ಶಿಕ್ಷಕರ ಸಾಂದರ್ಭಿಕ ರಜೆ 15 ದಿನಗಳೇ ಇರಲಿ

ಶಿಕ್ಷಕರ ಸಾಂದರ್ಭಿಕ ರಜೆ 15 ದಿನಗಳೇ ಇರಲಿ

ಶಿಕ್ಷಕರ ಸಾಂದರ್ಭಿಕ ರಜೆ ದಿನಗಳನ್ನು (ಸಿಎಲ್) 15 ರಿಂದ 10 ದಿನಗಳಿಗೆ ಇಳಿಸಿರುವ ನಿರ್ಧಾರ ಸೂಕ್ತವಲ್ಲ. ಈ ಮೊದಲಿದ್ದಂತೆ 15 ಸಿಎಲ್‌ಗಳನ್ನೇ ಮುಂದುವರೆಸಬೇಕು ಎಂದು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಸಂಘಗಳ ಮುಖ್ಯಸ್ಥರ ಸಭೆ ಆಗ್ರಹಿಸಿದೆ. ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ವತಿಯಿಂದ ಶಾಸಕರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶೈಕ್ಷಣಿಕ ಅವಧಿ ಹಾಗೂ ರಜೆ ಒಂದು ಚರ್ಚೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.   ಮಕ್ಕಳ ವಾರ್ಷಿಕ ಕಲಿಕಾ ಅವಧಿಯ ದಿನಗಳು […]

ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿ

ಮಕ್ಕಳ ಉಜ್ವಲ ಭವಿಷ್ಯರೂಪಿಸುವ ಶಿಕ್ಷಕರು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು. ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಾಲೂಕಿನ ಶಿಕ್ಷಕರಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ನಾಗರೀಕರ ಪಾತ್ರ ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದಾರಿ ದೀಪವಾಗುವ ನಿಟ್ಟಿನಲ್ಲಿ ಶಿಕ್ಷಕರು ಕ್ರಿಯಾಶೀಲರಾಗಬೇಕು. ರಾಷ್ಟ್ರದ ಉತ್ಥಾನಕ್ಕೆ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಮಕ್ಕಳಲ್ಲಿ ಭಯ, ಆತಂಕಗಳನ್ನು ದೂರ ಮಾಡಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಸ್ವಯಂ ಶಿಸ್ತು, […]

ಡಾ. ರಮೇಶ್ ಪೋಕ್ರಿಯಾಲ್ ಅವರಿಗೆ ಮನವಿ

ಡಾ. ರಮೇಶ್ ಪೋಕ್ರಿಯಾಲ್ ಅವರಿಗೆ ಮನವಿ

ಎಬಿಆರ್‌ಎಸ್‌ಎಂನ ರಾಷ್ಟ್ರೀಯ ಪದಾಧಿಕಾರಿಗಳ ನಿಯೋಗವು ಮಾನವ ಸಂಪನ್ಮೂಲ ಸಚಿವರಾದ ಡಾ. ರಮೇಶ್ ಪೋಕ್ರಿಯಾಲ್ ಅವರನ್ನು ಭೇಟಿ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತು ಮನವಿ ಪತ್ರ ನೀಡಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೇಡಿಕೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೇಡಿಕೆ

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದಿಂದ ಬಂದಿರುವ ಬೇಡಿಕೆಗಳ ಪಟ್ಟಿಯಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಬೇಡಿಕೆಗಳ ಪಟ್ಟಿಯನ್ನು ಪ್ರಾದೇಶಿಕ ಭಾಷೆಯಲ್ಲಿ ತಯಾರು ಮಾಡಿ ಅನೇಕ ಜಿಲ್ಲೆಯ ಕಾರ್ಯಕರ್ತರು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ, ನವದೆಹಲಿ, ಮಾನ್ಯ ಮಾನವ ಸಂಪನ್ಮೂಲ ಮಂತ್ರಿಗಳು, ಭಾರತ ಸರ್ಕಾರ, ನವದೆಹಲಿ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು. ಮಾನ್ಯ ಶಿಕ್ಷಣ ಮಂತ್ರಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು […]

