ಅ. ಭಾ. ರಾ. ಶೈ. ಮಹಾಸಂಘ : ರಾಷ್ಟ್ರೀಯ ಕಾರ್‍ಯಕಾರಿಣಿ ಅಯೋಧ್ಯೆ

ದಿನಾಂಕ 26-06-2022 ಮತ್ತು 27-06-2022 ರ ಎರಡು ದಿನ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಷ್ಟ್ರೀಯ ಕಾರ್‍ಯಕಾರಿಣಿ ಸುಸೂತ್ರವಾಗಿ ನಡೆಯಿತು. 21 ರಾಜ್ಯಗಳಿಂದ ಬಂದ 28 ಸಂಘಟನೆಗಳು ಕಳೆದ ಬಾರಿಯ ರಾಷ್ಟ್ರೀಯ ಕಾರ್‍ಯಕಾರಿಣಿಯಿಂದ ಜೂನ್‌ವರೆಗೆ ತಮ್ಮ ತಮ್ಮ ರಾಜ್ಯಗಳಲ್ಲಿ ನಡೆಸಿರುವ ಕಾರ್ಯಕ್ರಮಗಳ ವರದಿಯನ್ನು ನೀಡಿದರು.

ರಾಷ್ಟ್ರೀಯ ಕಾರ್‍ಯಕಾರಿಣಿಯಲ್ಲಿ ಆಗಸ್ಟ್ ಒಂದನೇ ತಾರೀಖು ಇಡೀ ರಾಷ್ಟ್ರಾದಾದ್ಯಂತ ನಡೆಯುವ ಭಾರತ ಮಾತಾ ಪೂಜನ ಕಾರ್ಯಕ್ರಮದ ಬಗ್ಗೆ ಪೂರ್ಣ ವಿವರಣೆ ನೀಡಿದರು. ಒಂದು ಲಕ್ಷ ಶಾಲೆಗಳನ್ನು ಈ ಕಾರ್ಯಕ್ರಮದ ನಿಮಿತ್ತ ತಲುಪುವ ಗುರಿಯನ್ನು ಎಲ್ಲಾ ಸಂಘಟನೆಗಳು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಇದುವರೆಗೂ ರಾಜ್ಯ ಸಂಘಟನೆಗಳು ಕಾರ್ಯಕ್ರಮದ ನಿಮಿತ್ತ ಮಾಡಿರುವ ತಯಾರಿಯ ಬಗ್ಗೆ ವರದಿ ಪಡೆಯಲಾಯಿತು.

ನವೆಂಬರ್ 11, 12, 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಅಧಿವೇಶನದ ಸ್ಥಳದ ಬಗ್ಗೆ ಹಾಗೂ ಅಧಿವೇಶನದ ವೇಳಾಪಟ್ಟಿಯ ಬಗ್ಗೆ ಸಂಘದ ಸಂಘಟನಾ ಮಂತ್ರಿಯಾಗಿರುವ ಶ್ರೀ ಮಹೇಂದ್ರ ಕಪೂರ್‌ಜೀಯವರು ಸಭೆಗೆ ಮಾಹಿತಿ ನೀಡಿದರು. ಅಧಿವೇಶನದ ಸಂದರ್ಭದಲ್ಲಿ ಶಿಕ್ಷಕ ಸಮ್ಮಾನ ಕಾರ್ಯಕ್ರಮವೂ ನಡೆಯಲಿದ್ದು, ಶಿಕ್ಷಕ ಸಮ್ಮಾನ ಪಡೆಯಲು ಅರ್ಹರಾಗಿರುವ ಶಿಕ್ಷಕರ ಹೆಸರನ್ನು ಜುಲೈ ೧೫ ರ ಒಳಗೆ ಕೇಂದ್ರಕ್ಕೆ ಕಳುಹಿಸಲು ತಿಳಿಸಲಾಯಿತು.

ಕಾರ್‍ಯಕಾರಿಣಿಯಲ್ಲಿ ಸಂವರ್ಗಶಃ ಬೈಠಕ್‌ಗಳನ್ನು ನಡೆಸಲಾಯಿತು. ಸಭೆಯಲ್ಲಿ ವಿದ್ಯಾಲಯ, ಉಚ್ಚ ಶಿಕ್ಷಣವರ್ಗಗಳಲ್ಲಿ ಆಯಾ ರಾಜ್ಯಗಳಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯ ನಂತರ ಕೇಂದ್ರಕ್ಕೆ ಆಯಾ ಸಮಸ್ಯೆಗಳ ಬೇಡಿಕೆಗಳನ್ನು ನೀಡಲು ತೀರ್ಮಾನಿಸಲಾಯಿತು.

ದಿನಾಂಕ 27 ರಂದು ಅಖಿಲ ಭಾರತೀಯ ಶೈಕ್ಷಿಕ ಮಹಾಸಂಘದ ನೊಂದಣಿಯನ್ನು ಪಡೆಯಲು ಮೂರು ಸಂಘಟನೆಗಳು ಆವೇದನೆಯನ್ನು ನೀಡಿದ್ದವು. 1. ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ ಶೈಕ್ಷಿಕ ಸಂಘ, ಶಿಮ್ಲಾ 2. ಡಾ|| ಪಂಜಾಬ್ ರಾವ್ ದೇಶಮುಖ ಕೃಷಿ ವಿದ್ಯಾಪೀಠ ಶೈಕ್ಷಿಕ ಸಂಘ, ಅಕೋಲಾ(ಮಹಾರಾಷ್ಟ್ರ) 3. ಗುಜರಾತ್ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘ. ಸಭೆಯಲ್ಲಿ ಹಾಜರಿದ್ದ ಎಲ್ಲಾ ಪ್ರಮುಖರು ಆವೇದನೆಯನ್ನು ಸ್ವೀಕಾರ ಮಾಡಿ ಸಂಘಟನೆಗಳನ್ನು ನೊಂದಾಯಿಸಿಕೊಂಡರು.

ಅಯೋಧ್ಯೆಯಲ್ಲಿ ಶ್ರೀರಾಮರ ದರ್ಶನವನ್ನು ಭಾಗವಹಿಸಿದ ಎಲ್ಲಾ ರಾಜ್ಯದವರಿಗೂ ಸಂಘಟನೆಯ ವತಿಯಿಂದ ಮಾಡಿಸಲಾಯಿತು. ರಾಜ್ಯದಿಂದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸಹ ಸಂಘಟನಾ ಮಂತ್ರಿಗಳಾದ ಶ್ರೀ ಲಕ್ಷ್ಮಣ್‌ಜೀ, ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಮುಖರಾದ ಶ್ರೀ ಬಾಲಕೃಷ್ಣಭಟ್‌ಜಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರಾಜೀ, ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಡಿ.ಕೆ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್‌ಜೀ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್‌ಜೀ ಹಾಗೂ ಸಹ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಂಗಾಧರಾಚಾರಿಜೀ ಭಾಗವಹಿಸಿದ್ದರು.

ಎರಡು ದಿನ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ 21 ರಾಜ್ಯಗಳಿಂದ ಒಟ್ಟು 98 ಪ್ರಮುಖರು ಭಾಗವಹಿಸಿದ್ದರು.

Highslide for Wordpress Plugin