ಮೌಲ್ಯಮಾಪನ ಬಹಿಷ್ಕಾರ
ರಾಮನಗರ : ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕರೆಗೆ ಓಗೊಟ್ಟು ರಾಮನಗರ ಜಿಲ್ಲಾ ಶಿಕ್ಷಕರು 18-4-2016 ರಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಿದರು. ಶಿಕ್ಷಕರು, ಸಹಶಿಕ್ಷಕ ಸಂಘದ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿದರು. ಈ ಮುಷ್ಕರದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಸಿ.ವಿ ಜಯಣ್ಣ, ಜಿಲ್ಲಾ ಪದಾಧಿಕಾರಿಗಳಾದ ಚನ್ನೇಗೌಡ, ವರದರಾಜು, ಹೆಚ್.ವಿ ಮಹಾಲಿಂಗಯ್ಯ, ಸಿದ್ಧಲಿಂಗಯ್ಯ, ಅಮಾಕಪ್ಪ, ಅಪ್ಪಾಜಿ ಮುಂತಾದವರು ಭಾಗವಹಿಸಿದ್ದರು. ರಾಮನಗರದ ಡಿ ಡಿ ಪಿ ಐ ಮತ್ತು ಜಿಲ್ಲಾಧಿಕಾರಿಗಳ ಮನವಿಯನ್ನು ತಿರಸ್ಕರಿಸಿ ಮುಷ್ಕರ ಮುಂದುವರಿಸಿದರು. […]











