ದಿನಾಂಕ 14-4-2022 ರ ಗುರುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಮತು ದಕ್ಷಿಣ ಜಿಲ್ಲೆಗಳ ವತಿಯಿಂದ ಸಂಘದ ಕೇಂದ್ರ ಕಛೇರಿ ಯಾದವಸ್ಮೃತಿಯಲ್ಲಿ ಹಮ್ಮಿಕೊಂಡಿದ್ದ ಯುಗಾದಿ ದಿನದರ್ಶಿಕೆ ಲೋಕಾರ್ಪಣೆ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫೋನ್‌ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಪನ್ಮೂಲ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಉತ್ತರಜಿಲ್ಲಾ ಖಜಾಂಚಿಗಳಾದ ಶ್ರೀ ಹರಿದಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀಯುತ ಸುರೇಂದ್ರ, ಅಧ್ಯಕ್ಷರು, ಕ.ರಾ.ಮಾ.ಶಿ.ಸ ಬೆಂಗಳೂರು ದಕ್ಷಿಣ ಜಿಲ್ಲೆ ಇವರು ಎಲ್ಲರಿಗೂ ಸ್ವಾಗತವನ್ನು ಕೋರಿದರು. ಶ್ರೀ ಜೆ.ಎಂಜೋಷಿ, ರಾಜ್ಯಕೋಶಾಧ್ಯಕ್ಷರು ತಮ್ಮ […]
ಆಂಗ್ಲ ಭಾಷೆ ಪಾಸಿಂಗ್ ಪ್ಯಾಕೇಜ್ ಕಾರ್ಯಕ್ರಮ ದಿನಾಂಕ 30-3-2022 ರಂದು ಮಾಧ್ಯಮಿಕ ಶಿಕ್ಷಕ ಸಂಘ, ಸರ್ಕಾರಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘ ಹರಪನಹಳ್ಳಿ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಪಿಯುಸಿ ಮಕ್ಕಳಿಗೆ ಒಂದು ದಿನದ ಆಂಗ್ಲ ಭಾಷೆಯ ಬಗ್ಗೆ ಪಾಸಿಂಗ್ ಪ್ಯಾಕೇಜ್ ಕಾರ್ಯಕ್ರಮದಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬಂಗಿ ಬಸಪ್ಪ ಕಾಲೇಜ್, ಹರಪನಳ್ಳಿಯ ಶ್ರೀ ಅರುಣ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಆರ್ ಕೊಟ್ರಪ್ಪ, ರಾಜ್ಯ ಉಪಾಧ್ಯಕ್ಷರು ಕರಾಮಾಶಿ ಸಂಘ, ಭಾಗವಹಿಸಿದ್ದರು. […]
NEP 2020 TASK FORCE ಚೇರ್ಮನ್‌ರಾದ ಶ್ರೀ ಮದನಗೋಪಾಲ್ ರವರನ್ನು ಮಧ್ಯಮಿಕ್ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಿದಾನಂದ ಪಾಟೀಲ್ ಅವರ ಜೊತೆ ಭೇಟಿಯಾಗಿ ಹಿಂದಿ ವಿಷಯದ ತ್ರಿಭಾಷಾ ಸೂತ್ರದ ಬಗ್ಗೆ ವಿಚಾರಿಸಿದಾಗ ಒಂದನೇ ತರಗತಿಯಿಂದ ತ್ರಿಭಾಷಾ ಸೂತ್ರ ಅಳವಡಿಸಲು ಪೋಸಿಶನ್ ಪೇಪರ್‌ನಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು. ಈ ವಿಷಯ ಹಿಂದಿ ಶಿಕ್ಷಕರಿಗೆ ಅತೀವ ಸಂತೋಷವನ್ನು ತಂದಿದೆ ಹಿಂದಿ ಶಿಕ್ಷಕ ಸಂಘದ ಪರವಾಗಿ ಮಾನ್ಯರಿಗೆ ಧನ್ಯವಾದಗಳು.
