ಮಾಧ್ಯಮಿಕ ಶಿಕ್ಷಕ ಸಂಘದ ಮನವಿಗೆ ಸ್ಪಂದಿಸಿದ ಡಿಡಿಪಿಐ

ಸರ್ಕಾರಿ ಪ್ರೌಢಶಾಲಾ ಶಿಕ್ಷಕರು 10, 15, 20, 25 ಮತ್ತು 30 ವರ್ಷ ಸೇವೆ ಪೂರೈಸಿದ ಶಿಕ್ಷಕರಿಗೆ ನೀಡುವ ವಿಶೇಷ ವೇತನ ಬಡ್ತಿಗಳನ್ನು ಮಂಜೂರಿಸಲು ಹಿಂದಿನ 5 ವರ್ಷದ ಸೇವಾವಧಿಯ ಕಾರ್ಯನಿರ್ವಹಣಾ ವರದಿಗಳನ್ನು ಕೇಳಲಾಗುತ್ತಿದ್ದು, ಈ ವರದಿಗಳನ್ನು ಲಭ್ಯ ಪಡಿಸುವಾಗ ಅಧಿಕಾರಿಗಳ ವರ್ಗಾವಣೆ ನಿವೃತ್ತಿ ಕಾರಣದಿಂದ ಶಿಕ್ಷಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಆಯುಕ್ತರ ಕಚೇರಿಯ ನಿರ್ದೇಶಕರು (ಪ್ರೌಢಶಿಕ್ಷಣ ವಿಭಾಗ)ರವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮೂಲ ಸೇವಾ ಪುಸ್ತಕ ನೋಡಿ ಈ ವರದಿ ಸಲ್ಲಿಸಲು ತಿಳಿಸಿರುವುದರಿಂದ ವಿಶೇಷ ರಹಸ್ಯ ವರದಿ (ವಿಶೇಷ ದೃಢೀಕರಣ ಪ್ರಮಾಣ ಪತ್ರ) ಯ ಆಧಾರದ ಮೇಲೆ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ವೇತನ ಬಡ್ತಿಗಳನ್ನು ಮಂಜೂರಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಿಸುವಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಮನವಿಗೆ ತಕ್ಷಣವೇ ಸ್ಪಂದಿಸಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಶೋಕ ಭಜಂತ್ರಿ ರವರು ಈ ಕುರಿತು ಸೂಕ್ತ ಕ್ರಮವಹಿಸಿ 2-3 ದಿನಗಳಲ್ಲಿ ಶಿಕ್ಷಕರಿಗೆ ತೊಂದರೆ ಆಗದಂತೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ವಿಭಾಗ ಪ್ರಮುಖ ಶ್ರೀಮಹೇಶ್ ಬಸರಕೋಡ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಾಟೀಲ್ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ಪಾಟೀಲ್ ಉಪಾಧ್ಯಕ್ಷ ಚಂದ್ರಶೇಖರ್ ಗೋಸಾಲ್ ಶಂಕರಲಿಂಗ ಕಲ ಶೆಟ್ಟಿ ಉಪಸ್ಥಿತರಿದ್ದರು.

Highslide for Wordpress Plugin