ವಿವಿಧೆಡೆಗಳಲ್ಲಿ ಆಂಗ್ಲ ಭಾಷೆ ತರಬೇತಿ ಕಾರ್ಯಕ್ರಮ

ಆಂಗ್ಲ ಭಾಷೆ ಪಾಸಿಂಗ್ ಪ್ಯಾಕೇಜ್ ಕಾರ್ಯಕ್ರಮ
ದಿನಾಂಕ 30-3-2022 ರಂದು ಮಾಧ್ಯಮಿಕ ಶಿಕ್ಷಕ ಸಂಘ, ಸರ್ಕಾರಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘ ಹರಪನಹಳ್ಳಿ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಪಿಯುಸಿ ಮಕ್ಕಳಿಗೆ ಒಂದು ದಿನದ ಆಂಗ್ಲ ಭಾಷೆಯ ಬಗ್ಗೆ ಪಾಸಿಂಗ್ ಪ್ಯಾಕೇಜ್ ಕಾರ್ಯಕ್ರಮದಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬಂಗಿ ಬಸಪ್ಪ ಕಾಲೇಜ್, ಹರಪನಳ್ಳಿಯ ಶ್ರೀ ಅರುಣ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಆರ್ ಕೊಟ್ರಪ್ಪ, ರಾಜ್ಯ ಉಪಾಧ್ಯಕ್ಷರು ಕರಾಮಾಶಿ ಸಂಘ, ಭಾಗವಹಿಸಿದ್ದರು. ಶ್ರೀ ಬಿ ಚನ್ನಬಸಪ್ಪ ಅಧ್ಯಕ್ಷರು, ಹರಪನಹಳ್ಳಿ ತಾಲೂಕು ಉಪನ್ಯಾಸಕರ ಸಂಘ ಹಾಗು ಇನ್ನಿತರ ಶಿಕ್ಷಕರು ಭಾಗವಹಿಸಿದ್ದರು.

ಆಂಗ್ಲ ಭಾಷೆ ತರಬೇತಿ ಕಾರ್ಯಕ್ರಮ
ದಿನಾಂಕ 25-3-2022 ರಂದು ಮಾಧ್ಯಮಿಕ ಶಿಕ್ಷಕ ಸಂಘ ಹಾಗು ವಿ ವಿ ಸಂಘದ ವಿಜಯನಗರ ಮಹಾವಿದ್ಯಾಲಯ ಕಾಲೇಜ್, ಮುನಿರಾಬಾದ, ಕೊಪ್ಪಳ ಜಿಲ್ಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಬಗ್ಗೆ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಅನ್ನು ಬಹಳ ಸುಲಭವಾಗಿ ಅರ್ಥವಾಗುವಂತೆ ತಿಳಿಸಲಾಯಿತು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀ ಬಸವರಾಜ, ಕ.ರಾ.ಮಾ.ಶಿ.ಸಂಘದ ಉಪಾಧ್ಯಕ್ಷರಾದ ಶ್ರೀ ಕೊಟ್ರಪ್ಪ ಆರ್, ರವಿ, ವೀರೇಂದ್ರ, ಮಾತಾಜಿ, ಗುರೂಜಿ ಉಪಸ್ಥಿತರಿದ್ದರು. ಶ್ರೀ ಜಂಬುನಾಥ ವೂಗ್ಗ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಒಟ್ಟು 75 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

Highslide for Wordpress Plugin