ಜಗತ್ತಿನಲ್ಲಿಯೇ ಗುರುವಿಗೆ ಗೌರವ ನೀಡುವ ಏಕೈಕ ದೇಶ ಭಾರತ

ಜಗತ್ತಿನಲ್ಲಿಯೇ ಗುರುವಿಗೆ ಗೌರವ ನೀಡುವ ಏಕೈಕ ದೇಶ ಭಾರತ

ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರ್ಗಿ ದಿ: 6-8-15 ರಂದು ನಗರದ ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ‘ಗುರುವಂದನಾ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಬೀದರನ ಚಿದಂಬರಾಶ್ರಮದ ಪ.ಪೂ.ಶ್ರೀ ಶಿವಕುಮಾರ ಮಾಹಸ್ವಾಮೀಜಿ ಯವರು ಮಾತನಾಡಿ, ಸುಸಂಸ್ಕೃತ ಜನರು ಇರುವ ಭಾರತ ದೇಶ ಗುರು ಗೌರವ ದೇಶ. ಗುರುವನ್ನು ಪರಮಾತ್ಮ ಎಂದು ಸಂಭೋದಿಸುವ ರಾಷ್ಟ್ರ ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತ ದೇಶದಲ್ಲಿ ಗುರು ಪರಂಪರೆ ಪುರಾತನ ಕಾಲದಿಂದಲೂ ಇದೆ. ದೇವ ದೇವತೆಗಳಿಗೂ ಗುರುಗಳ […]

ಗದಗ ಜಿಲ್ಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಗದಗ ಜಿಲ್ಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸೆಕೆಂಡರಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಗದಗ ಆಶ್ರಯದಲ್ಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎನ್.ವಿ ಪಾಟೀಲ್ ಶಿಕ್ಷಕರ ಮನೆಯ ಮೇಲಿನ ವೇದಿಕೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮವನ್ನು ದಿನಾಂಕ: 4-8-2015 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಶ್ರೀ ಸಿ.ಆರ್ ಹಿರೇಮಠ ಶಿಕ್ಷಕರು ಸ್ವಾಗತ ಮತ್ತು ಪರಿಚಯದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದವೀಧರ ಮತದಾರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ವಿ ಸಂಕನೂರು ಗುರುಗಳು ಆಗಮಿಸಿದ್ದರು. ಹಾಗೂ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಸ್ಥಳೀಯ […]

ಜಾತಿ ಧರ್ಮಗಳಿಗೆ ಜೋತು ಬೀಳದಿರಿ - ಡಾ|| ಬಿ.ಜೆ.ವಿ ವಸಂತಕುಮಾರ್ ಕರೆ

ಜಾತಿ ಧರ್ಮಗಳಿಗೆ ಜೋತು ಬೀಳದಿರಿ – ಡಾ|| ಬಿ.ಜೆ.ವಿ ವಸಂತಕುಮಾರ್ ಕರೆ

ಮೈಸೂರಿನ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ 2-8-2015 ಭಾನುವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಹಾರಾಣಿ ಪದವಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|| ಬಿ.ಜಿ.ವಿ ವಸಂತ ಕುಮಾರ್ ಅವರು ಮಾತನಾಡಿ ಗುರುವಿನ ಸ್ಥಾನದಲ್ಲಿರುವವರು ಯಾವುದೇ ಜಾತಿ, ಧರ್ಮಗಳಿಗೆ ಜೋತುಬೀಳದೆ ಎಲ್ಲ ವಿದ್ಯಾರ್ಥಿಗಳನ್ನು ಸಮಾನರಾಗಿ ಕಾಣುವುದು ಮುಖ್ಯ ಎಂದು ತಿಳಿಸಿದರು. ಸಮಾಜಕ್ಕೆ ಉತ್ತಮ ಗುರುವಿನ ಅವಶ್ಯಕತೆಯಿದ್ದು, ಗುರುವಿನ ಸ್ಥಾನದಲ್ಲಿರುವವರು ತಮ್ಮ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಅಧ್ಯಾಪಕರು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡರೆ ಉತ್ತಮ ವಿದ್ಯಾರ್ಥಿಗಳನ್ನು […]

ಭಾರತ - ಜಗತ್ತಿಗೇ ಗುರು

ಭಾರತ – ಜಗತ್ತಿಗೇ ಗುರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ತಿಪ್ಪೇಸ್ವಾಮಿಯವರು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾರತ ಜಗತ್ತಿಗೇ ಗುರು. ಇದು ದೇವ ಭೂಮಿ. ಗಣಿತ, ವಿಜ್ಞಾನ, ಸಾಹಿತ್ಯ, ಆಯುರ್ವೇದ, ಯೋಗ ಮುಂತಾದವುಗಳನ್ನು ಜಗತ್ತಿಗೆ ಕಲಿಸಿಕೊಟ್ಟಿದೆ ಎಂದು ತಿಳಿಸಿದರು. ಅವರು ವೇದವ್ಯಾಸರನ್ನು ಸ್ಮರಿಸುತ್ತಾ ನಮ್ಮ ಗುರುಪರಂಪರೆಯ ಶ್ರೇಷ್ಠತೆಯ ಬಗ್ಗೆ ತಿಳಿಸಿದರು. ಕಬೀರರು ತಮ್ಮ ದೋಹೆಯಲ್ಲಿ ಗುರು ಮತ್ತು ಗೋವಿಂದ ಒಟ್ಟಿಗೆ ಬಂದಾಗ ಮೊದಲು ಗುರುವಿಗೆ, ನಂತರ ದೇವರಿಗೆ ಪ್ರಣಾಮಗಳನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ. ದ್ರೋಣ-ಅರ್ಜುನ, ರಾಮಕೃಷ್ಣ ಪರಮ […]

