
ಅಭ್ಯಾಸ ವರ್ಗ – ಒಂದು ವರದಿ
ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘ (ರಿ) ಇವರ ಆಶ್ರಯದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವಿಭಾಗದಿಂದ 18-03-2023 ರಂದು ಗಂಗಾವತಿ ತಾಲೂಕಿನ ಶ್ರೀ ರಾಮನಗರದ ವಿದ್ಯಾನಿಕೇತನ ಸಮೂಹ ಸಂಸ್ಥೆಯಲ್ಲಿ ಅಭ್ಯಾಸ ವರ್ಗ ಯಶಸ್ವಿಯಾಗಿ ಜರುಗಿತು. ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾನಿಕೇತನ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಶ್ರೀನೆಕ್ಕಂಟಿ ಸೂರಿಬಾಬುರವರು “ಅಭ್ಯಾಸ ವರ್ಗಕ್ಕೆ ಅವರ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾ ಅಭ್ಯಾಸ ವರ್ಗಕ್ಕೆ ಆಗಮಿಸಿದ ಎಲ್ಲಾ ಪ್ರಾಧ್ಯಾಪಕರನ್ನೂ ಅಭಿನಂದಿಸಿದರು. ಪ್ರಾಧ್ಯಾಪಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ […]