ಶಿಕ್ಷಕರ ಸಂಪರ್ಕಕ್ಕೆ ಪೂರ್ಣ ಸಮಯ ಕೊಡಿ – ಕಾರ್ಯಕರ್ತರಿಗೆ ಶ್ರೀ ಮಹೇಂದ್ರಕಪೂರ್ ಕರೆ

ಶಿಕ್ಷಕ ಸಂಘದ ಬೆನ್ನೆಲುಬೇ ಸದಸ್ಯತ್ವ. ಆದ್ದರಿಂದ ಶಿಕ್ಷಕ ಸಂಘದ ಕಾರ್ಯಕರ್ತರು ಪ್ರತಿವರ್ಷವೂ ಸಂಘಕ್ಕೆ ಶಿಕ್ಷಕರ ಸದಸ್ಯತ್ವವನ್ನು ಮಾಡಿಸುವ ಬಗ್ಗೆ ಗಮನಹರಿಸಬೇಕು, ಆ ಮೂಲಕ ಶಿಕ್ಷಕರ ಸಂಪರ್ಕದಲ್ಲಿ ನಿರಂತರವಾಗಿ ಇರಬೇಕು, ಅದಕ್ಕಾಗಿ ತಮ್ಮ ಪೂರ್ಣ ಸಮಯವನ್ನು ಕೊಟ್ಟು ಶಿಕ್ಷಕರ ಸಂಪರ್ಕ, ಅಭಿಯಾನಗಳನ್ನು ಕೈಗೊಳ್ಳಬೇಕು. ನಿರಂತರ ಪ್ರವಾಸ ಮಾಡಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮಹೇಂದ್ರ ಕಪೂರ್‌ರವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರಿಗೆ ಕರೆ ನೀಡಿದರು. ದಿನಾಂಕ 26-2-2017 ರಂದು ಬೆಂಗಳೂರಿನಲ್ಲಿ […]

ಈರನಗೌಡ ಪಾಟೀಲ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ 

ಈರನಗೌಡ ಪಾಟೀಲ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ 

ರಾಜ್ಯ ಸರಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಡ ಮಾಡುವ ರಾಜ್ಯದ ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಎಮ್.ಎಸ್.ಇರಾಣಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ  ಹಾಗೂ ಇತಿಹಾಸ ಉಪನ್ಯಾಸಕರಾಗಿರುವ ಈರನಗೌಡ ಪಾಟೀಲ ಪಾತ್ರರಾಗಿದ್ದಾರೆ. ಅವರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ನಿರ್ದೇಶನಾಲಯ ಬೆಂಗಳೂರಿನ ಶಿವಾನಂದ ಸರ್ಕಲ್‌ನ ಗಾಂಧಿಭವನದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉತ್ತಮ ಎನ್‌ಎಸ್‌ಎಸ್ ಯೋಜನಾಧಿಕಾರಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಾಧ್ಯಮ […]

ಧಾರವಾಡದಲ್ಲಿ ಕೇಂದ್ರದ ಬಜೆಟ್ ಕುರಿತು ಚರ್ಚಾಗೋಷ್ಠಿ

ಧಾರವಾಡದಲ್ಲಿ ಕೇಂದ್ರದ ಬಜೆಟ್ ಕುರಿತು ಚರ್ಚಾಗೋಷ್ಠಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಣಿಕ ಮಹಾ ಸಂಘದ ವತಿಯಿಂದ 5-2-2017 ರಂದು ಕೇಂದ್ರದ ಬಜೆಟ್ ಕುರಿತು ಚರ್ಚಾಗೋಷ್ಠಿ.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಉತ್ತರ ಜಿಲ್ಲಾ ಘಟಕದಿಂದ ಸಂಕಲ್ಪ ದಿನಾಚರಣೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಉತ್ತರ ಜಿಲ್ಲಾ ಘಟಕದಿಂದ ಸಂಕಲ್ಪ ದಿನಾಚರಣೆ

