ಕಲಬುರ್ಗಿ : ಶಿಕ್ಷಕರಲ್ಲಿ ಪರಿಣಾಮಕಾರಿ ಬೋಧನಾ ಗುಣ ಅಗತ್ಯ
ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಅಲ್ಲಿನ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಕರ್ತವ್ಯವಿದೆಯೆಂದು ಬೋಧನಾ ಕಾರ್ಯ ಮಾಡಿ, ಪಠ್ಯ ಮುಗಿಸುವುದಲ್ಲ. ಬದಲಿಗೆ ಪರಿಣಾಮಕಾರಿಯಾದ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳ ಮಟ್ಟಕ್ಕಿಳಿದು, ಸಂಪೂರ್ಣವಾಗಿ ಬೋಧನೆಯಲ್ಲಿ ತಲ್ಲಿನರಾಗಿ ಪಾಠ ಮಾಡಿದರೆ, ಅದು ವಿದ್ಯಾರ್ಥಿಗಳಿಗೆ ಮನ ಮುಟ್ಟಲು ಸಾಧ್ಯವಾಗುತ್ತದೆಯೆಂದು ಸಂಪನ್ಮೂಲ ಶಿಕ್ಷಕ ಶಿವಕಾಂತ ಚಿಮ್ಮಾ ಹೇಳಿದರು. ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘವು ನಗರದ ಆಳಂದ ರಸ್ತೆಯ ಶೆಟ್ಟಿಕಾಂಪ್ಲೆಕ್ಸ್ನ ಎದುರುಗಡೆಯಿರುವ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್ನಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ […]










