ಸಂಕಲ್ಪ ದಿನ - ಯಾದಗಿರಿ

ಸಂಕಲ್ಪ ದಿನ – ಯಾದಗಿರಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಜವಾಹರ ಪ್ರೌಢಶಾಲೆ ಯಾದಗಿರಿಯಲ್ಲಿ ಕರ್ತವ್ಯ ಬೋಧ, ಸಂಕಲ್ಪ ದಿನ ಆಚರಿಸಲಾಯಿತು. ಜವಾಹರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಕಾರ್ಯಕ್ರಮವು ಪ್ರಾರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ್ ಪೂಜಾರಿ ಸರ್ ಇವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯು ಶ್ರೀ ರಾಮಕೃಷ್ಣಾಶ್ರಮದ ಸಂಚಾಲಕರಾದ ಆದರಣಿಯ ಶ್ರೀ ವೇಣುಗೋಪಾಲ್ ಜಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮ ಕುರಿತು ಉದ್ಘಾಟನೆ ಮಾಡಿದರು. ಪ್ರಾರ್ಥನೆ ಹಾಗೂ ವಿವೇಕಾನಂದರ ಗೀತೆಯಿಂದ ಪ್ರಾರಂಭವಾಗಿ, […]

ಹುಬ್ಬಳ್ಳಿ : ಕರ್ತವ್ಯ ಬೋಧ ದಿವಸ್ 

ಹುಬ್ಬಳ್ಳಿ : ಕರ್ತವ್ಯ ಬೋಧ ದಿವಸ್ 

ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಬೇಕು – ರವೀಂದ್ರ ಜೀ ಹುಬ್ಬಳ್ಳಿ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಕಲಿಸುವಂತಾಗಬೇಕೆಂದು ಆರ್‌ಎಸ್‌ಎಸ್‌ನ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ರವೀಂದ್ರ ಜೀ ಹೇಳಿದರು. ನಗರದ ಪಿ.ಸಿ ಜಾಬಿನ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ತವ್ಯಬೋಧ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಷಣ ಮಾಡಿದರು. ವಿದ್ಯಾರ್ಥಿಗಳಿಗೆ ಮಾನ-ಅಪಮಾನ, ಲಾಭ-ನಷ್ಟದ ಬಗ್ಗೆ ಅನುಭವವಾಗುವಂತೆ ಪಾಲಕರು […]

ಸಂಕಲ್ಪ ದಿನ - ಬೆಂಗಳೂರು ಉತ್ತರ ಜಿಲ್ಲೆ

ಸಂಕಲ್ಪ ದಿನ – ಬೆಂಗಳೂರು ಉತ್ತರ ಜಿಲ್ಲೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ದಿನಾಂಕ 23-1-2021 ಶನಿವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯದ ಕೇಂದ್ರ ಕಛೇರಿ ಯಾದವಸ್ಮೃತಿಯಲ್ಲಿ ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷ್ ಚಂದ್ರಬೋಸ್‌ರವರ ತತ್ವ, ಸಿದ್ಧಾಂತಗಳ ಸ್ಮರಣೆಗಾಗಿ ಸಂಕಲ್ಪ ದಿನವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ಸೀತಾಭಟ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಬೆಂಗಳೂರು ಉತ್ತರ ವಲಯ-3ರ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಿಗಿರವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಕ.ರಾ.ಮಾ.ಶಿ ಸಂಘದ ರಾಜ್ಯ ಖಜಾಂಚಿಗಳಾದ […]

ರಾಷ್ಟ್ರೀಯ ಶಿಕ್ಷಣ ನೀತಿ-ಒಂದು ವಿಚಾರ ಸಂಕಿರಣ

ಈಗಿನ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಮಕ್ಕಳು ಜ್ಞಾನಕ್ಕಾಗಿ ಓದುವುದಕ್ಕಿಂತ ಉದ್ಯೋಗಕ್ಕಾಗಿಯೇ ಓದುತ್ತಾರೆ. ಇದೇ ಕಾರಣಕ್ಕೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ಬದಲಾಯಿಸುವ ಅಂಶಗಳು ಹೊಸ ಶಿಕ್ಷಣ ನೀತಿಯಲ್ಲಿವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಪಪೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಶಿಕ್ಷಣ […]

ಮೈಸೂರು : ಕರ್ತವ್ಯ ಬೋಧ ದಿವಸ

ಮೈಸೂರು : ಕರ್ತವ್ಯ ಬೋಧ ದಿವಸ

ದಿನಾಂಕ 12-1-2021 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಮೈಸೂರು ಜಿಲ್ಲೆಯವರು ಕರ್ತವ್ಯ ಬೋಧ ದಿವಸವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಎ.ಬಿ.ಆರ್.ಎಸ್.ಎಮ್ ನ ಮಹಾಮಂತ್ರಿಗಳಾದ ಶ್ರೀ ಶಿವಾನಂದ ಸಿಂಧನಕೇರಾರವರು ಭಾಗವಹಿಸಿ ಸಭಿಕರಿಗೆ ಕರ್ತವ್ಯ ದಿನದ ಬಗ್ಗೆ ಸವಿವರವಾಗಿ ತಿಳಿಸಿದರು. ಶ್ರೀಯುತ ನಾಗಮಲ್ಲೇಶ್, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆಯವರು ಭಾಗವಹಿಸಿ ಗುರು-ಶಿಷ್ಯ ಪರಂಪರೆಯ ಬಗ್ಗೆ ಸವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಕೆ.ಎನ್. ಜಯದೇವರಾಜ ಅರಸ್, ಜಿಲ್ಲಾ ಅಧ್ಯಕ್ಷರು, ಮೈಸೂರು ಜಿಲ್ಲೆ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ.ರಾ.ಮಾ.ಶಿ.ಸಂಘ, ಮೈಸೂರು […]

ಶಿಕ್ಷಣ ಸಚಿವರಿಂದ ಸಭೆ

ಶಿಕ್ಷಣ ಸಚಿವರಿಂದ ಸಭೆ

ಪದವಿ ಪೂರ್ವ ಶಿಕ್ಷಣ ಇಲಾಖೆ 2020-21 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ತರಗತಿಗಳನ್ನು ಪ್ರಾರಂಭ ಮಾಡುವ ಕುರಿತು ಸಭೆಯನ್ನು ಮಾನ್ಯ ಶ್ರೀ ಎಸ್. ಸುರೇಶಕುಮಾರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ನಡೆಸಿದರು. ಎಲ್ಲರಿಂದ ಬಹಳ ಉತ್ಸಾಹದಾಯಕ ಪ್ರತಿಕ್ರಿಯೆ ಕೇಳಿಬಂತು. ಜೊತೆಗೆ ಮೊದಲನೇ ಪಿಯುಸಿ ತರಗತಿಗಳನ್ನು ಎಲ್ಲಾ ಕ್ರಮಗಳನ್ನು ಅನುಸರಿಸಿ ಪ್ರಾರಂಭಿಸುವ ಅಗತ್ಯತೆ ಕುರಿತು ಆಗ್ರಹ ಕೇಳಿಬಂದಿದೆ. ಈ ಬಗ್ಗೆ ರಾಜ್ಯದ ತಜ್ಞರ ಸಮಿತಿ ಸಲಹೆ ಕೇಳಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಲಾಯಿತು. ಸಭೆಯಲ್ಲಿ ಶ್ರೀ […]

ಕಾರ್‍ಯಕಾರಿಣಿ ಮತ್ತು ಸಾಮಾನ್ಯ ಸಭೆ ವರದಿ

ಕಾರ್‍ಯಕಾರಿಣಿ ಮತ್ತು ಸಾಮಾನ್ಯ ಸಭೆ ವರದಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್‍ಯಕಾರಿಣಿ ಸದಸ್ಯರ ಸಭೆ ಮತ್ತು ಸಾಮಾನ್ಯ ಸಭೆ ದಿನಾಂಕ 30-11-2020 ರ ಭಾನುವಾರದಂದು ಬೆಂಗಳೂರಿನ ಕೇಂದ್ರ ಕಛೇರಿ ಯಾದವಸೃತಿ, ಶೇಷಾದ್ರಿಪುರಂನಲ್ಲಿ ಜರುಗಿತು. ಈ ಕಾರ್‍ಯಕ್ರಮಕ್ಕೆ ಎ.ಬಿ.ಆರ್.ಎಸ್.ಎಮ್ ನ ಸಂಘಟನಾ ಮಂತ್ರಿಗಳಾದ ಶ್ರೀಯುತ ಮಹೇಂದ್ರ ಕಪೂರ್‌ರವರು, ಎ.ಬಿ.ಆರ್.ಎಸ್.ಎಮ್. ನ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀಯುತ ಕೃ ನರಹರಿಯವರು, ರಾಷ್ಟ್ರೀಯ ಪ್ರಧಾನ ಕಾರ್‍ಯದರ್ಶಿಗಳಾದ ಶ್ರೀಯುತ ಶಿವಾನಂದ ಸಿಂಧನಕೇರರವರು, ರಾಜ್ಯಾಧ್ಯಕ್ಷರು, ಕಾರ್‍ಯದರ್ಶಿಗಳು, 17 ಜಿಲ್ಲೆಗಳಿಂದ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಿದ್ದರು. ಶಾರದೆಯ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವುದರೊಂದಿಗೆ ಕಾರ್‍ಯಕ್ರಮದ […]

