ಬೆಂಗಳೂರು ದಕ್ಷಿಣ ಜಿಲ್ಲೆಯ 31 ನೇ ಪ್ರತಿಭಾ ಪುರಸ್ಕಾರ
ಒಂದು ಸಾಮಾನ್ಯವಾದ ಕಲ್ಲನ್ನು ಅತ್ಯುತ್ತಮವಾದ ಶಿಲ್ಪಿ ಸುಂದರವಾದ ಮೂರ್ತಿಯನ್ನಾಗಿ ಕೆತ್ತಬಲ್ಲ. ಹಾಗೆಯೇ ಸಾಧಾರಣವಾದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅಸಾಧಾರಣ ವ್ಯಕ್ತಿಯನ್ನಾಗಿಸಿ, ಅತ್ಯುನ್ನತವಾದ ಸ್ಥಾನಕ್ಕೆ ಏರಿಸಬಲ್ಲ ಶಕ್ತಿ ನಮ್ಮ ಶಿಕ್ಷಕರಿಗಿರುತ್ತದೆ. ಅಂಥ ಶಿಕ್ಷಕರಿಗಾಗಿಯೇ ಶಿಕ್ಷಕ ಸಂಘದ 31ನೆಯ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ನನಗೆ ತುಂಬ ಸಂತೋಷವಾಗಿದೆ ಎಂದು ಪ್ರೊ|| ಎನ್.ವಿ ರಘುರಾಮ್ ಅವರು ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಕುರಿತು ಮಾತನಾಡುತ್ತಾ ತಿಳಿಸಿದರು. ಬೆಂಗಳೂರಿನ ಜಯನಗರದ ಆರ್.ವಿ. ಟೀಚರ್‍ಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು […]











