ಯುಗಾದಿ ಹೊಸವರ್ಷದ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ

ಯುಗಾದಿ ಹೊಸವರ್ಷದ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾಘಟಕ ಒಟ್ಟಾಗಿ ಏರ್ಪಡಿಸಿದ್ದ ಯುಗಾದಿ ನೂತನ ವರ್ಷದ ಶಿಕ್ಷಕ ಸಂಘದ ಪಂಚಾಂಗ (ಕ್ಯಾಲೆಂಡರ್) ವನ್ನು ದಿನಾಂಕ 4-4-2018 ರಂದು ಸಂಘದ ಕಾರ್ಯಾಲಯದಲ್ಲಿ ಶ್ರೀ ಕೃ. ನರಹರಿಯವರು ಮತ್ತು ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಪೋಷಕರಾದ ಹಾಗೂ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಹೆಚ್ ನಾಗಭೂಷಣ ರಾವ್‌ರವರು ಯುಗಾದಿ, ಭಾರತೀಯ ಕಾಲಮಾನದ ಪ್ರಕಾರ ನೂತನ ವರ್ಷದ ಮಹತ್ವ […]

ರಾಜ್ಯ ಕಾರ್‍ಯಕಾರಿಣಿ ಸಭೆ

ಮತ್ತೊಮ್ಮೆ ದೇಶವನ್ನು ಉನ್ನತ ಸ್ಥಾನಕ್ಕೇರಿಸಲು ಪ್ರತಿಯೊಬ್ಬರೂ ಸಂಕಲ್ಪ ತೊಟ್ಟು ತಮ್ಮ ತಮ್ಮ ಜವಾಬ್ದಾರಿಯನ್ನು ದೇಶದ ಭವಿಷ್ಯದ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸುವಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಾರ್ಗದರ್ಶಕರಾದ ಕೃ. ನರಹರಿಯವರು ದಿನಾಂಕ 30-3-2018 ರಂದು ಯಾದವಸೃತಿ, ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್‍ಯಕಾರಿಣಿಯಲ್ಲಿ ಸಂಘದ ಕಾರ್‍ಯಕರ್ತರಿಗೆ ಕರೆ ನೀಡಿದರು. ಸಾಮೂಹಿಕ ಸರಸ್ವತಿ ಪ್ರಾರ್ಥನೆಯೊಂದಿಗೆ ಸಭೆಯನ್ನು ಆರಂಭಿಸಲಾಯಿತು. ಸಭಾ ವೇದಿಕೆಯ ಪ್ರಮುಖರನ್ನು ಸಭೆಗೆ ಪರಿಚಯಿಸುತ್ತಾ ಸಭಾಸದಸ್ಯರೆಲ್ಲರನ್ನು ಸಭೆಗೆ ಸಹ ಪ್ರಧಾನಕಾರ್ಯದರ್ಶಿಯವರಾದ ಶ್ರೀ ಸಂದೀಪ್ ಬೂದಿಹಾಳ್‌ರವರು ಸ್ವಾಗತಿಸಿದರು. ನಂತರ ಸಭೆಯ ಸದಸ್ಯರೆಲ್ಲರೂ […]

ಸಮಾನ ವೇತನಕ್ಕೆ ಆಗ್ರಹ : ಕೇಂದ್ರದಂತೆ ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಹಿತ ಕಾಪಾಡಲು ಒತ್ತಾಯ

ಸಮಾನ ವೇತನಕ್ಕೆ ಆಗ್ರಹ : ಕೇಂದ್ರದಂತೆ ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಹಿತ ಕಾಪಾಡಲು ಒತ್ತಾಯ

ಜೇವರ್ಗಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಕರಿಗೆ ನೀಡುವ ವೇತನದಂತೆ ರಾಜ್ಯ ಸರ್ಕಾರ ತನ್ನ ಅಧೀನದ ಶಿಕ್ಷಕರಿಗೂ ಸಮಾನ ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜೇವರ್ಗಿ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ದೇಶದ ಬಹುತೇಕ ರಾಜ್ಯಗಳ ಕೇಂದ್ರ ಸರ್ಕಾರ ನಡೆಸುವ ಕೇಂದ್ರಿಯ ವಿದ್ಯಾಲಯ, ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಕರಿಗೆ ನೀಡುವ ವೇತನವನ್ನು ರಾಜ್ಯ ಸರ್ಕಾರದ ಅಧೀನ ಶಾಲೆಗಳ ಶಿಕ್ಷಕರಿಗೂ ನೀಡುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಇದನ್ನು ಜಾರಿಗೆ […]

ತರಗತಿ 10 ಮತ್ತು 12 ರ ನಂತರ ಮುಂದೇನು?

ತರಗತಿ 10 ಮತ್ತು 12 ರ ನಂತರ ಮುಂದೇನು?