ಸ್ವಾತಂತ್ರ ಹೋರಾಟ-ಹಿನ್ನೋಟ ಮುನ್ನೋಟ ಪುಸ್ತಕ ಲೋಕಾರ್ಪಣೆ

ಸ್ವಾತಂತ್ರ ಹೋರಾಟ-ಹಿನ್ನೋಟ ಮುನ್ನೋಟ ಪುಸ್ತಕ ಲೋಕಾರ್ಪಣೆ

ಹುಬ್ಬಳ್ಳಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರುಗಳ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಡಿ ಶುಕ್ರವಾರ ಹುಬ್ಬಳ್ಳಿಯ ಆರ್.ಎಸ್.ಎಸ್.ನ ಕೇಶವಕುಂಜದಲ್ಲಿ ಹಮ್ಮಿಕೊಂಡಿದ್ದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣನವರಿಂದ ರಚಿತವಾದ ಸ್ವಾತಂತ್ರ ಹೋರಾಟ ಹಿನ್ನೋಟ ಮುನ್ನೋಟ ಪುಸ್ತಕದ ಬಿಡುಗಡೆ ಸಮಾರಂಭ ನೆರವೇರಿತು. ಜೆಎನ್‌ಯು ವಿಶ್ವವಿದ್ಯಾಲಯ, ನವದೆಹಲಿಯ ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಸ್ವತಂತ್ರ ಹೋರಾಟ ಹಿನ್ನೋಟ ಮುನ್ನೋಟ ಪುಸ್ತಕದ ಪ್ರಮುಖ ಅಂಶಗಳ ಪರಿಚಯ ಮಾಡಿದರು. ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ […]

ಹೊಸ ಶಿಕ್ಷಣ ನೀತಿ ವಿಚಾರ ಸಂಕಿರಣ - ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕಾರಿ

ಹೊಸ ಶಿಕ್ಷಣ ನೀತಿ ವಿಚಾರ ಸಂಕಿರಣ – ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕಾರಿ

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಶಾಸಕ ನೆಹರು ಓಲೇಕಾರ ಅಭಿಪ್ರಾಯಪಟ್ಟರು. ನಗರದ ಗುರುಭವನದಲ್ಲಿ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಜಿಲ್ಲಾ ಘಟಕ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2019ರ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂರರಿಂದ ಹದಿನೆಂಟು ವರ್ಷ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಉದ್ದೇಶವನ್ನು […]

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಶ್ರೀ ಜೆ. ಪಿ. ಸಿಂಘಾಲರವರ ದೃಷ್ಟಿಕೋನ

ದಿನಾಂಕ 6-9-2020 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು “ರಾಷ್ಟ್ರೀಯ ಶಿಕ್ಷಣ ನೀತಿ 2020” ಎಂಬ ವಿಷಯದ ಬಗ್ಗೆ ವಿಚಾರಸಂಕಿರಣವನ್ನು ಆನ್‌ಲೈನ್‌ನಲ್ಲಿ ಏರ್ಪಡಿಸಿತ್ತು. ಮುಖ್ಯ ವಕ್ತಾರರಾಗಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಧ್ಯಕ್ಷರಾದ ಶ್ರೀ ಜೆ.ಪಿ ಸಿಂಘಾಲ್‌ಜೀಯವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಜೆ.ಪಿ.ಸಿಂಘಾಲ್‌ಜಿಯವರ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಈ ಕೆಳಗಿನಂತೆ ವರದಿ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಉಪಸ್ಥಿತ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಎಲ್ಲ ಮಹಾನುಭಾವರಿಗೆ ನಮಸ್ಕಾರವನ್ನು […]

Highslide for Wordpress Plugin