ಕಾಲೇಜು ಅತಿಥಿ ಉಪನ್ಯಾಸಕರ ಕುರಿತು ರಾಜ್ಯ ಸರ್ಕಾರದಿಂದ ಐತಿಹಾಸಿಕ ನಿರ್ಧಾರ – ಕೆ.ಆರ್.ಎಮ್.ಎಸ್.ಎಸ್. ಸ್ವಾಗತ
ಅತಿಥಿ ಉಪನ್ಯಾಸಕರ ಬಹು ವರ್ಷಗಳ ಸಮಸ್ಯೆಯ ಪರಿಹಾರಕ್ಕಾಗಿ ರಾಜ್ಯಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆ.ಆರ್.ಎಮ್.ಎಸ್.ಎಸ್.) ಸ್ವಾಗತಿಸುತ್ತದೆ. ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರ ಬೇಡಿಕೆಗಳ ಕುರಿತಂತೆ ಕೆ.ಆರ್.ಎಮ್.ಎಸ್.ಎಸ್. ಹಲವಾರು ಬಾರಿ ರಾಜ್ಯದ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿಕೊಂಡಿತ್ತು. ಕಳೆದ ಒಂದು ತಿಂಗಳಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದರು. ಈ ಹೋರಾಟಕ್ಕೆ ಕೆ.ಆರ್.ಎಮ್.ಎಸ್.ಎಸ್. ಬೆಂಬಲಕೊಟ್ಟು, ಉನ್ನತ ಶಿಕ್ಷಣ ಸಚಿವರಿಗೆ […]