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ದಕ್ಷಿಣ ಜಿಲ್ಲಾವತಿಯಿಂದ ದಿನಾಂಕ 18-2-2018 ರಂದು ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಮುಂದಿನ ಜೀವನವನ್ನು ನಿರ್ಧರಿಸುವಲ್ಲಿ ಈ ತರಗತಿಗಳು ಜೀವನದ ಪ್ರಮುಖ ಘಟ್ಟಗಳು. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಆಸೆ, ಅಭಿರುಚಿಗಳಿಗನುಗುಣವಾಗಿ ಭವಿಷ್ಯ ಜೀವನ ನಿರ್ಧಾರವಾದರೆ ಅವರ ಆತ್ಮವಿಶ್ವಾಸ ಹೆಚ್ಚಿ ಕೆಲಸದಲ್ಲಿ ಸ್ಪಷ್ಟತೆ ನಿಖರತೆ ಕಂಡುಬರುತ್ತದೆ. ಅನಿಶ್ಚಿತ ಗುರಿಯಿರುವ ವಿದ್ಯಾರ್ಥಿ ಏನನ್ನೂ ಸಾಧಿಸಲಾರ ಹಾಗೂ ಸಮಾಜಕ್ಕೆ ಹೊರೆಯಾಗುತ್ತಾನೆ. ಈ […]

ಕಲಬುರಗಿಯಲ್ಲಿ ಸಂಕಲ್ಪ ದಿನಾಚರಣೆ

ಕಲಬುರಗಿಯಲ್ಲಿ ಸಂಕಲ್ಪ ದಿನಾಚರಣೆ

ವೃತ್ತಿ ನೈಪುಣ್ಯತೆ ಜೊತೆ ಸೇವಾಮನೋಭಾವ ಬೆಳೆಸಿಕೊಳ್ಳಿ ಕರ್ತವ್ಯಭೋಧ ದಿವಸ ಕಾರ್ಯಕ್ರಮದಲ್ಲಿ ಚಿದಾನಂದ ಅಭಿಮತ ನಾವು ಪಡೆಯುವ ಶಿಕ್ಷಣ ನಮ್ಮಲ್ಲಿ ಶ್ರದ್ಧೆ, ಆತ್ಮವಿಶ್ವಾಸ, ಉತ್ಸಾಹ ಹಾಗೂ ಘನತೆ ಹೆಚ್ಚಿಸಲು ಕಾರಣವಾಗಬೇಕು. ಶಿಕ್ಷಕರಾದವರು ವೃತ್ತಿ ನೈಪುಣ್ಯತೆ ಜೊತೆ ಸೇವಾ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನಕಾರ್ಯದರ್ಶಿ ಚಿದಾನಂದ ಪಾಟೀಲ ಸಲಹೆ ನೀಡಿದರು. ನಗರದ ಆಳಂದ ರಸ್ತೆಯ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ […]

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ, 45 ಪ್ರೌಢಶಾಲೆಗಳ 350 ಮಕ್ಕಳು ಭಾಗಿ ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ ಅಗತ್ಯ : ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯ ಶ್ಲಾಘನೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆಗಾಗಿ ಅನುಭವಿಗಳ ಉಪನ್ಯಾಸ ಮಾಲೆ, ತರಬೇತಿ ಕಾರ್ಯಾಗಾರಗಳು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸುಮಾರು ವರ್ಷಗಳಿಂದ ಜಿಲ್ಲಾ ಹಾಗೂ ಹಂತದಲ್ಲಿಯೂ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಅಭಿಪ್ರಾಯಪಟ್ಟರು. ಆಳಂದ ಪಟ್ಟಣದ ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರೌಢ ಶಾಲೆಯಲ್ಲಿ […]

ಯಾದಗಿರಿಯಲ್ಲಿ ಸಂಕಲ್ಪ ದಿನಾಚರಣೆ

ಯಾದಗಿರಿಯಲ್ಲಿ ಸಂಕಲ್ಪ ದಿನಾಚರಣೆ

16-1-2018 ರಂದು ಸರಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪುರ, ಜಿ.ಯಾದಗಿರಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ), ಬೆಂಗಳೂರು, ಜಿಲ್ಲಾ ಘಟಕ ಯಾದಗಿರಿ ವತಿಯಿಂದ ವಿಶ್ವಮಾನವ ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷ ಚಂದ್ರ ಬೋಸ್‌ರವರ ಜಯಂತಿ ಅಂಗವಾಗಿ ಸಂಕಲ್ಪ ದಿನ (ಕರ್ತವ್ಯ ಬೋಧ ದಿವಸ) ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕ.ರಾ.ಮಾ.ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ. ಚಿದಾನಂದ ಪಾಟೀಲ, ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಕ್ಷಕರಿಗೆ […]

ಬೆಂಗಳೂರು ಉತ್ತರ ಜಿಲ್ಲಾ ಘಟಕ : ಸಂಕಲ್ಪ ದಿನಾಚರಣೆ

ಬೆಂಗಳೂರು ಉತ್ತರ ಜಿಲ್ಲಾ ಘಟಕ : ಸಂಕಲ್ಪ ದಿನಾಚರಣೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಬೆಂಗಳೂರು ಉತ್ತರ ಜಿಲ್ಲಾ ಘಟಕವು ದಿನಾಂಕ 14-1-2018 ರ ಭಾನುವಾರದಂದು ವಿ.ಐ.ಪಿ ಶಾಲೆ, ಟಿ. ದಾಸರಹಳ್ಳಿ ಇಲ್ಲಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷಚಂದ್ರ ಬೋಸರ ಜಯಂತಿ ನಿಮಿತ್ತ ಸಂಕಲ್ಪ ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ವಿ.ಐ.ಪಿ ಶಾಲೆಯ ವಿದ್ಯಾರ್ಥಿನಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್.ಜಿ ತಾಂಬೆಯವರು ವೇದಿಕೆ ಮೇಲಿನ ಗಣ್ಯರನ್ನು ಸ್ವಾಗತಿಸಿ ಪರಿಚಯಿಸಿದರು. ನಂತರ ಗಣ್ಯರೆಲ್ಲರೂ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. […]

ದೇಶ ಏಳ್ಗೆಯಾಗಬೇಕಾದರೆ ನರಹರಿಯಂಥವರು ಬೇಕು - ಡಾ||. ಕೆ.ಎಸ್. ನಾರಾಯಣಾಚಾರ್ಯ

ದೇಶ ಏಳ್ಗೆಯಾಗಬೇಕಾದರೆ ನರಹರಿಯಂಥವರು ಬೇಕು – ಡಾ||. ಕೆ.ಎಸ್. ನಾರಾಯಣಾಚಾರ್ಯ

ಉತ್ತಮ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದ ಅತ್ಯಂತ ಉತ್ತಮ ಕಾರ್ಯ. ನರಹರಿಯವರು ಅಂತಹ ಉತ್ತಮ ಶಿಕ್ಷಕರು ಹಾಗೂ ಕ್ರಿಯಾಶೀಲರು. ಪ್ರಾಮಾಣಿಕತೆ, ರಾಷ್ಟ್ರಪ್ರೇಮ, ತ್ಯಾಗ ಮನೋಭಾವಗಳನ್ನು ಮೈಗೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ನರಹರಿಯವರದು. ಶಿಕ್ಷಕರಾಗಿ, ಶಾಸಕರಾಗಿ ಶಿಕ್ಷಣ ಕ್ಷೇತ್ರಕ್ಕೆ , ಶಿಕ್ಷಕ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ದೇಶ ಏಳಿಗೆಯಾಗಬೇಕಾದರೆ ನಮಗೆ ನರಹರಿಯಂಥವರು ಬೇಕು. ಇಂತಹ ವಿಶಿಷ್ಟ ವ್ಯಕ್ತಿತ್ವದ ನರಹರಿಯವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಉಚಿತವಾಗಿದೆ ಎಂದು ಪ್ರಖ್ಯಾತ ವಿದ್ವಾಂಸರೂ, ಲೇಖಕರೂ ಆದ ಡಾ|| ಕೆ. ಎಸ್. ನಾರಾಯಣಾಚಾರ್ಯರು ಪ್ರೊ. ಕೃ. ನರಹರಿಯವರ […]

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯ ಕಾರ್ಯಕಾರಿಣಿ ಸಭೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯ ಕಾರ್ಯಕಾರಿಣಿ ಸಭೆ

ದಿನಾಂಕ 12-11-2017  ರಂದು ಹುಬ್ಬಳ್ಳಿ ಬನಶಂಕರಿ ಬಡಾವಣೆಯ ಸೇವಾ ಸದನದಲ್ಲಿ ನಡೆದ ‘ಕಾರ್ಯಕಾರಿಣಿಯ ವರದಿ ಶಿಕ್ಷಕರ ವೇತನ ತಾರತಮ್ಯವನ್ನು ನಿವಾರಿಸಲು ‘ಒಂದು ದೇಶ, ಒಂದು ಶಿಕ್ಷಣ, ಒಂದು ವೇತನ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಒತ್ತಾಯಿಸಿದೆ. ದೇಶದ 30 ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಶಿಕ್ಷಕರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ಜಾರಿ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ಜಾರಿಯಾಗಿಲ್ಲ, ಹಾಗಾಗಿ ಇಡೀ ದೇಶಕ್ಕೆ ಅನ್ವಯ ವಾಗುವಂತೆ ಒಂದೇ ದೇಶ, – ಒಂದೇ […]

Highslide for Wordpress Plugin