ಬೆಂಗಳೂರು ಉತ್ತರ ಜಿಲ್ಲೆ, ಬಾಗಲಕೋಟೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ವಿಚಾರ ಗೋಷ್ಠಿ 

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ), ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ದಿ: 19-9-2020 ರಂದು ರಾಷ್ಟ್ರೀಯ ಶಿಕ್ಷಣ ನೀತಿ -೨೦೨೦ರ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಬೆಂಗಳೂರು ಉತ್ತರ ವಲಯ-1 ರ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ವಿಚಾರ ಸಂಕಿರಣದ ಉಪನ್ಯಾಸಕರು, ಶಿಕ್ಷಣ ತಜ್ಞರು, ಎಮ್.ಇ.ಎಸ್ ಶಿಕ್ಷಕರ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಡಾ.ಹೆಚ್.ಎಸ್.ಗಣೇಶ ಭಟ್ಟರವರ ಪರಿಚಯ ಮತ್ತು ಸ್ವಾಗತವನ್ನು ಬೆಂಗಳೂರು ಉತ್ತರ ವಲಯ -3 ರ ಕಾರ್ಯದರ್ಶಿಯವರಾದ ಶ್ರೀ ಎಂ.ವಿ.ಗಂಗಾಧರ ರವರು […]

ರಾಷ್ಟ್ರೀಯ ಶಿಕ್ಷಣ ನೀತಿ 2020 ವಿಚಾರ ಗೋಷ್ಠಿ

ದಿನಾಂಕ 10-09-2020 ರಂದು ಬೆಳಿಗ್ಗೆ 11 ಘಂಟೆಯಿಂದ 1 ಘಂಟೆಯವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರ ಗೋಷ್ಠಿಯು ಆನ್‌ಲೈನ್‌ನಲ್ಲಿ ಗೂಗಲ್‌ಮೀಟ್ ಮುಖಾಂತರ ಜರುಗಿತು. ಗೋಷ್ಠಿಯು ಶ್ರೀ ಆರ್. ಎಸ್. ಭಟ್ಟ ಇವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ಜಿಲ್ಲಾ ಅಧ್ಯಕ್ಷರಾದ ಶ್ರೀ ಏಕನಾಥ ಜಿ.ಪಾಟೀಲ್‌ರವರು ಎಲ್ಲರನ್ನು ಸ್ವಾಗತಿಸಿದರು. ಶ್ರೀ ಭಾಸ್ಕರ ದೇಶಪಾಂಡೆಯವರು ಮುಖ್ಯ ವಕ್ತಾರರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್‍ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಅರುಣ್ ಶಹಾಪುರ್‌ರವರು, […]

ಗುರುವಂದನಾಚರಣೆ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ| ಗುರು ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರುವೇ ನಮಃ|| ಸೃಷ್ಟಿ, ರಕ್ಷಣೆ, ಶಿಕ್ಷೆ ಇವುಗಳನ್ನು ಸಮನ್ವಯಗೊಳಿಸುವ ಪರಬ್ರಹ್ಮ ಶಕ್ತಿಯುಳ್ಳ ಗುರುವಿಗೆ ವಂದಿಸುತ್ತಾ, ಈ ಶ್ಲೋಕದ ಅರ್ಥವನ್ನು ಸಾಕಾರಗೊಳಿಸಿದ ವೇದಗಳ ಗುರುವಾದ ವ್ಯಾಸ, ರಾಮನ ಗುರುವಾದ ವಸಿಷ್ಠ, ಯೋಗದ ಗುರುವಾದ ಪತಂಜಲಿ, ಭಗವದ್ಗೀತೆಯ ಗುರುವಾದ ಶ್ರೀಕೃಷ್ಣ, ಗಣಿತಶಾಸ್ತ್ರದ ಗುರುವಾದ ಆರ್ಯಭಟ, ವಿವೇಕಾನಂದರ ಗುರುವಾದ ರಾಮಕೃಷ್ಣ ಪರಮಹಂಸ, ಸಂಗೀತದ ಗುರುವಾದ ತ್ಯಾಗರಾಜ, ತತ್ತ್ವಶಾಸ್ತ್ರದ ಗುರುವಾದ ಸ್ಯಾಕ್ರಟಿಸ್, ವಿಜ್ಞಾನದ ಗುರುವಾದ ಐನ್‌ಸ್ಟೇನ್ ಮತ್ತು ಸಮಾಜಕ್ಕೆ ಗುರುವಾದ […]

