ಅಫ್ಜಲ್‌ಪುರದಲ್ಲಿ ಸಂಕಲ್ಪ ದಿನಾಚರಣೆ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಅಫ್ಜಲ್‌ಪುರ ತಾಲೂಕಾ ಘಟಕದ ವತಿಯಿಂದ ಅಫ್ಜಲ್‌ಪುರದಲ್ಲಿ ಸಂಘದ ವತಿಯಿಂದ ಸಂಕಲ್ಪ ದಿನಾಚರಣೆ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಅಫ್ಜಲ್‌ಪುರ ತಾಲೂಕಾ ಘಟಕದ ವತಿಯಿಂದ ಅಫ್ಜಲ್‌ಪುರದಲ್ಲಿ ಸಂಘದ ವತಿಯಿಂದ ಸಂಕಲ್ಪ ದಿನಾಚರಣೆ ಆಚರಿಸಲಾಯಿತು.
ಕಲಬುರ್ಗಿಯ ಜ್ಞಾನ ಸಿಂಚನಾ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ವೇತನ ಬಟವಾಡೆ ಅಧಿಕಾರಿಗಳಿಗಾಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಒಂದು ದಿನದ ಹೆಚ್.ಆರ್.ಎಂ.ಎಸ್. ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ವಿಕಲಚೇತನ ನರ್ಸಿಂಗ್ ವಿದ್ಯಾರ್ಥಿನಿ ನಾಗಮ್ಮ ಪರಮಣ್ಣ ಅವರಿಗೆ ಸಂಘದ ಸಹಾಯಾರ್ಥ 40 ಸಾವಿರ ರೂ. ಚೆಕ್ ನೀಡಲಾಯಿತು.
ವೇತನ ತಾರತಮ್ಯ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ ತಿದ್ದುಪಡಿ ವಿಧೇಯಕ ಕರಾಳ ಶಾಸನವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ವಿರೋಧಿಸಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಜಯನಗರ ಪದವಿಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪ್ರಾಚಾರ್ಯರು, ಉಪನ್ಯಾಸಕರು ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗಿಯಾದರು.
ಶಿಕ್ಷಕ ಸಂಘದ ಬೆನ್ನೆಲುಬೇ ಸದಸ್ಯತ್ವ. ಆದ್ದರಿಂದ ಶಿಕ್ಷಕ ಸಂಘದ ಕಾರ್ಯಕರ್ತರು ಪ್ರತಿವರ್ಷವೂ ಸಂಘಕ್ಕೆ ಶಿಕ್ಷಕರ ಸದಸ್ಯತ್ವವನ್ನು ಮಾಡಿಸುವ ಬಗ್ಗೆ ಗಮನಹರಿಸಬೇಕು, ಆ ಮೂಲಕ ಶಿಕ್ಷಕರ ಸಂಪರ್ಕದಲ್ಲಿ ನಿರಂತರವಾಗಿ ಇರಬೇಕು, ಅದಕ್ಕಾಗಿ ತಮ್ಮ ಪೂರ್ಣ ಸಮಯವನ್ನು ಕೊಟ್ಟು ಶಿಕ್ಷಕರ ಸಂಪರ್ಕ, ಅಭಿಯಾನಗಳನ್ನು ಕೈಗೊಳ್ಳಬೇಕು. ನಿರಂತರ ಪ್ರವಾಸ ಮಾಡಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮಹೇಂದ್ರ ಕಪೂರ್‌ರವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರಿಗೆ ಕರೆ ನೀಡಿದರು. ದಿನಾಂಕ 26-2-2017 ರಂದು ಬೆಂಗಳೂರಿನಲ್ಲಿ […]
ರಾಜ್ಯ ಸರಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಡ ಮಾಡುವ ರಾಜ್ಯದ ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಎಮ್.ಎಸ್.ಇರಾಣಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಹಾಗೂ ಇತಿಹಾಸ ಉಪನ್ಯಾಸಕರಾಗಿರುವ ಈರನಗೌಡ ಪಾಟೀಲ ಪಾತ್ರರಾಗಿದ್ದಾರೆ. ಅವರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ನಿರ್ದೇಶನಾಲಯ ಬೆಂಗಳೂರಿನ ಶಿವಾನಂದ ಸರ್ಕಲ್‌ನ ಗಾಂಧಿಭವನದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉತ್ತಮ ಎನ್‌ಎಸ್‌ಎಸ್ ಯೋಜನಾಧಿಕಾರಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಾಧ್ಯಮ […]
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಣಿಕ ಮಹಾ ಸಂಘದ ವತಿಯಿಂದ 5-2-2017 ರಂದು ಕೇಂದ್ರದ ಬಜೆಟ್ ಕುರಿತು ಚರ್ಚಾಗೋಷ್ಠಿ.
ದಿನಾಂಕ 23-1-2017 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೀದರ ಜಿಲ್ಲಾ ಘಟಕ ಹಾಗೂ ಪದವಿ ಪೂರ್ವ ಉಪನ್ಯಾಸಕರ ಸಂಘ ಬೀದರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿವಿವೇಕಾನಂದ ಹಾಗೂ ಸುಭಾಷಚಂದ್ರ ಬೋಸ್ ಜಯಂತಿ ನಿಮಿತ್ತ ಸಂಕಲ್ಪ ದಿನ ಆಚರಣೆ ವಿಜೃಂಭಣೆಯಿಂದ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿಜಿ, ರಾಮಕೃಷ್ಣ ವಿವೇಕಾನಂದ ಆಶ್ರಮ ಬೀದರ ಸಾನಿಧ್ಯ ವಹಿಸಿ ವಿವೇಕಾನಂದರನ್ನು ಕುರಿತು ಮಾತನಾಡಿದರು ಹಾಗೂ ಸುಮಾರು 400 ಶಿಕ್ಷಕರಿಗೆ ಸಂಕಲ್ಪ ಬೋಧಿಸಿದರು. ಇದೇ ವೇಳೆ ವಿಧಾನ ಪರಿಷತ್ […]
ಬೆಂಗಳೂರು : ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಉತ್ತರ ಜಿಲ್ಲಾ ಘಟಕದಿಂದ ದಿನಾಂಕ 21-1-2017 ರಂದು ಶ್ರೀ ಮಾತಾ ಆಂಗ್ಲಶಾಲೆ ಆರ್.ಟಿ.ನಗರದಲ್ಲಿ ಸಂಕಲ್ಪ ದಿನ ನಡೆಯಿತು. ಮುಖ್ಯ ಅತಿಥಿ ಕೃ. ನರಹರಿಯವರು ಶಿಕ್ಷಕರು ಆದರ್ಶವಾಗಿರಬೇಕು. ಸನ್ನಡತೆಯಿಂದ ಮಕ್ಕಳಿಗೆ ಮಾದರಿಯಾಗಿದ್ದು ರಾಷ್ಟ್ರಭಕ್ತಿ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು ಮತ್ತು ಸ್ವಾಮಿವಿವೇಕಾನಂದರ ವ್ಯಕ್ತಿತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು. ಸಂಘದ ಕಛೇರಿಯ ಪ್ರಮುಖರಾದ ಜಿ.ಎಸ್ ಕೃಷ್ಣಮೂರ್ತಿಯವರು ಸಂಕಲ್ಪ ಬೋಧನೆಯನ್ನು ಮಾಡಿದರು. ರಾಜ್ಯದ ಖಜಾಂಚಿಗಳಾದ ಜೆ.ಎಂ ಜೋಷಿಯವರು ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿದರು. ಜಿಲ್ಲಾ ಕಾರ್ಯದರ್ಶಿಗಳಾದ […]