
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ
ದಿನಾಂಕ 10-6-2017 ರಂದು ಸಭೆ ಸೇರಿದ್ದ ಮಾಧ್ಯಮಿಕ ಶಿಕ್ಷಕ ಸಂಘದ ಕೇಂದ್ರ ಪದಾಧಿಕಾರಿಗಳು ಪಠ್ಯ ಪುಸ್ತಕಗಳ ದೋಷಗಳು, ವಿತರಣೆಯಲ್ಲಿನ ಲೋಪ ಹಾಗೂ ಇನ್ನಿತರ ಬೇಡಿಕೆಗಳನ್ನು ಪೂರೈಸಲು ಮುಖ್ಯ ಮಂತ್ರಿಗಳನ್ನು ಆಗ್ರಹಿಸುವಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿಯನ್ನು ನಡೆಸಿ ಶಿಕ್ಷಕರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಬೇಕೆಂದು ಕರೆ ನೀಡಿದ್ದರು. ಈ ಕರೆಗೆ ಅನುಗುಣವಾಗಿ ರಾಜ್ಯದ 20 ಜಿಲ್ಲೆಗಳಲ್ಲಿ ನಮ್ಮ ಸಂಘದ ಪದಾಧಿಕಾರಿಗಳು ಅನೇಕ ಶಿಕ್ಷಕರ ಜೊತೆಯಲ್ಲಿ 2 ಗಂಟೆಗಳ ಕಾಲ ಸತತ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ […]