One day Workshop for Maths-Science Teachers  in Belagavi Dist.

One day Workshop for Maths-Science Teachers in Belagavi Dist.

One day Workshop for Maths-Science Teachers and High school Head Masters of Belagavi dist. arranged by Karnataka Rajya Madhyamik Shikshak Sangh, Belagavi and DDPI office Belagavi on 03-01-2017.

ವಿಧಾನ ಪರಿಷತ್ತಿನಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಶ್ನೆಗೆ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಉತ್ತರ

1. ರಾಜ್ಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಸರ್ಕಾರ ಯಾವ ಯೋಜನೆಗಳನ್ನು ಕೈಗೊಂಡಿದೆ; (ವಿವರ ನೀಡುವುದು) ಉತ್ತರ: ಸರ್ವ ಶಿಕ್ಷಣ ಅಭಿಯಾನದ ಕಂಪ್ಯೂಟರ್ ಆಧಾರಿತ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಕೇಂದ್ರ ಪುರಸ್ಕೃತ ಐಸಿಟಿ ಯೋಜನೆಯಡಿಯಲ್ಲಿ ಆಯ್ದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗಿದೆ. 2016-17ನೇ ಸಾಲಿನಿಂದ ರಾಜ್ಯದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ( ಟಿಎಎಲ್‌ಪಿ) ತಂತ್ರಜ್ಞಾನ ಬೆಂಬಲಿತ […]

ಪರಿವಾರದ ಕೇಂದ್ರಬಿಂದು 'ಸ್ತ್ರೀ'

ಪರಿವಾರದ ಕೇಂದ್ರಬಿಂದು ‘ಸ್ತ್ರೀ’

ವಡೋದರಾ : 2016 ರ ಡಿಸೆಂಬರ್ 17 ಮತ್ತು 18 ರ ಶನಿವಾರ, ಭಾನುವಾರದಂದು ಗುಜರಾತ್ ರಾಜ್ಯದ ವಡೋದರದ ಸ್ವಾಮಿನಾರಾಯಣ ಮಂದಿರದಲ್ಲಿ ಅಖಿಲ ಭಾರತೀಯ ಮಹಿಳಾ ಕಾರ್ಯಕರ್ತೆಯರ ವರ್ಗ ನಡೆಯಿತು. ಡಾ|| ವಿಮಲ್ ಪ್ರಸಾದ್‌ಜೀಯವರು ಶೈಕ್ಷಿಕ ಮಹಾಸಂಘದ ಪರಿಚಯವನ್ನು ಸಭೆಗೆ ಮಾಡಿಸುತ್ತಾ ಪ್ರತಿ ವರ್ಷದ ಜನವರಿ 12 ರಿಂದ 23 ರವರೆಗಿನ ಯಾವುದಾದರೊಂದು ದಿನವನ್ನು ಆಯ್ಕೆ ಮಾಡಿಕೊಂಡು ಕರ್ತವ್ಯಬೋಧ ದಿನವನ್ನಾಗಿ ಆಚರಿಸುವ ರೀತಿ, ಗುರುಪೂರ್ಣಿಮ ದಿನದಂದು ಗುರುವಂದನೆಯನ್ನು ಆಚರಿಸುವ ಬಗ್ಗೆ ಮತ್ತು ವಿಶ್ವ ವಿಭಾಗದ ಶಿಕ್ಷಾ ಭೂಷಣ್ ಸನ್ಮಾನದ ಬಗ್ಗೆಯೂ […]

ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದಲ್ಲಿ ಶಿಕ್ಷಕ ಸಂಘದ ಮಳಿಗೆ

ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದಲ್ಲಿ ಶಿಕ್ಷಕ ಸಂಘದ ಮಳಿಗೆ

ಬೆಂಗಳೂರು : ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದಲ್ಲಿ ಶಿಕ್ಷಕ ಸಂಘವು ಮಳಿಗೆಯನ್ನು ತೆರೆಯಲಾಗಿತ್ತು. ಮಳಿಗೆ 102 ರಲ್ಲಿ ಶಿಕ್ಷಕ ಸಂಘವು ಕೈಗೊಂಡ ಸೇವಾ-ಸಂಸ್ಕಾರ ಚಟುವಟಿಕೆಗೆ ಸಂಬಂಧಿಸಿದ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಇದಲ್ಲದೆ ಶಿಕ್ಷಕ ಸಂಘವು ಶಿಕ್ಷಕರಿಗಾಗಿ ನಡೆಸಿದ ಶೈಕ್ಷಣಿಕ ತರಬೇತಿ, ಸಮಸ್ಯಾ ಪರಿಹಾರಕ್ಕಾಗಿ ಮಾಡಿದ ಹೋರಾಟ, ಮಹಿಳಾ ಚಟುವಟಿಕೆಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿತ್ತು. ನಾವು ಪ್ರಕಟಿಸಿರುವ ಪುಸ್ತಕಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಸಾವಿರಾರು ಮಂದಿ ಮಳಿಗೆಗೆ ಭೇಟಿ ಕೊಟ್ಟು ನಮ್ಮ ಎಲ್ಲಾ ಚಟುವಟಿಕೆಗಳ ಮಾಹಿತಿ ಪಡೆದರು.

ಎಸ್. ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ: ಶಿಕ್ಷಕರ ಕಾರ್ಯಾಗಾರ

ಎಸ್. ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ: ಶಿಕ್ಷಕರ ಕಾರ್ಯಾಗಾರ

ಕಲ್ಬುರ್ಗಿ : ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ. ಜ್ಞಾನಧಾರೆ ಎರೆಯಬೇಕಾದ ಶಿಕ್ಷಕ ಹಾಗೂ ಅದನ್ನು ಸ್ವೀಕರಿಸಿ ಪ್ರಯತ್ನಶೀಲರಾಗಬೇಕಾದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆ ಆಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ನಮೋಶಿ ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ದಿಶಾ ವಿಜ್ಞಾನ ಪಿಯು ಕಾಲೇಜಿನಲ್ಲಿ 10-12-2016 ಶುಕ್ರವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ 2 ದಿನಗಳ ತರಬೇತಿ ಕಾರ್ಯಾಗಾರವನ್ನು […]

ಶಿಕ್ಷಣ ಮಂತ್ರಿಗಳಿಗೆ ಮನವಿ

ಶಿಕ್ಷಣ ಮಂತ್ರಿಗಳಿಗೆ ಮನವಿ

ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಏಕನಾಥ ಪಾಟೀಲ್ ಮತ್ತು ಶಿಕ್ಷಕರ ಪ್ರತಿನಿಧಿ ಅರುಣ ಶಹಾಪುರ್ ಇವರು ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಿ ಚರ್ಚಿತ್ತಿರುವುದು.

ಬಾದಾಮಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಶ್ರೀ ಎಸ್.ಎ ಭರಮಗೌಡರ ಆಯ್ಕೆ

ಬಾದಾಮಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಶ್ರೀ ಎಸ್.ಎ ಭರಮಗೌಡರ ಆಯ್ಕೆ

ಕರ್ನಾಟಕ ಮಾಧ್ಯಮಿಕ ಶಿಕ್ಷಕ ಸಂಘದ ಬಾದಾಮಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಶ್ರೀ ಎಸ್.ಎ ಭರಮಗೌಡರ ಆಯ್ಕೆಯಾಗಿರುವರು.

ಪ್ರೌಢಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಪದೋನ್ನತಿಗಾಗಿ ಬಡ್ತಿ ಮತ್ತು ಭರ್ತಿಗೆ ಆಗ್ರಹಿಸಿ ಮನವಿ

