ಅಭ್ಯಾಸ ವರ್ಗ – ಒಂದು ವರದಿ

ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘ (ರಿ) ಇವರ ಆಶ್ರಯದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವಿಭಾಗದಿಂದ 18-03-2023 ರಂದು ಗಂಗಾವತಿ ತಾಲೂಕಿನ ಶ್ರೀ ರಾಮನಗರದ ವಿದ್ಯಾನಿಕೇತನ ಸಮೂಹ ಸಂಸ್ಥೆಯಲ್ಲಿ ಅಭ್ಯಾಸ ವರ್ಗ ಯಶಸ್ವಿಯಾಗಿ ಜರುಗಿತು.

ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾನಿಕೇತನ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಶ್ರೀನೆಕ್ಕಂಟಿ ಸೂರಿಬಾಬುರವರು “ಅಭ್ಯಾಸ ವರ್ಗಕ್ಕೆ ಅವರ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾ ಅಭ್ಯಾಸ ವರ್ಗಕ್ಕೆ ಆಗಮಿಸಿದ ಎಲ್ಲಾ ಪ್ರಾಧ್ಯಾಪಕರನ್ನೂ ಅಭಿನಂದಿಸಿದರು. ಪ್ರಾಧ್ಯಾಪಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ರಾಷ್ಟ್ರವು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟದಲ್ಲಿ ಕಡಿಮೆ ಇರುವುದನ್ನು ಗಮನಿಸಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಶೈಕ್ಷಣಿಕ ಸೇವೆ ಹಾಗೂ ಸವಲತ್ತುಗಳು, ಚಟುವಟಿಕೆಗಳು, ಯೋಜನೆಗಳು ಅವಶ್ಯಕವಾಗಿವೆ. ಇಂತಹ ಸೇವೆಯನ್ನು ಒದಗಿಸಲು ಆಧ್ಯಾಪಕರು ಇನ್ನಷ್ಟು ಹೆಚ್ಚಿನ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಇಂತಹ ಅಭ್ಯಾಸ ವರ್ಗಗಳಲ್ಲಿ ಪ್ರಾಧ್ಯಾಪಕರು ಭಾಗವಹಿಸಿ ತಮ್ಮ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಬೋಧಿಸಿದರೆ ಉತ್ತಮ” ಎಂದರು.

ಆಶಯ ನುಡಿಗಳನ್ನಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸದಸ್ಯರೂ, ವಿಭಾಗ ಪ್ರಮುಖರಾದ ಪ್ರೊ. ಶಿವಾನಂದ ಮೇಟಿಯವರು ಮಾತನಾಡುತ್ತಾ “ಕರ್ನಾಟಕ ರಾಜ್ಯ ಪದವಿ ಮಹಾವಿದ್ಯಾಲಯಗಳ ಶಿಕ್ಷಕರ ಸಂಘವು ಸಂಘಟಿಸಿದ ಮಹತ್ವಪೂರ್ಣ ಕಾರ್ಯಗಳನ್ನು ವಿವರಿಸುತ್ತ ರಾಷ್ಟ್ರೀಯ ಪ್ರಮುಖ ವಿಷಯಗಳ ಕುರಿತು ವಿಚಾರ ಸಂಕೀರ್ಣಗಳು, ರಾಷ್ಟ್ರೀಯ ದಿನಾಚರಣೆಗಳು ಹಾಗೂ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ ಕೇವಲ ವಿಚಾರ ಸಂಕಿರಣಗಳಿಗೆ ಸೀಮಿತವಾಗದೆ ಶಿಕ್ಷಕರ ನೋವು ಸಂಕಷ್ಟಗಳಿಗೆ ಪ್ರತಿ ಸ್ಪಂದಿಸುವ ಸಂಘವಾಗಿದೆ. ಶಿಕ್ಷಕರ ಹಲವಾರು ಬೇಡಿಕೆಗಳಿಗೆ ಸರಕಾರದ ಮೇಲೆ ಒತ್ತಡ ತಂದು ಬೇಡಿಕೆಗಳನ್ನು ಪೂರೈಸಲಾಗಿದೆ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ನೊಂದ ಶಿಕ್ಷಕರಿಗೆ ಸಹಾಯ ಸಹಕಾರವನ್ನು ಸಂಘ ನೀಡಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ಗುರುನಾಥ್ ಬಡಿಗೇರವರು ಮಾತನಾಡುತ್ತಾ ಸಂಘದ ಉದ್ದೇಶಗಳನ್ನು ಸಮಗ್ರವಾಗಿ ವಿವರಿಸಿ “ಸಂಘದ ಸದಸ್ಯರಲ್ಲಿ ಹೆಚ್ಚಾಗುತ್ತಿರುವ ಪ್ರಮಾಣವನ್ನು ವಿವರಿಸುತ್ತ ಸಂಘವು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಕೇವಲ ಸಂಘವು ಕಾರ್ಯ ಚಟುವಟಿಕೆಗಳಿಗೆ ಸೀಮಿತವಾಗದೇ ಹೊಸ ಶಿಕ್ಷಣ ಧೋರಣೆಯ ಕುರಿತಾದ ಹಲವಾರು ವಿಚಾರ ಸಂಕಿರಣಗಳು ಹಾಗೂ ಆಯುಕ್ತರ ಕಚೇರಿಗಳಿಂದ ಮಾರ್ಗದರ್ಶಿಗಳು ಹೊಸ ಶಿಕ್ಷಣ ನೀತಿ ಅನುಷ್ಠಾನದ ಸಂದರ್ಭದಲ್ಲೇ ಸಂಘದ ಪಾತ್ರ ಮಹತ್ತರವಾಗಿದೆ.” ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಸ್ವಾಗತಿಸಿದ ಸಂಘದ ಕಾರ್ಯದರ್ಶಿಯಾದ ಡಾ.ಮರಿದೇವರ ಮಠ ರವರು ಮಾತನಾಡುತ್ತಾ “ಸಂಘದ ಪ್ರಮುಖ ಧ್ಯೇಯಗಳನ್ನು ವಿವರಿಸಿದರು. ವಿಭಾಗದ ಮಹಿಳಾ ಪ್ರತಿನಿಧಿಯಾಗಿರುವ ಶ್ರೀಮತಿ ಸುಜಾತ, ಸಂಘದ ಸಂಘಟನಾ ಕಾರ್ಯದರ್ಶಿಯಾಗಿರುವ ಪ್ರಸನ್ನ ಪಂಢರಿ, ಪ್ರಾಂತ್ಯ ಕಾರ್ಯಾಲಯದ ಕಾರ್ಯದರ್ಶಿ ಅಭಿಷೇಕ ಕುಬಸದ ಹಾಗೂ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ವಿಭಾಗದ ಮೂರು ಜಿಲ್ಲೆಗಳ ಅಧ್ಯಕ್ಷರಾದ ಪ್ರೊ. ಶರಣಬಸಪ್ಪ ಬಿಳೆಯಲೆ, ಪ್ರಾಚಾರ್ಯರು, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿ ಗುಂಡೂರು ಪವನ್ ಕುಮಾರ್ ನೆರವೇರಿಸಿದರು.

Highslide for Wordpress Plugin