ಗುಣಾತ್ಮಕ ಶಿಕ್ಷಣಕ್ಕಾಗಿ ಇಲಾಖೆಯ ಉನ್ನತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಬಹುದು ಆದರೆ ಅವುಗಳನ್ನು ಕಾರ್ಯರೂಪಕ್ಕೆ ತಂದು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಅನುಭವಿ ಶಿಕ್ಷಕರ ಪಾತ್ರ ಮುಖ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಗರಿಮಾ ಪಂವಾರ್ ಹೇಳಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಇಲ್ಲಿಯ ಆರ್.ಜೆ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳ ಅಭಿನಂದನಾ ಹಾಗೂ ಸಮಾರೋಪ ಸಮಾರಂಭವನ್ನು ಉದ್ಛಾಟಿಸಿ ಅವರು ಮಾತನಾಡಿದರು. ಇಲ್ಲಿರುವ ಸಂಪನ್ಮೂಲ ಶಿಕ್ಷಕರು ಅನುಭವದಲ್ಲಿ ನನಗಿಂತ […]
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ ಅವರನ್ನು ಭೇಟಿ ಮಾಡಿ, * ಸಂಸ್ಕೃತ ವಿಷಯದ ವಿಧ್ಯಾರ್ಥಿಗಳ ಶಿಷ್ಯವೇತನಕ್ಕೆ ಪ್ರತ್ಯೇಕ ಹೆಡ್ ರಚನೆ. * ಕೋವಿಡ್ ಕಾರ್ಯ ಮಾಡಿದ ಪಿ.ಯು. ಅನುದಾನಿತ ಉಪನ್ಯಾಸಕರಿಗೆ ಗಳಿಕೆ ರಜೆ ನೀಡುವುದು. * ಜೆ.ಓ.ಸಿ.ಯಿಂದ ವಿಲೀನವಾದ ಉಪನ್ಯಾಸಕರಿಗೆ ಬಿ.ಇಡಿ. ಮಾಡಿಸುವ ಬಗ್ಗೆ. ಹೀಗೆ ಅನೇಕ ಶೈಕ್ಷಣಿಕ ಸಮಸ್ಯೆಗಳನ್ನು ಚರ್ಚಿಸಿದರು. ಜೊತೆಯಲ್ಲಿ ಮಾಧ್ಯಮಿಕ ಶಿಕ್ಷಕ ಸಂಘದಿಂದ ನಡೆಯುತ್ತಿರುವ ಪೋನ್ ಇನ್ ಕಾರ್ಯಕ್ರಮ […]
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರೌಢಶಾಲಾ ವಿಭಾಗದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸುಮಾರು ವರ್ಷಗಳಿಂದ ಆ ಶಾಲೆ ಹಿರಿಯ ಸಹ ಶಿಕ್ಷಕರುಗಳು ಕಾರ್ಯನಿರ್ವಹಿಸುತ್ತಿರುವರು ಪ್ರತ್ಯೇಕವಾದ DDO ಕೋಡ್ ಹೊಂದಿರುವ ಪ್ರೌಢ ವಿಭಾಗದಲ್ಲಿ ಅವರಿಗೆ ಪ್ರಭಾರ ಭತ್ಯೆ, ಗಳಿಕೆ ರಜೆಯನ್ನು ಕೊಡುತ್ತಿದ್ದು, ಈಗ ಪ್ರೌಢ ವಿಭಾಗದಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಸೃಷ್ಟಿಸಿಲ್ಲ ಎಂದು ಆದೇಶದಲ್ಲಿ ತಿಳಿಸಿರುವುದು, ಗೊಂದಲ ಸೃಷ್ಟಿಸಿದೆ. ಹೀಗಾಗಿ ಪ್ರಭಾರ ಭತ್ಯೆ, ಗಳಿಕೆ ರಜೆ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಸುಮಾರು ಬಾರಿ ಮುಖ್ಯೋಪಾಧ್ಯಾಯರಿಗೆ ಬಡ್ತಿ ಕೊಟ್ಟರೂ ಸಹ […]
ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು ಸ್ವಾತಂತ್ರ್ಯದ ಅಮೃತೋತ್ಸವದ ಸಂದರ್ಭದಲ್ಲಿ ಆಗಸ್ಟ್ 1 ರಂದು ಒಂದೇ ದಿನ ಒಂದು ಲಕ್ಷ ವಿದ್ಯಾಲಯಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ದೇಶದ 75 ವಿಶ್ವವಿದ್ಯಾಲಯಗಳಲ್ಲಿ ಅಮೃತೋತ್ಸವದ ವಿಷಯದಲ್ಲಿ ಸೆಮಿನಾರ್‌ಗಳನ್ನು ಮತ್ತು 750 ಮಹಾವಿದ್ಯಾಲಯಗಳಲ್ಲಿ ವ್ಯಾಖ್ಯಾನವನ್ನು ಆಯೋಜಿಸುವ ಗುರಿಯನ್ನು ಹೊಂದಿದೆ ಎನ್ನುವ ನಿರ್ಣಯವನ್ನು ಗುಜರಾತ್ ರಾಜ್ಯದ ವಡೋದರದ ಓಂ ರೀಜೆನ್ಸಿಯಲ್ಲಿ ದಿನಾಂಕ 26 ಮತ್ತು 27 ರ ಫೆಬ್ರವರಿ 2022 ರಂದು ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ […]