ಗದಗ ಜಿಲ್ಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸೆಕೆಂಡರಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಗದಗ ಆಶ್ರಯದಲ್ಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎನ್.ವಿ ಪಾಟೀಲ್ ಶಿಕ್ಷಕರ ಮನೆಯ ಮೇಲಿನ ವೇದಿಕೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮವನ್ನು ದಿನಾಂಕ: 4-8-2015 ರಂದು ಹಮ್ಮಿಕೊಳ್ಳಲಾಗಿತ್ತು.

guruvandana--Gadag

ಕಾರ್ಯಕ್ರಮವು ಶ್ರೀ ಸಿ.ಆರ್ ಹಿರೇಮಠ ಶಿಕ್ಷಕರು ಸ್ವಾಗತ ಮತ್ತು ಪರಿಚಯದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದವೀಧರ ಮತದಾರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ವಿ ಸಂಕನೂರು ಗುರುಗಳು ಆಗಮಿಸಿದ್ದರು. ಹಾಗೂ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಸ್ಥಳೀಯ ಕೆ.ವಿ.ಎಸ್.ಆರ್. ಪ. ಪೂ. ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಶ್ರೀ ಪಿ ಎಸ್ ಕಾಶಪ್ಪನವರ್, ಗುರುಗಳು ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ವಿದ್ಯಾವರ್ಧಕ ಸಂಸ್ಥೆಯ ಶ್ರೀ ಸಿ ಎನ್ ಪಾಟೀಲ ಪ್ರೌಢಶಾಲೆಯ ಶಿಕ್ಷಕರು, ಇವರು ವಹಿಸಿದ್ದರು.

ಸನ್ಮಾನಿತರಾದ ಶ್ರೀ ಪಿ.ಎಸ್. ಕಾಶಪ್ಪನವರು ಮಾತನಾಡುತ್ತ ಗುರುಗಳ ಸ್ಥಾನಮಾನದ ಮಹತ್ವ ಕುರಿತು ವಿವರಿಸಿದರು. ಶ್ರೀ ಎಸ್.ವಿ. ಸಂಕನೂರ ಮಾತನಾಡುತ್ತಾ ರಾಜ್ಯ ಸೆಕೆಂಡರಿ ಶಿಕ್ಷಕ ಸಂಘವು ಇದೇ ರೀತಿ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲವಾಗುವಂತೆ ವರ್ಷದುದ್ದಕ್ಕೂ ಹಮಿಕೊಳ್ಳಬೇಕು. ಅದಕ್ಕೆ ನನ್ನ ಸಹಾಯ, ಸಹಕಾರ ಎಂದಿಗೂ ಇರುತ್ತದೆ ಎಂದು ಅಭಯ ನೀಡಿದರು.

ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿದ ಶ್ರೀ ಎನ್.ವಿ ಪಾಟೀಲ್ ಗುರುವಿನ ಸ್ಥಾನದ ಮಹತ್ವ ನೆನಪಿಸುತ್ತ ಕಲಿಸಿದ ಗುರುಗಳ ಸ್ಮರಣೆ ಮಾಡುತ್ತಾ ಸಮುದಾಯಕ್ಕೆ ಯಾವುದೇ ತೊಂದರೆಗಳು ಬಂದಲ್ಲಿ ನಮ್ಮ ನಾಯಕರ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದು ಹೇಳಿದರು. ಕಾರ್ಯಕ್ರಮವು ಶ್ರೀ ಡಿ.ಎಸ್ ಅಂಗಡಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಶ್ರೀ ಟಿ. ಎಸ್. ಬಂಡಿಹಳ, ಎನ್ ಎಸ್. ಹಂಜಗಿ, ಎಂ. ಆರ್. ಲಮಾಣಿ, ಎಸ್.ಎಂ ಹಳೇಮನಿ, ಎಂ.ಬಿ. ಹೋಳಿ, ಬಿ.ಎಂ. ಮಾನೇದ, ಎಸ್.ಬಿ ಕಿತ್ತೂರ, ಎಸ್.ಎನ್ ಗೌಡರ. ಬಿ ಎನ್ ಸಜ್ಜನ, ಜಿ.ವಿ ಹಿರೇಮಠ ಎನ್ ವಿ ಜೋಷಿ, ಪ್ರೊ| ಅಂಗಡಿ, ಶ್ರೀ ಮಟ್ಟಿ, ಡಿ.ಎಸ್ ಹೂಗಾರ, ಪಿ.ಬಿ ಹುಣಸೀಮರದ ಅನೇಕ ಜನ ಶಿಕ್ಷಕರು ಉಪಸ್ಥಿತರಿದ್ದರು.

ವರದಿ : ಎನ್ ವಿ ಪಾಟೀಲ್

Highslide for Wordpress Plugin