ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು 1-7-2021 ರಂದು ಮಾನ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ಎಸ್. ಸುರೇಶ ಕುಮಾರ ಅವರನ್ನು ಭೇಟಿ ಮಾಡಿ, ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಪರಿಷ್ಕರಿಸಿ 45 ದಿನಗಳಿಗೆ ಮಿತಿಗೊಳಿಸಿ ಆದೇಶಿಸುವಂತೆ ಮನವಿ ಮಾಡಲಾಯಿತು. ಕ.ರಾ.ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರು ಹಾಗೂ ಎಂ.ಎಲ್.ಸಿ ಆಗಿರುವ ಶ್ರೀಯುತ ಅರುಣ ಶಹಾಪುರ, ಎಂ.ಎಲ್.ಸಿ.ಗಳಾದ ಶ್ರೀಯುತ ಎಸ್.ವಿ ಸಂಕನೂರ, ಕ.ರಾ.ಮಾ.ಶಿ.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಚಿದಾನಂದ ಪಾಟೀಲ, ರಾಜ್ಯ ಖಜಾಂಚಿಗಳಾದ ಶ್ರೀಯುತ ಜೆ. ಎಂ. ಜೋಷಿ, […]
ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಬೆಂಗಳೂರು ಉತ್ತರ ಜಿಲ್ಲೆಯ ಕೆಲವು ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ವಿತರಣಾ ಕಾರ್ಯಕ್ರಮ ನಡೆಯಿತು. ದಿನಾಂಕ 25-06-2021 ರಂದು ನಮ್ಮ ಸಂಘದ ಕೇಂದ್ರ ಕಛೇರಿಯಲ್ಲಿ (ಬೆಂಗಳೂರು) ಸರಳವಾಗಿ ಸರ್ಕಾರದ ಎಲ್ಲಾ ನಿಯಮಗಳನ್ನೂ ಅನುಸರಿಸುವುದರೊಂದಿಗೆ ಈ ಕಾರ್ಯಕ್ರಮ ನಡೆಯಿತು. ನಮ್ಮ ಸಂಘದ ಹಿರಿಯರು ಹಾಗೂ ಕಾರ್ಯಾಲಯ ಪ್ರಮುಖರಾದ ಶ್ರೀ ಜಿ ಎಸ್ ಕೃಷ್ಣಮೂರ್ತಿಯವರು ಈ ಸತ್ಕಾರ್ಯವನ್ನು ನಡೆಸಿಕೊಟ್ಟರು. ಶ್ರೀಯುತರು ಸ್ವಂತ ಹಣವನ್ನು ವಿನಿಯೋಗಿಸಿ ಸಂತ್ರಸ್ತರಿಗೆ ಆಹಾರದ ನೆರವು ನೀಡಿದ್ದು […]
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಸಹಯೋಗದೊಂದಿಗೆ ದಿನಾಂಕ 10-4-2021, ಶನಿವಾರದಂದು ಸಂಘದ ಕೇಂದ್ರ ಕಛೇರಿ ಯಾದವಸ್ಮೃತಿಯಲ್ಲಿ ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ನೆರವೇರಿತು. ಶ್ರೀಮತಿ ಸುಭದ್ರ, ಪವನ್ ಇಂಗ್ಲೀಷ್ ಸ್ಕೂಲ್‌ರವರು ವಿದ್ಯಾಧಿದೇವತೆಯಾದ ಸರಸ್ವತಿಯ ಪ್ರಾರ್ಥನೆಯನ್ನು ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಡಾ|| ವೆಂಕಟರಮಣ ದೇವರು ಭಟ್, ಬೆಂಗಳೂರು ದಕ್ಷಿಣ ಜಿಲ್ಲಾಕಾರ್ಯದರ್ಶಿರವರು ಯುಗಾದಿಯ ಆಚರಣೆ ಭಾರತೀಯ ಪರಂಪರೆಯಲ್ಲಿ ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ತಿಳಿಸಿ, ಗಣ್ಯರನ್ನು ಪರಿಚಯಿಸಿ ಸ್ವಾಗತ […]
ಪ್ರತಿ ವರ್ಷವು ಶಾಲಾ ಕಾಲೇಜುಗಳ ಪ್ರಾರಂಭದ ಅವಧಿ, ಜೂನ್ ಜುಲೈ ತಿಂಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿತ್ತು. ಈ ವರ್ಷ ಕೋವಿಡ್-19 ರ ಕಾರಣಕ್ಕಾಗಿ ಸದಸ್ಯತ್ವ ಅಭಿಯಾನ ಆ ತಿಂಗಳಲ್ಲಿ ನಡೆಯುವುದಿಲ್ಲ. ಅದಕ್ಕಾಗಿ ಮಾರ್ಚ್ 17, 2021 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ದಿನದ ಸದಸ್ಯತ್ವ ಅಭಿಯಾನವನ್ನು ಮಾಡುವುದು ಎಂದು ಸಂಘದ ಕೋರ್ ಕಮಿಟಿ ನಿರ್ಧರಿಸಿದಂತೆ ರಾಜ್ಯದಲ್ಲಿ ಪೂರ್ವ ಮತ್ತು ಯೋಜನಾ ಬದ್ಧವಾಗಿ ತಯಾರಿಯನ್ನು ಮಾಡಲಾಗಿತ್ತು. ಅಂದು ಬೆಳಿಗ್ಗೆ 8.30 ರಿಂದ ಪ್ರಾರಂಭವಾದ ಸದಸ್ಯತ್ವ ಅಭಿಯಾನ ಸಂಜೆಯವರೆಗೂ […]
“ನಾವು ಹಿಂದೂಗಳು, ಸೆಕ್ಯುಲರ್‌ಗಳು ಅಲ್ಲ. ಸೆಕ್ಯುಲರ್ ಎಂಬ ಪದದ ಅನುವಾದವನ್ನು ಭಾರತದ ಯಾವ ಭಾಷೆಯಲ್ಲಿಯೂ ಮಾಡಬಾರದು. ಅದರ ಅವಧಾರಣೆಯೂ ಭಾರತದ್ದಲ್ಲ. ನನ್ನ ಧರ್ಮವೇ ಶ್ರೇಷ್ಠ ಎಂದು ನಂಬುವವರು ಭಾರತೀಯರಲ್ಲ. ಸಂವಿಧಾನ ಮಾಡುವಾಗಲೂ ಸೆಕ್ಯುಲರ್ ಪದದ ಉಪಯೋಗವಾಗಬೇಕೇ ಎಂದು ಚರ್ಚೆಯಾಯಿತು. ಆದರೆ ಸಂವಿಧಾನದಲ್ಲಿ ಆ ಶಬ್ದದ ಉಪಯೋಗ ಮಾಡಬಾರದೆಂದು ತೀರ್ಮಾನಿಸಲಾಯಿತು” ಎಂದು ದಿನಾಂಕ 30-1-2021 ಮತ್ತು 31-1-2021 ರಂದು ಗುಜರಾತಿನಲ್ಲಿ ನಡೆದ ಎ.ಬಿ.ಆರ್.ಎಸ್.ಎಮ್.ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮನಮೋಹನ್ ವೈದ್ಯಜೀಯವರು ಅಭಿಪ್ರಾಯಪಟ್ಟರು. ಎರಡು […]