ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ, 45 ಪ್ರೌಢಶಾಲೆಗಳ 350 ಮಕ್ಕಳು ಭಾಗಿ ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ ಅಗತ್ಯ : ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯ ಶ್ಲಾಘನೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆಗಾಗಿ ಅನುಭವಿಗಳ ಉಪನ್ಯಾಸ ಮಾಲೆ, ತರಬೇತಿ ಕಾರ್ಯಾಗಾರಗಳು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸುಮಾರು ವರ್ಷಗಳಿಂದ ಜಿಲ್ಲಾ ಹಾಗೂ ಹಂತದಲ್ಲಿಯೂ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಅಭಿಪ್ರಾಯಪಟ್ಟರು. ಆಳಂದ ಪಟ್ಟಣದ ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರೌಢ ಶಾಲೆಯಲ್ಲಿ […]
16-1-2018 ರಂದು ಸರಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪುರ, ಜಿ.ಯಾದಗಿರಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ), ಬೆಂಗಳೂರು, ಜಿಲ್ಲಾ ಘಟಕ ಯಾದಗಿರಿ ವತಿಯಿಂದ ವಿಶ್ವಮಾನವ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷ ಚಂದ್ರ ಬೋಸ್‌ರವರ ಜಯಂತಿ ಅಂಗವಾಗಿ ಸಂಕಲ್ಪ ದಿನ (ಕರ್ತವ್ಯ ಬೋಧ ದಿವಸ) ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕ.ರಾ.ಮಾ.ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ. ಚಿದಾನಂದ ಪಾಟೀಲ, ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಕ್ಷಕರಿಗೆ […]
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಬೆಂಗಳೂರು ಉತ್ತರ ಜಿಲ್ಲಾ ಘಟಕವು ದಿನಾಂಕ 14-1-2018 ರ ಭಾನುವಾರದಂದು ವಿ.ಐ.ಪಿ ಶಾಲೆ, ಟಿ. ದಾಸರಹಳ್ಳಿ ಇಲ್ಲಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷಚಂದ್ರ ಬೋಸರ ಜಯಂತಿ ನಿಮಿತ್ತ ಸಂಕಲ್ಪ ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ವಿ.ಐ.ಪಿ ಶಾಲೆಯ ವಿದ್ಯಾರ್ಥಿನಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್.ಜಿ ತಾಂಬೆಯವರು ವೇದಿಕೆ ಮೇಲಿನ ಗಣ್ಯರನ್ನು ಸ್ವಾಗತಿಸಿ ಪರಿಚಯಿಸಿದರು. ನಂತರ ಗಣ್ಯರೆಲ್ಲರೂ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. […]
ಉತ್ತಮ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದ ಅತ್ಯಂತ ಉತ್ತಮ ಕಾರ್ಯ. ನರಹರಿಯವರು ಅಂತಹ ಉತ್ತಮ ಶಿಕ್ಷಕರು ಹಾಗೂ ಕ್ರಿಯಾಶೀಲರು. ಪ್ರಾಮಾಣಿಕತೆ, ರಾಷ್ಟ್ರಪ್ರೇಮ, ತ್ಯಾಗ ಮನೋಭಾವಗಳನ್ನು ಮೈಗೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ನರಹರಿಯವರದು. ಶಿಕ್ಷಕರಾಗಿ, ಶಾಸಕರಾಗಿ ಶಿಕ್ಷಣ ಕ್ಷೇತ್ರಕ್ಕೆ , ಶಿಕ್ಷಕ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ದೇಶ ಏಳಿಗೆಯಾಗಬೇಕಾದರೆ ನಮಗೆ ನರಹರಿಯಂಥವರು ಬೇಕು. ಇಂತಹ ವಿಶಿಷ್ಟ ವ್ಯಕ್ತಿತ್ವದ ನರಹರಿಯವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಉಚಿತವಾಗಿದೆ ಎಂದು ಪ್ರಖ್ಯಾತ ವಿದ್ವಾಂಸರೂ, ಲೇಖಕರೂ ಆದ ಡಾ|| ಕೆ. ಎಸ್. ನಾರಾಯಣಾಚಾರ್ಯರು ಪ್ರೊ. ಕೃ. ನರಹರಿಯವರ […]
ದಿನಾಂಕ 12-11-2017 ರಂದು ಹುಬ್ಬಳ್ಳಿ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿ ನಡೆದ ‘ಕಾರ್ಯಕಾರಿಣಿಯ ವರದಿ ಶಿಕ್ಷಕರ ವೇತನ ತಾರತಮ್ಯವನ್ನು ನಿವಾರಿಸಲು ‘ಒಂದು ದೇಶ, ಒಂದು ಶಿಕ್ಷಣ, ಒಂದು ವೇತನ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಒತ್ತಾಯಿಸಿದೆ. ದೇಶದ 30 ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಶಿಕ್ಷಕರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ಜಾರಿ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಜಾರಿಯಾಗಿಲ್ಲ, ಹಾಗಾಗಿ ಇಡೀ ದೇಶಕ್ಕೆ ಅನ್ವಯ ವಾಗುವಂತೆ ಒಂದೇ ದೇಶ, – ಒಂದೇ […]
ಮಹಿಳೆಯರ ಸ್ಥಿತಿಗತಿಯ ಆಧಾರದ ಮೇಲೆ ಒಂದು ಸಮಾಜದ ಸ್ಥಿತಿಗತಿಯ ಪರಿಚಯವಾಗುತ್ತದೆ ಎಂದು ABRSM ನ ಸಂರಕ್ಷಕರಾದ ಶ್ರೀ ಅನಿರುದ್ದ ದೇಶಪಾಂಡೆಜೀಯವರು ಇದೇ ಅಕ್ಟೋಬರ್ 27 ರಂದು ಅಮರಾವತಿಯಲ್ಲಿ (ಮಹಾರಾಷ್ಟ್ರ) ನಡೆದ ರಾಷ್ಟ್ರೀಯ ಮಹಿಳಾ ಸಂವರ್ಗದ ಸಭೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ಮಹಿಳಾ ಸಂವರ್ಗದ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವುದರೊಂದಿಗೆ ಹಾಗೂ ಸರಸ್ವತಿ ವಂದನೆಯೊಂದಿಗೆ ಪ್ರಾರಂಭ ಮಾಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಂಃಖSಒನ ಅಧ್ಯಕ್ಷರಾದ ಡಾ|| ವಿಮಲ್ ಪ್ರಸಾದ್ ಅಗರ್‌ವಾಲ್ ರವರು, ಸಂರಕ್ಷಕರಾದ ಶ್ರೀ ಅನಿರುದ್ಧ ದೇಶಪಾಂಡೆಯವರು ಉಪಸ್ಥಿತರಿದ್ದರು. ಮೊದಲನೇ ಅವಧಿಯಲ್ಲಿ 7 ರಾಜ್ಯಗಳಿಂದ […]