ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ದೆಹಲಿ ರಾಷ್ಟ್ರೀಯ ಕಾರ್‍ಯಕಾರಿಣಿ – ವರದಿ

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಕಾರ್‍ಯಕಾರಿಣಿಯ ಕೇಂದ್ರೀಯ ತಿಬ್ಬತಿ ಉಚ್ಚ ವಿಶ್ವವಿದ್ಯಾನಿಲಯ, ಸಾರಾನಾಥ, ಉತ್ತರ ಪ್ರದೇಶದಲ್ಲಿ ದಿನಾಂಕ 11-02-2023೩ ಮತ್ತು 12-02-2023 ರಂದು ಆಯೋಜಿಸಲಾಗಿತ್ತು.

ಸಮಾಜ ನಿರ್‍ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ಕಾರ್‍ಯಕಾರಿಣಿಯ ಅಧ್ಯಕ್ಷತೆಯನ್ನು ವಹಿಸಿದ್ದ ಜೆ.ಪಿ ಸಿಂಘಾಲ್‌ಜೀಯವರು ಹೇಳಿದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಯುವಲ್ಲಿ ವಿದ್ಯಾಲಯ ಮತ್ತು ಮಹಾವಿದ್ಯಾಲಯಗಳ ಪಾತ್ರ ಬಹಳ ಪ್ರಮುಖ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಆದರ್ಶವನ್ನಾಗಿಟ್ಟು ಕೊಂಡಿರುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವುದರೊಂದಿಗೆ ಉತ್ತಮ ನಾಗರೀಕರನ್ನಾಗಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ ಎಂದು ಹೇಳಿದರು.

ಕಾರ್‍ಯಕಾರಿಣಿಯಲ್ಲಿ ಅತಿಥಿಗಳಾಗಿ ಆಗಮಿಸಿದ ಜ್ಞಾನ ವತ್ಸಲ ಸ್ವಾಮಿಜೀಯವರು ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನವನ್ನು ನೀಡುವುದರೊಂದಿಗೆ ಸಂಸ್ಕಾರಯುಕ್ತ ಶಿಕ್ಷಣವನ್ನು ಕೊಡಬೇಕು. ಪುಸ್ತಕ ಜ್ಞಾನದಿಂದ ವಿದ್ಯಾರ್ಥಿಗಳು ವಿಧ್ವಂಸಕರಾಗಿ ಬೆಳೆಯಬಹುದು, ಆದರೆ ಸಂಸ್ಕಾರ ಮತ್ತು ಆಧ್ಯಾತ್ಮದೊಂದಿಗೆ ಶಿಕ್ಷಣ ನೀಡಿದರೆ ಸಕಾರಾತ್ಮಕ ಶಕ್ತಿಯು ಹೆಚ್ಚಾಗಿ ಚರಿತ್ರವಂತರಾದ ನಾಗರೀಕರಾಗಬಹುದು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡದಿದ್ದರೆ ಒಂದು ದಿನ ಸಂಪತ್ತಿನೊಂದಿಗೆ ಸಂತತಿಯನ್ನು ಕಳೆದುಕೊಳ್ಳಬೇಕಾಗಬಹುದೆಂದು ಸ್ವಾಮೀಜಿ ಹೇಳಿದರು. ಜ್ಞಾನವತ್ಸಲ ಸ್ವಾಮೀಜಿಯವರು ಒಬ್ಬ ಆಧ್ಯಾತ್ಮಿಕ ಮುಖಂಡರು ಮತ್ತು ಉತ್ತಮ ವಾಗ್ಮಿಗಳಾಗಿದ್ದು, ಬಾಪ್ಸ್(ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸ್ವಾಮೀನಾರಾಯಣ ಸಂಸ್ಥೆ) ನ ಮುಖಾಂತರ ಸಮಾಜ ಸುಧಾರಣೆಯ ಕೆಲಸವನ್ನು ಮಾಡುತ್ತಿದ್ದಾರೆ.

ರಾಷ್ಟ್ರೀಯ ಕಾರ್‍ಯಕಾರಿಣಿಯಲ್ಲಿ ಸಹ ಸಂಘಟನಾ ಮಂತ್ರಿಗಳಾದ ಶ್ರೀ ಲಕ್ಷ್ಮಣ್‌ಜೀ, ಪಾಲಕರಾದ ಶ್ರೀ ಸುನೀಲ್ ಬಾಯಿ ಮೆಹೆತಾಜೀ, ರಾಷ್ಟ್ರೀಯ ಸಂಘಟನಾ ಮಂತ್ರಿಗಳಾದ ಶ್ರೀ ಮಹೇಂದ್ರಕಪೂರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರಾ, ಮಹಿಳಾ ಕಾರ್ಯದರ್ಶಿ ಶ್ರೀಮತಿ ಮಮತಾ ಡಿ.ಕೆ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್, ಮಹಿಳಾ ಪ್ರಮುಖರಾದ ಶ್ರೀಮತಿ ರೋಹಿಣಿ ನಾಯಕ್‌ರವರು ಭಾಗವಹಿಸಿದ್ದರು.

Highslide for Wordpress Plugin