
ಶಿಕ್ಷಕ ಸ್ನೇಹ ಸಮ್ಮಿಲನ – ಬೆಂಗಳೂರು ಉತ್ತರ ಜಿಲ್ಲೆ
02-07-2022 ರ ಶನಿವಾರ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ನಡೆಸಿದ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಹೊಸದಾಗಿ ಸದಸ್ಯತ್ವವನ್ನು ಪಡೆದ ಹಾಗೂ ಪೂರ್ವದಿಂದಲೂ ಸದಸ್ಯರಾಗಿದ್ದ ಶಿಕ್ಷಕರನ್ನು ಸೇರಿಸಿ ನಡೆಸಿಕೊಟ್ಟ ಶಿಕ್ಷಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಖಜಾಂಚಿಗಳಾದ ಶ್ರೀ ಹರಿದಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸರಸ್ವತಿ ವಂದನೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ಟರವರು ಎಲ್ಲಾ ಹೊಸ ಸದಸ್ಯರು ಮತ್ತು ನೆರೆದವರೆಲ್ಲರಿಗೂ […]