30 ನೆಯ ಪ್ರತಿಭಾ ಪುರಸ್ಕಾರ

30 ನೆಯ ಪ್ರತಿಭಾ ಪುರಸ್ಕಾರ

ಜೂನ್ ತಿಂಗಳ 28 ರಂದು ಭಾನುವಾರ ಕ.ರಾ.ಮಾ.ಶಿ.ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ ೩೦ನೆಯ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ನಿವೃತ್ತ ರಾಜ್ಯಪಾಲರಾಗಿರುವ ಸನ್ಮಾನ್ಯ ನ್ಯಾಯಮೂರ್ತಿ ಡಾ. ಎಂ. ರಾಮಾ ಜೋಯಿಸ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಭಾರತೀಯ ಸಂಸ್ಕೃತಿ ಪರಂಪರೆಗಳ ಬಗ್ಗೆ ಮಾತನಾಡಿದರು. ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಾಗಿರುವ ಐ.ಎ.ಎಸ್. ಅಧಿಕಾರಿ ಶ್ರೀಮತಿ ವಿ. ರಶ್ಮಿ ಮಹೇಶ್ ಅವರು ಸಮಾರಂಭದಲ್ಲಿ ಪಾಲ್ಗೊಂಡು ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಸಾಧಿಸುವ ಛಲವನ್ನು ಹೇಗೆ […]

ಅತೀ ವೈಭವೀಕರಣ ಬೇಡ ಪಾಲಕರಿಗೆ ಡಾ|| ಗಣೇಶ್ ಭಟ್‌ರ ಕರೆ

ಅತೀ ವೈಭವೀಕರಣ ಬೇಡ ಪಾಲಕರಿಗೆ ಡಾ|| ಗಣೇಶ್ ಭಟ್‌ರ ಕರೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಡಾ|| ಹೆಚ್.ಎಸ್ ಗಣೇಶ್ ಭಟ್ಟರು ಮಾತನಾಡಿ ಅತಿ ಹೆಚ್ಚು ಅಂಕ ಗಳಿಸುವುದು ಸಾಮಾನ್ಯ ಸಾಧನೆ ಅಲ್ಲ. ಅದರ ಹಿಂದೆ ಪರಿಶ್ರಮ, ತಂದೆ- ತಾಯಿಯರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನಗಳು ಕಾರಣ. ಪ್ರತಿ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರು. ಪಾಲಕರಿಗೂ ಕೆಲವು ಸಲಹೆ ನೀಡಿದರು. ಮಕ್ಕಳಿಗೆ ಎಷ್ಟು ಅವಶ್ಯಕತೆಯೋ ಅಷ್ಟೇ ನೀಡಿ […]

ದಕ್ಷಿಣ ಜಿಲ್ಲೆಯ ವತಿಯಿಂದ 30 ನೆಯ ಪ್ರತಿಭಾ ಪುರಸ್ಕಾರ

ದಕ್ಷಿಣ ಜಿಲ್ಲೆಯ ವತಿಯಿಂದ 30 ನೆಯ ಪ್ರತಿಭಾ ಪುರಸ್ಕಾರ

ಜೂನ್ ತಿಂಗಳ 28 ರಂದು ಭಾನುವಾರ ಕ.ರಾ.ಮಾ.ಶಿ. ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 30 ನೆಯ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ನಿವೃತ್ತ ರಾಜ್ಯಪಾಲರಾಗಿರುವ ಸನ್ಮಾನ್ಯ ನ್ಯಾಯಮೂರ್ತಿ ಡಾ. ಎಂ. ರಾಮಾಜೋಯಿಸ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಭಾರತೀಯ ಸಂಸ್ಕೃತಿ ಪರಂಪರೆಗಳ ಬಗ್ಗೆ ಮಾತನಾಡಿದರು. ಸ್ವಾಮಿ ವಿವೇಕಾನಂದರು ಬಾರತದ ಕೀರ್ತಿಪತಾಕೆಯನ್ನು ಜಗತ್ತಿನ ತುಂಬ ಹಾರಿಸಿದ್ದು, ನಮ್ಮದೇಶದ ಸಂಸತ್ ಭವನದಲ್ಲಿರುವ ಘೋಷ ವಾಕ್ಯಗಳ ಬಗ್ಗೆ ತಿಳಿಸಿದರು. ವೇದಗಳು, ಉಪನಿಷತ್ತು, ಭಗವದ್ಗೀತೆಯ ಶ್ಲೋಕಗಳನ್ನು […]