ಬೆಂಗಳೂರು : ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಉತ್ತರ ಜಿಲ್ಲಾ ಘಟಕದಿಂದ ದಿನಾಂಕ 21-1-2017 ರಂದು ಶ್ರೀ ಮಾತಾ ಆಂಗ್ಲಶಾಲೆ ಆರ್.ಟಿ.ನಗರದಲ್ಲಿ ಸಂಕಲ್ಪ ದಿನ ನಡೆಯಿತು. ಮುಖ್ಯ ಅತಿಥಿ ಕೃ. ನರಹರಿಯವರು ಶಿಕ್ಷಕರು ಆದರ್ಶವಾಗಿರಬೇಕು. ಸನ್ನಡತೆಯಿಂದ ಮಕ್ಕಳಿಗೆ ಮಾದರಿಯಾಗಿದ್ದು ರಾಷ್ಟ್ರಭಕ್ತಿ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು ಮತ್ತು ಸ್ವಾಮಿವಿವೇಕಾನಂದರ ವ್ಯಕ್ತಿತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು. ಸಂಘದ ಕಛೇರಿಯ ಪ್ರಮುಖರಾದ ಜಿ.ಎಸ್ ಕೃಷ್ಣಮೂರ್ತಿಯವರು ಸಂಕಲ್ಪ ಬೋಧನೆಯನ್ನು ಮಾಡಿದರು. ರಾಜ್ಯದ ಖಜಾಂಚಿಗಳಾದ ಜೆ.ಎಂ ಜೋಷಿಯವರು ಪ್ರಾಸ್ತಾವಿಕ ನುಡಿಗಳನ್ನು ತಿಳಿಸಿದರು. ಜಿಲ್ಲಾ ಕಾರ್ಯದರ್ಶಿಗಳಾದ […]

ಬಳ್ಳಾರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಬಳ್ಳಾರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಬಳ್ಳಾರಿ : ಸ್ವಾಮಿ ವಿವೇಕಾನಂದರು ಆತ್ಮವಿಶ್ವಾಸದ ಪ್ರತೀಕ. ಅವರ ಭಾವಚಿತ್ರವನ್ನು ತದೇಕ ಚಿತ್ತದಿಂದ ನೋಡಿದಾಗ ನಿರಾಶ ಭಾವನೆ ತೊಲಗುತ್ತದೆ. ಮಹಾನ್ ಚೇತನ ಶಕ್ತಿ ಸ್ವರೂಪ ಅವರು. ಅಮೇರಿಕಾದ ಚಿಕಾಗೋ ಪ್ರಾಂತ್ಯದಲ್ಲಿ ಮಾಡಿದ ಭಾಷಣದಲ್ಲಿ ಇಡೀ ಪ್ರಪಂಚಕ್ಕೆ ಹಿಂದೂ ಧರ್ಮದ ಘನತೆಯನ್ನು ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರೊಬ್ಬ ವೀರ ಸನ್ಯಾಸಿ, ಬಾಲ್ಯದಿಂದಲೂ ಕಠಿಣ ವ್ರತಗಳನ್ನು ಆಚರಿಸುತ್ತಾ ತ್ಯಾಗಮಯಿ ಜೀವನ ಅನುಭವಿಸಿದವರು. ಏಳಿ! ಎದ್ದೇಳಿ! ಗುರಿಮುಟ್ಟುವವರೆಗೂ ವಿಶ್ರಮಿಸದಿರಿ ಎಂಬ ಸಂದೇಶವನ್ನು ಯುವ ಪೀಳಿಗೆಗೆ ನೀಡುತ್ತಾ ಈ ದೇಶದ […]

ರಾಜ್ಯದ ವಿವಿಧೆಡೆ ಸಂಕಲ್ಪ ದಿನಾಚರಣೆ

ರಾಜ್ಯದ ವಿವಿಧೆಡೆ ಸಂಕಲ್ಪ ದಿನಾಚರಣೆ

ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ವತಿಯಿಂದ ಸಂಕಲ್ಪ ದಿನಾಚರಣೆ ನಡೆಸಲಾಯಿತು. ಕಲಬುರಗಿ ಜಿಲ್ಲೆಯ ಅಫಜಲಪುರ ಘಟಕದಿಂದ ಸಂಕಲ್ಪ ದಿವಸ ಆಚರಿಸಲಾಯಿತು. ತಾಲ್ಲೂಕು ಪ್ರಮುಖ ಸುದ್ದಿಗಾರರಾದ ಚಿಂಚೋಳಿ ಉಪಸ್ಥಿತರಿದ್ದರು.

ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಶಹಾಪುರದ ಶ್ರೀ ಚಿಂತಮ್ಮಗೌಡತಿ ಸ್ಮಾರಕ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ, ಉಪನ್ಯಾಸ ಕಲಬುರಗಿಯ ರಾಮಕೃಷ್ಣ ಮಠದ ಸ್ವಾಮಿ ಮಹೇಶ್ವರಾನಂದಜಿ ಮಹಾರಾಜ ಶ್ರೀ ಮಹೇಶ ಬಸರಕೋಡ ವಿಭಾಗ ಪ್ರಮುಖ, ಶ್ರೀ ಮಲ್ಲಿಕಾರ್ಜುನ ಅವಂಟಿ ಪ್ರಾಚಾರ್ಯರು, ಶ್ರೀ ಅನಿಲ ಕುಮಾರ ಬಿರಾದಾರ ಜಿಲ್ಲಾ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಶಿಕ್ಷಕ ಬಂಧುಗಳು ಭಾಗವಹಿಸಿದ್ದರು.

ಬೀದರ್ ನಗರದಲ್ಲಿ CALENDAR AND DAIRY ಬಿಡುಗಡೆ ಸಮಾರಂಭ

ಬೀದರ್ ನಗರದಲ್ಲಿ CALENDAR AND DAIRY ಬಿಡುಗಡೆ ಸಮಾರಂಭ

ಬೀದರ್ ನಗರದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಬೀದರ್ ಮತ್ತು ಪ.ಪೂ ಉಪನ್ಯಾಸಕರ ಸಂಘ ಬೀದರ್ ವತಿಯಿಂದ ಹೊಸ ವರ್ಷದ CALENDAR AND DAIRY ಬಿಡುಗಡೆ ಸಮಾರಂಭದಲ್ಲಿ MLC ಅಮರನಾಥ ಪಾಟೀಲ ಹಾಗೂ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಶ್ರೀಗಳು, ವಿಭಾಗ ಪ್ರಮುಖ ಮಹೇಶ ಬಸರಕೋಡ ಜಿಲ್ಲಾ ಅಧ್ಯಕ್ಷರಾದ ಶಾಂತಕುಮಾರ ಬಿರಾದಾರ, ಪ ಪೂ ಅಧ್ಯಕ್ಷರಾದ ಮಂಗಲಗಿ ಮತ್ತಿನ್ನಿತರರು ಉಪಸ್ಥಿತರಿದ್ದರು.

ಪರಿಷ್ಕೃತ ಪಠ್ಯಪುಸ್ತಕ : ತನ್ವೀರ್ ಸೇಠ್‌ರವರಿಗೆ ಹುಬ್ಬಳ್ಳಿಯಲ್ಲಿ ಮನವಿ

ಪರಿಷ್ಕೃತ ಪಠ್ಯಪುಸ್ತಕ : ತನ್ವೀರ್ ಸೇಠ್‌ರವರಿಗೆ ಹುಬ್ಬಳ್ಳಿಯಲ್ಲಿ ಮನವಿ

ಪರಿಷ್ಕೃತ ಪಠ್ಯಪುಸ್ತಕವನ್ನು ಜಾರಿಗೆ ತರುವ ಮೊದಲು ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಮಧ್ಯೆ ಚರ್ಚೆ ಮಾಡಿ ಜಾರಿಗೆ ತರುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರಾದ ಶ್ರೀ ತನ್ವೀರ ಸೇಠ್‌ರವರಿಗೆ ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಧಾರವಾಡ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ರಾಜ್ಯ ಸಹ-ಪ್ರಧಾನ ಕಾರ್ಯದರ್ಶಿ ಶ್ರೀ ಸಂದೀಪ ಬೂದಿಹಾಳ, ಶ್ರೀಧರ ಪಾಟೀಲ ಕುಲಕರ್ಣಿ, ಶ್ರೀ ಶಿವಾನಂದ ನಾಗೂರ, ಶ್ರೀ ಪರಮೇಶ್ವರಪ್ಪ ಓಲೇಕಾರ ಉಪಸ್ಥಿತರಿದ್ದರು.

ಪರಿಷ್ಕೃತ ಪಠ್ಯಪುಸ್ತಕ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಮಧ್ಯೆ ಚರ್ಚೆಯ ನಂತರ ಜಾರಿ ಮಾಡಲು ಒತ್ತಾಯಿಸಿ ರಾಜ್ಯದ ವಿವಿಧೆಡೆ ಮನವಿ

ಪರಿಷ್ಕೃತ ಪಠ್ಯಪುಸ್ತಕ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಮಧ್ಯೆ ಚರ್ಚೆಯ ನಂತರ ಜಾರಿ ಮಾಡಲು ಒತ್ತಾಯಿಸಿ ರಾಜ್ಯದ ವಿವಿಧೆಡೆ ಮನವಿ

ರಾಜ್ಯಾದ್ಯಂತ  ವಿವಿಧ  ಜಿಲ್ಲೆಗಳಲ್ಲಿ  ಪರಿಷ್ಕೃತ ಪಠ್ಯಪುಸ್ತಕವನ್ನು ಜಾರಿಗೆ ತರುವ ಮೊದಲು ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಮಧ್ಯೆ ಚರ್ಚೆ ಮಾಡಿ ಜಾರಿಗೆ ತರುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಕಲಬರ್ಗಿ ವತಿಯಿಂದ ಪರಿಷೃತ ಪಠ್ಯ ಪುಸ್ತಕ ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಮಧ್ಯೆ ಚರ್ಚೆ ಮಾಡಿದೆ ಜಾರಿ ಮಾಡುತ್ತಿರುವುದನ್ನು ಖಂಡಿಸಿ ಮನವಿಯನ್ನು ಸಲ್ಲಿಸಲಾಯಿತು.

Highslide for Wordpress Plugin