ಗುರುವಂದನಾ ಕಾರ್ಯಕ್ರಮ - ಬೆಂಗಳೂರು ದಕ್ಷಿಣ ಜಿಲ್ಲೆ

ಗುರುವಂದನಾ ಕಾರ್ಯಕ್ರಮ – ಬೆಂಗಳೂರು ದಕ್ಷಿಣ ಜಿಲ್ಲೆ

ಜಗದ್ಗುರುವಾದ ಶ್ರೀಕೃಷ್ಣನಿಗೆ ಗುರುವಾದ ಸಾಂದೀಪನಿ ಮಹರ್ಷಿಗಳ ಹೆಸರಿನಿಂದ ವಿರಾಜಮಾನವಾದ ಹಾಗೂ ನಮಗೆಲ್ಲರಿಗೂ ಮಹಾಗುರುವಾದ ಶ್ರೀ ಕೃ ನರಹರಿರವರ ಕಾರ್ಯಕ್ಷೇತ್ರವಾದ ಸಾಂದೀಪನ ವಿದ್ಯಾಭವನ, ಶ್ರೀರಾಮಪುರದಲ್ಲಿ 31-7-2021 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ಗುರುವಂದನಾ ಕಾರ್ಯಕ್ರಮವನ್ನು ಕೇಂದ್ರ ಸಂಘದ ನಿರ್ದೇಶನದಂತೆ ಕೋವಿಡ್ ನಿಯಮವನ್ನು ಪಾಲಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀಮತಿ ಮಾಯಾಪ್ರಭು, ಜಿಲ್ಲಾ ಖಜಾಂಚಿರವರು ಶಾರದೆಯನ್ನು ಸ್ತುತಿಸಿ ಶುಭಾರಂಭಿಸಿದರು. ಗಣ್ಯರು ದೀಪ ಬೆಳಗಿ ಮಹರ್ಷಿ ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷರಾದ ಶ್ರೀ […]

ಗುರುವಂದನಾ ಕಾರ್ಯಕ್ರಮ - ಬೆಂಗಳೂರು ಉತ್ತರ

ಗುರುವಂದನಾ ಕಾರ್ಯಕ್ರಮ – ಬೆಂಗಳೂರು ಉತ್ತರ

29-07-2021 ರಂದು ಸಂಘದ ಕೇಂದ್ರ ಕಾರ್ಯಾಲಯ ಯಾದವಸ್ಮತಿಯಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು 2020-21 ನೇ ಸಾಲಿನ SSLC ಮಕ್ಕಳಿಗೆ ಸಂಘದ ವತಿಯಿಂದ ಆಯೋಜಿಸಿದ ಪೋನ್-ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಸಂಪನ್ಮೂಲ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಖಜಾಂಚಿಗಳಾದ ಶ್ರೀ ಹರಿದಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ಟರವರು ಗಣ್ಯರ ಪರಿಚಯ ಮಾಡಿ ಸ್ವಾಗತಿಸಿದರು. ವೇದವ್ಯಾಸರು ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ […]

ಗುರುವಂದನಾ ಕಾರ್ಯಕ್ರಮ - ಗುಲ್ಬರ್ಗ

ಗುರುವಂದನಾ ಕಾರ್ಯಕ್ರಮ – ಗುಲ್ಬರ್ಗ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ವತಿಯಿಂದ ಆರ್ ಜೆ ಪಿಯು ಕಾಲೇಜಿನಲ್ಲಿ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಬೌದ್ಧಿಕ ಪ್ರಮುಖರಾದ ಶ್ರೀ ಕೃಷ್ಣ ಜೋಶಿಯವರು ಮಾತನಾಡುತ್ತಾ ಆಷಾಡ ಮಾಸ ಶುಕ್ಲಪಕ್ಷದ ಹುಣ್ಣಿಮೆಯ ದಿವಸವನ್ನು ಗುರುಪೌರ್ಣಿಮೆ ಎಂದು ಆಚರಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ಇದೆ. ಮಹರ್ಷಿ ವೇದವ್ಯಾಸರೇ ಈ ಗುರುಪರಂಪರೆಗೆ ಬುನಾದಿ ಹಾಕಿದ್ದಾರೆ ಎಂದು ಹೇಳಿದರು. ಗುರುಪರಂಪರೆ ಭಾರತದಲ್ಲಿ ಅತ್ಯಂತ […]

ಕೊರೋನಾ ತಡೆಗಟ್ಟುವಲ್ಲಿ ಆಯುರ್ವೇದ

ಕೊರೋನಾ ತಡೆಗಟ್ಟುವಲ್ಲಿ ಆಯುರ್ವೇದ

‘ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕರ ಹಿತಕ್ಕಾಗಿ ಸಮಾಜ ಎಂಬ ಧ್ಯೇಯ ವಾಕ್ಯದೊಂದಿಗೆ ಸುಮಾರು 34 ವರ್ಷಗಳಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರಸ್ತುತ ಕೊರೊನಾ ಸಂಕಷ್ಟದ ವಿಷಮ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಆತ್ಮ ಸ್ಥೈರ್ಯ, ಮನೋಸ್ಥೈರ್ಯ, ಮನೋಬಲ ತುಂಬುವ ಕೆಲಸ ವಿವಿಧ ಹಂತಗಳಲ್ಲಿ ಮಾಡುತ್ತಾ ಬಂದಿದೆ. ಆಯುರ್ವೇದ ತಜ್ಞರು, ಅಂಕಣಕಾರರಾದ ಖ್ಯಾತ ವೈದ್ಯ ಡಾ|| ಗಿರಿಧರ ಕಜೆ ಅವರು ಕೊರೊನಾವನ್ನು ಎದುರಿಸಲು ಸಹಕಾರಿಯಾಗುವ ಬಹಳ ಉಪಯುಕ್ತ […]