ಉಚಿತ ಹೃದಯ ತಪಾಸಣಾ ಶಿಬಿರ

ಉಚಿತ ಹೃದಯ ತಪಾಸಣಾ ಶಿಬಿರ

ದಿನಾಂಕ 20-06-2015 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಬೆಂಗಳೂರು ಉತ್ತರ ಜಿಲ್ಲಾ ಘಟಕ ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಮಹಿಳಾ ಘಟಕದ ಸಹಯೋಗದೊಂದಿಗೆ ಬೆಂಗಳೂರು ಉತ್ತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಹೃದಯ ತಪಾಸಣೆ, ಮಧುಮೇಹ ಮತ್ತು ರಕ್ತದ ಒತ್ತಡ ಪರೀಕ್ಷೆಗಳ ಶಿಬಿರವನ್ನು ಮಲ್ಲೇಶ್ವರಂನ ಹಿಮಾಂಶು ಜ್ಯೋತಿ ಕಲಾಪೀಠ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ|| ಸಿ.ಎನ್. ಮಂಜುನಾಥ ಮತ್ತು ಅವರ ತಂಡದ ವೈದ್ಯರುಗಳು ತಪಾಸಣೆಗೆ […]

ಪರೀಕ್ಷೆಯನ್ನು ಸಂಭ್ರಮಿಸಿ

ಪರೀಕ್ಷೆಯನ್ನು ಸಂಭ್ರಮಿಸಿ

ಹಿತಮಿತವಾದ ಆಹಾರ ಸೇವನೆ, ಸರಿಯಾಗಿ ನಿದ್ದೆ ಮಾಡುವುದು, ಭಯ ಮತ್ತು ಆತಂಕದಿಂದ ದೂರವಿದ್ದು ಉಲ್ಲಸಿತ ಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಿದರೆ ವಿದ್ಯಾರ್ಥಿಗಳಿಗೆ ಯಶಸ್ಸು ಖಂಡಿತ. ಇದು ಮಾನಸಿಕ ತಜ್ಞರಾದ ಡಾ|| ಸತ್ಯನಾರಾಯಣ ರಾವ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನೀಡಿದ ಕಿವಿಮಾತು. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಗೊಂದಲಗಳಿಗೆ ಒಳಗಾಗಬಾರದು. ವಿಷಯಗಳಿಗೆ ಸಂಬಂಧಿಸಿದ ಅನುಮಾನಗಳನ್ನು ಶಿಕ್ಷಕರ ಬಳಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಪರೀಕ್ಷಾ ಕಾಲದಲ್ಲಿ ಮಾತ್ರ ಹೆಚ್ಚು ಸಮಯ ಓದುವುದರಿಂದ ಮಾನಸಿಕ ಒತ್ತಡಕ್ಕೆ ವಿದ್ಯಾರ್ಥಿಗಳು ಒಳಗಾಗುತ್ತಾರೆ. ಪ್ರಾರಂಭದಿಂದಲೇ ತಯಾರಾಗುತ್ತಾ ಬಂದರೆ ಪರೀಕ್ಷೆಯನ್ನು ಬಹಳ ಸುಲಭವಾಗಿ […]

ನೂತನ ದಿನಚರಿಯ ಲೋಕಾರ್ಪಣೆ

ನೂತನ ದಿನಚರಿಯ ಲೋಕಾರ್ಪಣೆ

ದಿನಾಂಕ: 15-4-2014 ರಂದು ಸಂಘದ ಕಾರ್ಯಾಲಯ ಯಾದವ ಸ್ಮೃತಿ ಶೇಷಾದ್ರಿಪುರಮ್ ಬೆಂಗಳೂರು – ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ‘ದಿನಚರಿಯ ಲೋಕಾರ್ಪಣಾ’ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಏರ್ಪಾಡಾಗಿತ್ತು. ಮುಖ್ಯವಕ್ತಾರರಾಗಿ ಶ್ರೀ ಎಚ್.ನಾಗಭೂಷಣರಾವ್, ಮಾನ್ಯ ಪೋಷಕರು, ಕರ್ನಾಟಕರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಇವರು ಭಾಗವಹಿಸಿ ‘ಯುಗಾದಿಯಿಂದ ಯುಗಾದಿವರೆಗಿನ ದಿನಗಳೇ ನಮ್ಮ ಭಾರತೀಯ ನೂತನವರ್ಷ. ನಮ್ಮ ಸನಾತನ ಪರಂಪರೆ ಅತ್ಯಂತ ಶ್ರೇಷ್ಠವಾದುದು. ಈ ಹಿನ್ನೆಲೆಯಲ್ಲಿ ನಮ್ಮ ಮಾಧ್ಯಮಿಕ ಶಿಕ್ಷಕ ಸಂಘವು ಪ್ರತಿವರ್ಷವೂ ನೂತನ ದಿನದರ್ಶಿಯನ್ನು ಯುಗಾದಿ ದಿನವೇ ಪ್ರಕಾಶಿಸುತ್ತಾ […]

Highslide for Wordpress Plugin