತು. ದೇಶದ ವಿವಿಧ ಭಾಗಗಳಿಂದ ಎಬಿಆರ್‌ಎಸ್‌ಎಮ್­ನ ಅಖಿಲ ಭಾರತೀಯ ಪದಾಧಿಕಾರಿಗಳು ಭಾಗವಹಿಸಿದ್ದರು. ಎರಡು ದಿನ ನಡೆದ ಬೈಠಕ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶ್ರೀಯುತ ಸುನೀಲ್ ಬಾಯಿ ಮೆಹೆತಾಜೀ ಅವರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಮಹಾಸಂಘದ ಯೋಜನೆಗಳ ಬಗ್ಗೆ, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು. ಈ ಕೇಂದ್ರಿಯ ಕಾರ್‍ಯಕರ್ತ ಬೈಠಕ್‌ನಲ್ಲಿ ಎಬಿಆರ್‌ಎಸ್‌ಎಮ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರಾರವರು ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಡಿ.ಕೆ ರವರು ಕರ್ನಾಟಕದಿಂದ ಭಾಗವಹಿಸಿದ್ದರು.

Highslide for Wordpress Plugin