ಕೊರೋನಾ ಕಾಲದಲ್ಲಿ ರಕ್ತದಾನ ಬಹಳ ಮುಖ್ಯ

ಕೊರೋನಾ ಕಾಲದಲ್ಲಿ ರಕ್ತದಾನ ಬಹಳ ಮುಖ್ಯ

ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂಬ ಮಾತಿದೆ. ಯಾವ ವ್ಯಕ್ತಿಗೆ ರಕ್ತದ ಅವಶ್ಯವಿದೆಯೋ ಅವರಿಗೆ ರಕ್ತವನ್ನು ನೀಡುವುದು ಪುಣ್ಯದ ಕಾರ್ಯ. ಅಂತೆಯೇ ಕೊರೋನಾ ಸಂಕಷ್ಟ ಕಾಲದಲ್ಲಿ ರಕ್ತದ ಅವಶ್ಯಕತೆ ಬಹಳ ಜನರಿಗಿದ್ದು ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಬಹುದೆಂದು ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್ ಅಭಿಪ್ರಾಯ ಪಟ್ಟರು. ಕನಕಪುರ ತಾಲೂಕಿನ ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಹಾರೋಹಳ್ಳಿ ವಿದ್ಯಾಸಂಸ್ಥೆ, ವರ್ತಕರ ಸಂಘ, ಹಿತ ರಕ್ಷಣಾ ಸಮಿತಿ, ಮಾಧ್ಯಮಿಕ ಶಿಕ್ಷಕ ಸಂಘ ಸಂಯುಕ್ತಾಶ್ರಯದಲ್ಲಿ ಮತ್ತು […]

ರಾಜ್ಯದ ವಿವಿಧೆಡೆಗಳಲ್ಲಿ ಪೋನ್ ಇನ್ ಕಾರ್ಯಕ್ರಮ

ರಾಜ್ಯದ ವಿವಿಧೆಡೆಗಳಲ್ಲಿ ಪೋನ್ ಇನ್ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ವತಿಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಪೋನ್ ಇನ್ ಕಾರ್ಯಕ್ರಮ ನಡೆಯಿತು. ಬೆಂಗಳೂರು ಉತ್ತರ ಜಿಲ್ಲೆ 30-6-2021 ರಂದು ಬೆಂಗಳೂರು ಉತ್ತರ ಸಾ.ಶಿ.ಇಲಾಖೆಯ ಉಪ ನಿರ್ದೇಶಕರಾದ ಶ್ರೀ ನಾರಾಯಣ ಸರ್ ಪೋನ್ ಇನ್ ಕಾರ್ಯಕ್ರಮದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡುವುದರ ಮೂಲಕ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್, ಜಿಲ್ಲಾ ಅಧ್ಯಕ್ಷ ಗಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಭಟ್, ಶಿಕ್ಷಕ ಸಂಘದ ಪ್ರಮುಖರಾದ ಪ್ರದೀಪ್ ಎ.ಸಿ, ಹರಿದಾಸ್, ಕುಮಾರ […]

ಶಿಕ್ಷಕ ಸಂಘದಿಂದ ಮಾನ್ಯ ಶಿಕ್ಷಣ ಸಚಿವರಿಗೆ ಮನವಿ

ಶಿಕ್ಷಕ ಸಂಘದಿಂದ ಮಾನ್ಯ ಶಿಕ್ಷಣ ಸಚಿವರಿಗೆ ಮನವಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು 1-7-2021 ರಂದು ಮಾನ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ಎಸ್. ಸುರೇಶ ಕುಮಾರ ಅವರನ್ನು ಭೇಟಿ ಮಾಡಿ, ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಪರಿಷ್ಕರಿಸಿ 45 ದಿನಗಳಿಗೆ ಮಿತಿಗೊಳಿಸಿ ಆದೇಶಿಸುವಂತೆ ಮನವಿ ಮಾಡಲಾಯಿತು. ಕ.ರಾ.ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರು ಹಾಗೂ ಎಂ.ಎಲ್.ಸಿ ಆಗಿರುವ ಶ್ರೀಯುತ ಅರುಣ ಶಹಾಪುರ, ಎಂ.ಎಲ್.ಸಿ.ಗಳಾದ ಶ್ರೀಯುತ ಎಸ್.ವಿ ಸಂಕನೂರ, ಕ.ರಾ.ಮಾ.ಶಿ.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಚಿದಾನಂದ ಪಾಟೀಲ, ರಾಜ್ಯ ಖಜಾಂಚಿಗಳಾದ ಶ್ರೀಯುತ ಜೆ. ಎಂ. ಜೋಷಿ, […]

ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಫುಡ್ ಕಿಟ್ ವಿತರಣೆ

ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಫುಡ್ ಕಿಟ್ ವಿತರಣೆ

ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಬೆಂಗಳೂರು ಉತ್ತರ ಜಿಲ್ಲೆಯ ಕೆಲವು ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ವಿತರಣಾ ಕಾರ್ಯಕ್ರಮ ನಡೆಯಿತು. ದಿನಾಂಕ 25-06-2021 ರಂದು ನಮ್ಮ ಸಂಘದ ಕೇಂದ್ರ ಕಛೇರಿಯಲ್ಲಿ (ಬೆಂಗಳೂರು) ಸರಳವಾಗಿ ಸರ್ಕಾರದ ಎಲ್ಲಾ ನಿಯಮಗಳನ್ನೂ ಅನುಸರಿಸುವುದರೊಂದಿಗೆ ಈ ಕಾರ್ಯಕ್ರಮ ನಡೆಯಿತು. ನಮ್ಮ ಸಂಘದ ಹಿರಿಯರು ಹಾಗೂ ಕಾರ್ಯಾಲಯ ಪ್ರಮುಖರಾದ ಶ್ರೀ ಜಿ ಎಸ್ ಕೃಷ್ಣಮೂರ್ತಿಯವರು ಈ ಸತ್ಕಾರ್ಯವನ್ನು ನಡೆಸಿಕೊಟ್ಟರು. ಶ್ರೀಯುತರು ಸ್ವಂತ ಹಣವನ್ನು ವಿನಿಯೋಗಿಸಿ ಸಂತ್ರಸ್ತರಿಗೆ ಆಹಾರದ ನೆರವು ನೀಡಿದ್ದು […]

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಸಹಯೋಗದೊಂದಿಗೆ ದಿನಾಂಕ 10-4-2021, ಶನಿವಾರದಂದು ಸಂಘದ ಕೇಂದ್ರ ಕಛೇರಿ ಯಾದವಸ್ಮೃತಿಯಲ್ಲಿ ಯುಗಾದಿ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ನೆರವೇರಿತು. ಶ್ರೀಮತಿ ಸುಭದ್ರ, ಪವನ್ ಇಂಗ್ಲೀಷ್ ಸ್ಕೂಲ್‌ರವರು ವಿದ್ಯಾಧಿದೇವತೆಯಾದ ಸರಸ್ವತಿಯ ಪ್ರಾರ್ಥನೆಯನ್ನು ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಡಾ|| ವೆಂಕಟರಮಣ ದೇವರು ಭಟ್, ಬೆಂಗಳೂರು ದಕ್ಷಿಣ ಜಿಲ್ಲಾಕಾರ್ಯದರ್ಶಿರವರು ಯುಗಾದಿಯ ಆಚರಣೆ ಭಾರತೀಯ ಪರಂಪರೆಯಲ್ಲಿ ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ತಿಳಿಸಿ, ಗಣ್ಯರನ್ನು ಪರಿಚಯಿಸಿ ಸ್ವಾಗತ […]

ರಾಜ್ಯದ ವಿವಿಧೆಡೆ ಸಂಘದ ಸದಸ್ಯತ್ವ ಅಭಿಯಾನ

ರಾಜ್ಯದ ವಿವಿಧೆಡೆ ಸಂಘದ ಸದಸ್ಯತ್ವ ಅಭಿಯಾನ

ಪ್ರತಿ ವರ್ಷವು ಶಾಲಾ ಕಾಲೇಜುಗಳ ಪ್ರಾರಂಭದ ಅವಧಿ, ಜೂನ್ ಜುಲೈ ತಿಂಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿತ್ತು. ಈ ವರ್ಷ ಕೋವಿಡ್-19 ರ ಕಾರಣಕ್ಕಾಗಿ ಸದಸ್ಯತ್ವ ಅಭಿಯಾನ ಆ ತಿಂಗಳಲ್ಲಿ ನಡೆಯುವುದಿಲ್ಲ. ಅದಕ್ಕಾಗಿ ಮಾರ್ಚ್ 17, 2021 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ದಿನದ ಸದಸ್ಯತ್ವ ಅಭಿಯಾನವನ್ನು ಮಾಡುವುದು ಎಂದು ಸಂಘದ ಕೋರ್‌ ಕಮಿಟಿ ನಿರ್ಧರಿಸಿದಂತೆ ರಾಜ್ಯದಲ್ಲಿ ಪೂರ್ವ ಮತ್ತು ಯೋಜನಾ ಬದ್ಧವಾಗಿ ತಯಾರಿಯನ್ನು ಮಾಡಲಾಗಿತ್ತು. ಅಂದು ಬೆಳಿಗ್ಗೆ 8.30 ರಿಂದ ಪ್ರಾರಂಭವಾದ ಸದಸ್ಯತ್ವ ಅಭಿಯಾನ ಸಂಜೆಯವರೆಗೂ […]

Highslide for Wordpress Plugin