ಪ್ರೌಢಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಪದೋನ್ನತಿಗಾಗಿ ಬಡ್ತಿ ಮತ್ತು ಭರ್ತಿಗೆ ಆಗ್ರಹಿಸಿ ಮನವಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ದಿನಾಂಕ 23-10-2016 ರಂದು ನಡೆದ ಪ್ರಾಂತ ಕೋರ್ ಕಮಿಟಿ ಸಭೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಹಾಗೂ ಪದವಿ ಪೂರ್ವ ಉಪನ್ಯಾಸಕರ ಪದೋನ್ನತಿಗೆ ಆಗ್ರಹಿಸಿ, ಎಲ್ಲಾ ಜಿಲ್ಲಾ ಘಟಕಗಳ ಮೂಲಕ ಮನವಿಯನ್ನು ಸಲ್ಲಿಸುತ್ತಿದೆ. ಶಿಕ್ಷಕರ ಪ್ರಮುಖ ಬೇಡಿಕೆಗಳು ಪ್ರೌಢಶಾಲೆಗಳ ಸಹ ಶಿಕ್ಷಕರನ್ನು ಮುಖ್ಯ ಶಿಕ್ಷಕರನ್ನಾಗಿ ಹಾಗೂ ಪದವಿ ಪೂರ್ವ ಉಪನ್ಯಾಸಕರಾಗಿ ಮತ್ತು ದೈಹಿಕ ಶಿಕ್ಷಕರ, ವೃತ್ತಿ ಶಿಕ್ಷಕರ ಪದೋನ್ನತಿಗಾಗಿ ಆಗ್ರಹ. ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಶಿಕ್ಷಣಾಧಿಕಾರಿಗಳಾಗಿ ಪದೋನ್ನತಿಗಾಗಿ ಆಗ್ರಹ. ಪದವಿ ಪೂರ್ವ ಉಪನ್ಯಾಸಕರನ್ನು ಪ್ರಾಂಶುಪಾಲರಾಗಿ […]

ಶಿಕ್ಷಕರಿಗೆ ಸಂಕಲ್ಪ ಏಕೆ -ಹೇಗೆ?

ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದವರ ಬಗ್ಗೆ ಒಂದು ನೋಟ ಹರಿಸೋಣ. ಐ.ಸಿ.ಎಸ್. ಮುಗಿಸಿದ ನಂತರ ಸ್ವಂತ ಏಳಿಗೆಯನ್ನು ಲೆಕ್ಕಿಸದೆ ಆಜಾದ್ ಹಿಂದ್ ಸೇನೆ ಕಟ್ಟಿ, ಪೂರ್ವ ಭಾರತ ಆಕ್ರಮಿಸಿ ಇಂಗ್ಲೀಷರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ಸಾವಿರಾರು ಜನರಿಗೆ ಸ್ವಾತಂತ್ರ್ಯದ ಹುಚ್ಚು ಹತ್ತಿಸಿ ನಮ್ಮ ದೇಶವನ್ನು ಸ್ವತಂತ್ರಗೊಳಿಸಿದ ಮಹಾನ್ ಪುರುಷ ಡಾ|| ಸುಭಾಷ್ ಚಂದ್ರ ಬೋಸ್. ಗಾಂಧಿಜೀಯವರೂ ಇದಕ್ಕೆ ಹೊರತೇನಲ್ಲ. ಖ್ಯಾತ ವಿಜ್ಞಾನಿ- ಭಾರತದ ತಂತ್ರಜ್ಞಾನದ ಜನಕ- ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ತಲೆಯಲ್ಲಿರಿಸಿಕೊಂಡು ದೃಢ ಸಂಕಲ್ಪದಿಂದ […]

ಪಾಠದಲ್ಲಿ ಪ್ರೀತಿ, ಅಂತಃಕರಣ ಇರಲಿ

ಪಾಠದಲ್ಲಿ ಪ್ರೀತಿ, ಅಂತಃಕರಣ ಇರಲಿ

ಶಿಕ್ಷಕರು ತಮ್ಮ ಹಳೆ ಅನುಭವಗಳ ಜತೆಗೆ ಹೊಸ ಅನುಭವಗಳನ್ನು ಸೇರಿಸಿಕೊಂಡು ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ 8-11-2016, ಮಂಗಳವಾರ ನಗರದ ತಾಲ್ಲೂಕು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಪಾತ್ರ ಕುರಿತ ಒಂದು ದಿನ ಕಾರ್ಯಾಗಾರ ಹಾಗೂ ವಿಷನ್-2016 ಕುರಿತು ಮಾತನಾಡಿದರು. ಪಾಠದ ಜತೆಗೆ ಪ್ರೀತಿ, ಅಂತಃಕರಣ […]

Highslide for Wordpress Plugin