34 ನೇ ಪ್ರತಿಭಾ ಪುರಸ್ಕಾರ ಬೆಂಗಳೂರು ಉತ್ತರ ಜಿಲ್ಲೆ

34 ನೇ ಪ್ರತಿಭಾ ಪುರಸ್ಕಾರ ಬೆಂಗಳೂರು ಉತ್ತರ ಜಿಲ್ಲೆ

ಅಂಕ ಗಳಿಸುವುದು ಜೀವನದ ಒಂದು ಚಿಕ್ಕ ಭಾಗವಷ್ಟೆ ಆದರೆ ಸಂಸ್ಕಾರ ಮತ್ತು ಸಮಾಜ ಸೇವೆ ನಮ್ಮ ಜೀವನದ ಅವಿಭಾಜ್ಯ ಅಂಗ. ಮಾತೃಭೂಮಿಯ ಬಗ್ಗೆ ನಮಗೆ ಸದಾ ಗೌರವ ಇರಬೇಕು. ಚಾರಿತ್ರ್ಯ ನಿರ್ಮಾಣ ಸಾಧ್ಯವಾದರೆ ಮಾನವ ದೇವನಾಗಬಲ್ಲನೆಂದು ಗೌರವ ಅತಿಥಿಗಳಾದ ಪೂಜ್ಯ ಮಂಗಲನಾಥಾನಂದಜಿ ಮಹಾರಾಜ್ ಜಿ ರಾಮಕೃಷ್ಣ ಮಠ ಬೆಂಗಳೂರು ಇವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕವು ದಿನಾಂಕ 28-7-19 ರಂದು ಬೆಂಗಳೂರಿನ ಹಿಮಾಂಶುಜ್ಯೋತಿ ಕಲಾಪೀಠದಲ್ಲಿ ಆಯೋಜಿಸಿದ್ದ ೩೪ನೇ ಪ್ರತಿಭಾ ಪುರಸ್ಕಾರ […]

ರಾಷ್ಟ್ರೀಯ ಶಿಕ್ಷಣ ನೀತಿ - ಚಿಂತನ-ಮಂಥನ

ರಾಷ್ಟ್ರೀಯ ಶಿಕ್ಷಣ ನೀತಿ – ಚಿಂತನ-ಮಂಥನ

ನಮ್ಮ ರಾಷ್ಟ್ರದ ಶಿಕ್ಷಣ ನೀತಿ ಹೇಗಿರಬೇಕೋ ಅದೇ ಕಲ್ಪನೆಯಲ್ಲಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುಪ್ರತಿ ತಯಾರಾಗಿದೆಯೆಂದು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯರಾದ ಪ್ರೋ|| ಎಂ.ಕೆ ಶ್ರೀಧರ್‌ರವರು ದಿನಾಂಕ 20-6-2019 ರಂದು ಶಾಸಕರಭವನ, ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ-2049 (ಕರಡು), ಚಿಂತನ-ಮಂಥನದಲ್ಲಿ ಹೇಳಿದರು. ಹೊಸ ಶಿಕ್ಷಣ ನೀತಿಯ ಅನೇಕ ಬಿಂದುಗಳ ಮೇಲೆ ಶಿಕ್ಷಣ ತಜ್ಞರು, ಶಾಸಕರು, ವಿಧಾನಪರಿಷತ್ತಿನ ಸದಸ್ಯರು, ವಿದ್ವಾಂಸರು, ಶಿಕ್ಷಕರು ಸವಿಸ್ತಾರವಾಗಿ ಚರ್ಚಿಸಿದರು. ಮೂರು ವರ್ಷದಿಂದ […]

ಶಿಕ್ಷಣದಲ್ಲಿ ಹೊಸ ಪ್ರಯೋಗಗಳು

ಶಿಕ್ಷಣದಲ್ಲಿ ಹೊಸ ಪ್ರಯೋಗಗಳು

ಸರಕಾರ ಮಾಡುತ್ತದೆಂದು ಭರವಸೆಯನ್ನಿಟ್ಟುಕೊಂಡು ಕಾಯುವ ಬದಲಿಗೆ ಸಮಾಜದ ಎಲ್ಲಾ ವ್ಯಕ್ತಿಗಳು ಸಮಾಜದ ಉದ್ಧಾರಕ್ಕಾಗಿ ಬದ್ಧತೆಯಿಂದ ಕಾರ್‍ಯ ನಿರ್ವಹಿಸಬೇಕಿದೆ. ರಾಜಸ್ತಾನದ ಒಂದು ಹಳ್ಳಿಯ ಪಾಠಶಾಲೆಯಲ್ಲಿ ಶಿಕ್ಷಕರ ಅಭಾವವಿದ್ದುದರಿಂದ ಆ ಹಳ್ಳಿಯ ವಿದ್ಯಾವಂತ ನಿರುದ್ಯೋಗಸ್ಥ ಹೆಣ್ಣು ಮಕ್ಕಳು ವೇತನವನ್ನೂ ಪಡೆಯದೇ ಮಕ್ಕಳಿಗೆ ಬೋಧಿಸುತ್ತಿರುವ ಉದಾಹರಣೆಯನ್ನು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ದಿಲ್ಲಿಯ ಸಂಘಟನಾ ಮಂತ್ರಿಯಾಗಿರುವ ಶ್ರೀ ಮಹೇಂದ್ರ ಕಪೂರ್‌ಜೀಯವರು ಬೆಂಗಳೂರಿನ ಮೈಂಡ್ ಟ್ರೀ ಸಾಪ್ಟ್‌ವೇರ್ ಕಂಪನಿಯಲ್ಲಿ ಅನೇಕ NGO ಗಳೊಂದಿಗೆ ದಿನಾಂಕ 29-4-2019 ರಂದು ನಡೆದ ಸಭೆಯಲ್ಲಿ ತಿಳಿಸಿದರು. […]

ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ ಸಹಯೋಗದಲ್ಲಿ ಕಳೆದ 12 ವರ್ಷಗಳಿಂದ ಹೊರತರಲಾಗುತ್ತಿರುವ ಈ ಯುಗಾದಿ ಹೊಸವರ್ಷದ ಕ್ಯಾಲೆಂಡರ್ ಮುದ್ರಣವು ಶ್ಲಾಘನೀಯವಾದ ಕಾರ್ಯ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಈ ಕಾರ್ಯ ಮಾಡಿಸಲು ಮುಂದಿನ ದಿನಗಳಲ್ಲಿ ಒಂದು ಪ್ರಯತ್ನ ಮಾಡೋಣ ಹೀಗೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಯುತ ಚಿದಾನಂದ ಪಾಟೀಲರು ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಹಾರೈಕೆಗಳೊಂದಿಗೆ ಹಿತನುಡಿ ನುಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರಜಿಲ್ಲೆ ಹಾಗೂ ಬೆಂಗಳೂರು […]

ರಾಜ್ಯ ಕಾರ್‍ಯಕಾರಿಣಿ

ರಾಜ್ಯ ಕಾರ್‍ಯಕಾರಿಣಿ

ದಿನಾಂಕ 17-3-2019 ರಂದು ಶೇಷಾದ್ರಿಪುರಂನಲ್ಲಿ ಶಿಕ್ಷಕ ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಈ ಶೈಕ್ಷಣಿಕ ವರ್ಷದ ಕೊನೆಯ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. ಎಂದಿನಂತೆ ಸರಸ್ವತಿಯ ಪ್ರಾರ್ಥನೆ, ಸಹಪ್ರಧಾನ ಕಾರ್ಯದರ್ಶಿಗಳಿಂದ ಸ್ವಾಗತ, ಪ್ರಧಾನ ಕಾರ್ಯದರ್ಶಿಗಳಿಂದ ಹಿಂದಿನ ಸಭೆಯ ನಡಾವಳಿ ಮಂಡನೆ ನಡೆಯಿತು. ನಂತರ ಆಯಾ ಜಿಲ್ಲೆಗಳ ಕಾರ್ಯಕರ್ತರು ವರದಿ ವಿವರ ನೀಡಿದರು. ಈ ಬಾರಿ 20 ಜಿಲ್ಲೆಗಳಲ್ಲಿ ಕರ್ತವ್ಯ ಬೋಧ್ ದಿವಸ್ ನಡೆದದ್ದು ವಿಶೇಷ ಎನಿಸಿತು. ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳಿಗಾಗಿ ಸಂಘದಿಂದ ಅನೇಕ ಉಪಯುಕ್ತ ಕಾರ್ಯಕ್ರಮಗಳು ನಡೆದ ಬಗ್ಗೆ ವಿವರ […]

ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್ಯಾಗಾರ

ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್ಯಾಗಾರ

ಮೌಲ್ಯಮಾಪನ ಬಹುದೊಡ್ಡ ವಿಚಾರವಾಗಿದ್ದು, ಅದನ್ನು ಬಹು ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ ಎಂದು ಬೆಂಗಳೂರಿನ ಶೇಷಾದ್ರಿಪುರನಲ್ಲಿರುವ ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ದಿನಾಂಕ 10-2-2019 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್‍ಯಾಗಾರದಲ್ಲಿ ಶೈಕ್ಷಿಕ್ ಮಹಾಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಶಿವಾನಂದ ಸಿಂಧನಕೇರಾರವರು ಹೇಳಿದರು. ವಂದೇ ಮಾತರಂ ಮತ್ತು ತಾಯಿ ಶಾರದೆಯನ್ನು ನೆನೆಯುತ್ತ ಇಂದಿನ ಶಿಕ್ಷಣ ಮತ್ತು ಶಿಕ್ಷಕರ ಕಾರ್ಯಗಳ ಬಗ್ಗೆ ಮಾತನಾಡುತ್ತಾ, ಇಂದು ಪ್ರೌಢಶಿಕ್ಷಣ ಎಂಬ […]

Highslide for Wordpress Plugin