ಆಂಗ್ಲಭಾಷೆ ಬೋಧಿಸುವ ಶಿಕ್ಷಕರಿಗೆ ಆನ್‌ಲೈನ್ ತರಬೇತಿ ಮಾದರಿಯ ತರಗತಿ

ಕೆ.ಆರ್.ಪೇಟೆ : ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ, ಮಂಡ್ಯ ಜಿಲ್ಲಾ ಘಟಕ ಹಾಗೂ ಸತ್ಯಂ ಎಜುಕೇರ್ ಕಂಪನಿ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ತರಗತಿಗೆ ಆಂಗ್ಲಭಾಷೆ ಬೋಧಿಸುವ ಶಿಕ್ಷಕರಿಗೆ ಆನ್‌ಲೈನ್ ತರಬೇತಿ ಮಾದರಿಯ ತರಗತಿಗಳನ್ನು ಆಯೋಜಿಸಲಾಗಿದೆ. ಇದು ಶಿಕ್ಷಕರಿಗೆ ಪುನರ್ ಮನನ ತರಬೇತಿಯಾಗಿರುತ್ತದೆ. ಮಕ್ಕಳಿಗೆ ಆಂಗ್ಲಭಾಷೆಯನ್ನು ಸುಲಭವಾಗಿ ಹೇಗೆ ಬೋಧಿಸಬೇಕು. ಕಠಿಣ ಎನ್ನುತ್ತಿರುವ ಆಂಗ್ಲಭಾಷೆಯನ್ನು ಸುಲಭ ಎನ್ನುವಂತಹ ವಾತಾವರಣವನ್ನು ಮಕ್ಕಳಲ್ಲಿ ನಿರ್ಮಿಸುವಂತಹ ಭೋಧನೆಗೆ ಶಿಕ್ಷಕರನ್ನು ಸಜ್ಜುಗೊಳಿಸಲು ಈ ತರಬೇತಿ ಅಗತ್ಯವಾಗಿದೆ. ಮಕ್ಕಳಿಗೆ ಸುಲಭವಾಗಿ ಕಲಿಸುವಂತಹ ತರಬೇತಿಯನ್ನು […]

ಪ್ರಾಥಮಿಕ ಹಂತದಲ್ಲಿ ಶಿಕ್ಷಕಿಯರ ಸಂಖ್ಯೆ ಶೇಕಡ ನೂರಾಗಲಿ - ನಿರ್ಮಲಾ ಸೀತಾರಾಮನ್

ಪ್ರಾಥಮಿಕ ಹಂತದಲ್ಲಿ ಶಿಕ್ಷಕಿಯರ ಸಂಖ್ಯೆ ಶೇಕಡ ನೂರಾಗಲಿ – ನಿರ್ಮಲಾ ಸೀತಾರಾಮನ್

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕಿಯ ಪಾತ್ರ ಕಾರ್ಯಕ್ರಮದ ವರದಿ 74 ನೇ ಸ್ವಾತಂತ್ರ್ಯದ ನಿಮಿತ್ತ, ಭಾರತದ ಅತಿ ದೊಡ್ಡ ಶಿಕ್ಷಕ ಸಂಘಟನೆ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಆಯೋಜಿಸಿದ್ದ ವೆಬಿನಾರ್‌ನಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕಿಯ ಪಾತ್ರ ಎಂಬ ವಿಷಯವನ್ನು ಕುರಿತು ದಿನಾಂಕ 8-8-2020 ರ ಶನಿವಾರ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು ಭಾಗವಹಿಸಿ, ದಕ್ಷಿಣ ಭಾರತದ ಆರು ರಾಜ್ಯಗಳಾದ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತಮಿಳುನಾಡಿನ ಎಲ್ಲ […]

ವಿವಿಧೆಡೆ ಗುರುವಂದನಾ ಕಾರ್ಯಕ್ರಮ

ವಿವಿಧೆಡೆ ಗುರುವಂದನಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು, ಜಿಲ್ಲಾ ಘಟಕ ಕೊಪ್ಪಳ ಇವರ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ವಿವೇಕಾ ಕಂಪ್ಯೂಟರ್‍ಸ್ ಕುಷ್ಟಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀ ಬಿ. ಎಂ. ಜೋಶಿ ಮುಖ್ಯಸ್ಥರು, ವಿವೇಕ ಕಂಪ್ಯೂಟರ್‍ಸ್ ಕುಷ್ಟಗಿ ಇವರು ಉದ್ಘಾಟಿಸಿ ಮಾತನಾಡಿ ಗುರುಗಳನ್ನು ಸ್ಮರಿಸಿಕೊಳ್ಳುವ ಇಂತಹ ಕಾರ್ಯಕ್ರಮ ಶಿಕ್ಷಕರಲ್ಲಿ ಆತ್ಮಸ್ಥೈರ್ಯ, ನೈತಿಕ ಮೌಲ್ಯ ಮೂಡಿಸುತ್ತದೆ ಹಾಗೂ ಗುರುವಿನಿಂದ ಅಸಾಧ್ಯವಾಗಿದ್ದರೂ ಸಾಧ್ಯವಾಗಿಸುವ ಮಾರ್ಗವನ್ನು ಗುರು ಸಾಧಿಸಿ ತೋರಿಸುವುದು ದೊಡ್ಡ ಕಾರ್ಯವಾಗಿದೆ. ಆದ್ದರಿಂದ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು. […]

ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳ ಚರ್ಚೆ

ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳ ಚರ್ಚೆ

ಬೆಂಗಳೂರ ಸಮಗ್ರ ಶಿಕ್ಷಣ ಅಭಿಯಾನ ಕಟ್ಟಡದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ “ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳ “ ಕುರಿತಂತೆ ಚರ್ಚಿಸಲಾಯಿತು. ಸಭೆಯಲ್ಲಿ ಮಾನ್ಯ ಎಸ್. ಸುರೇಶ ಕುಮಾರ ಸರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಕಾರ್ಯಾಧ್ಯಕ್ಷರಾದ & ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಶ್ರೀ ಅರುಣ್ ಶಹಾಪುರ, ಕ್ಯಾ. ಗಣೇಶ್ ಕಾರ್ಣಿಕ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉಮಾ ಶಂಕರ್, ಆಯುಕ್ತರಾದ ಡಾ. ಜಗದೀಶ್, ಎಚ್. ನಾಗಭೂಷಣ್ […]

34 ನೇ ಪ್ರತಿಭಾ ಪುರಸ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆ

34 ನೇ ಪ್ರತಿಭಾ ಪುರಸ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆಯ 34 ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅಗಸ್ಟ್ 18, 2019, ಭಾನುವಾರ ವಿಜಯ ಟೀಚರ್ಸ್ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಜಸ್ಟಿಸ್ ಪಿ.ಎಸ್.ದಿನೇಶ್ ಕುಮಾರ್, ಗೌರವಾನ್ವಿತ ನ್ಯಾಯಾಧೀಶರು, ಕರ್ನಾಟಕದ ಉಚ್ಚನ್ಯಾಯಾಲಯ. ಡಾ. ಕೆ. ಎನ್. ಶ್ರೀಧರ, ಯೂರಾಲಜಿಸ್ಟ್, ರಂಗದೊರೈ ಆಸ್ಪತ್ರೆ, ಶಂಕರಪುರ, ಬೆಂಗಳೂರು, ಗೌರವ ಅತಿಥಿಗಳಾಗಿ ಮೇಜರ್ ತೇಜಸ್ಮಿತ, ಆಫೀಸರ್ ಟ್ರೈನಿಂಗ್ ಅಕಾಡೆಮಿ, ಚೆನೈ.ಶ್ರೀ ರವಿ ಸುಬ್ರಹ್ಮಣ್ಯ, ಶಾಸಕರು, ಬಸವನಗುಡಿ ಕ್ಷೇತ್ರ. ಡಾ|| […]

ಶಿಕ್ಷಕರ ಸಾಂದರ್ಭಿಕ ರಜೆ 15 ದಿನಗಳೇ ಇರಲಿ

ಶಿಕ್ಷಕರ ಸಾಂದರ್ಭಿಕ ರಜೆ 15 ದಿನಗಳೇ ಇರಲಿ

ಶಿಕ್ಷಕರ ಸಾಂದರ್ಭಿಕ ರಜೆ ದಿನಗಳನ್ನು (ಸಿಎಲ್) 15 ರಿಂದ 10 ದಿನಗಳಿಗೆ ಇಳಿಸಿರುವ ನಿರ್ಧಾರ ಸೂಕ್ತವಲ್ಲ. ಈ ಮೊದಲಿದ್ದಂತೆ 15 ಸಿಎಲ್‌ಗಳನ್ನೇ ಮುಂದುವರೆಸಬೇಕು ಎಂದು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಸಂಘಗಳ ಮುಖ್ಯಸ್ಥರ ಸಭೆ ಆಗ್ರಹಿಸಿದೆ. ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ವತಿಯಿಂದ ಶಾಸಕರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶೈಕ್ಷಣಿಕ ಅವಧಿ ಹಾಗೂ ರಜೆ ಒಂದು ಚರ್ಚೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.   ಮಕ್ಕಳ ವಾರ್ಷಿಕ ಕಲಿಕಾ ಅವಧಿಯ ದಿನಗಳು […]

ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿ

ಮಕ್ಕಳ ಉಜ್ವಲ ಭವಿಷ್ಯರೂಪಿಸುವ ಶಿಕ್ಷಕರು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು. ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಾಲೂಕಿನ ಶಿಕ್ಷಕರಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ನಾಗರೀಕರ ಪಾತ್ರ ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದಾರಿ ದೀಪವಾಗುವ ನಿಟ್ಟಿನಲ್ಲಿ ಶಿಕ್ಷಕರು ಕ್ರಿಯಾಶೀಲರಾಗಬೇಕು. ರಾಷ್ಟ್ರದ ಉತ್ಥಾನಕ್ಕೆ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಮಕ್ಕಳಲ್ಲಿ ಭಯ, ಆತಂಕಗಳನ್ನು ದೂರ ಮಾಡಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಸ್ವಯಂ ಶಿಸ್ತು, […]

Highslide for Wordpress Plugin