
ಗುರುವಂದನಾ ಕಾರ್ಯಕ್ರಮ – ಬೆಳಗಾವಿ
ನಗರದ ಬಿ.ಕೆ ಮಾಡಲ್ ಪ್ರೌಢಶಾಲೆಯ ಸಭಾಂಗಣದಲ್ಲಿ 5-8-2021 ರಂದು ಬೆಳಗಾವಿ ಜಿಲ್ಲೆ ಹಾಗೂ ನಗರ ವತಿಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಖಜಾನೆಯ ಸಹ-ನಿರ್ದೇಶಕರಾದ ಶ್ರಿ.ಎಸ್.ವಿ ಹಲ್ಯಾಳ ಹಾಗೂ ಶ್ರೀ ರವಿ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಗರವಲಯ ಬೆಳಗಾವಿ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾದ ಶ್ರೀ ವಿಶ್ವಜೀತ ಹಸಬೆಯವರು ವಹಿಸಿದ್ದರು. ಬೌದ್ಧಿಕ ಮಾರ್ಗದರ್ಶಕರಾಗಿ ಶ್ರೀ ಪರಮೇಶ್ವರಜಿ ಹೆಗಡೆ, ಅಧ್ಯಕ್ಷರು ವಿದ್ಯಾಭಾರತಿ, […]