ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯಬೋಧ ದಿವಸ್ ಆಚರಣೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯಬೋಧ ದಿವಸ್ ಆಚರಣೆ

ಶಿಕ್ಷಕನಿಂದ ಗುರುವಿನೆಡೆಗೆ ಪಯಣ – ಶ್ರೀ ರಘುನಂದನ ಹುಬ್ಬಳ್ಳಿ: ಇದು ಆಧುನಿಕ ಯುಗ. ಹಿಂದಿಗಿಂತಲೂ ಇಂದು ಹೆಚ್ಚು ಸವಾಲಾಗಿ ಸ್ವೀಕರಿಸಬೇಕಿದೆ. ಹೀಗಾಗಿ ಶಿಕ್ಷಕನಿಗೂ ಕೌಶಲ್ಯಪೂರ್ಣ ಚಿಂತನೆಗೆ ನೆರವು ಬೇಕಾಗುತ್ತದೆ. ಆ ಕಾರಣಕ್ಕಾಗಿ ಅಧ್ಯಯನ, ಅಧ್ಯಾಪನ, ಭವಿಷ್ಯದ ಚಿಂತನೆ, ದೇಶದ ಸಂಸ್ಕೃತಿಯ ಅರಿವು, ಮಾನವೀಯ ಮೌಲ್ಯಗಳ ಆಚರಣೆ ಹೀಗೆ ಅನೇಕ ರೀತಿಯಲ್ಲಿ ಶಿಕ್ಷಕ ಸಿದ್ಧನಾಗಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ KRMSS ಮಹಾ ವಿದ್ಯಾಲಯಗಳ ಶಿಕ್ಷಕ ಸಂಘಗಳು ವಿಜಯನಗರ ಕಾಲೇಜಿನಲ್ಲಿ ಏರ್ಪಡಿಸಿದ್ದ ಕರ್ತವ್ಯ ಬೋಧ […]

ಸಮರ್ಥ ಭಾರತ ಪರೀಕ್ಷೆ

ಸಮರ್ಥ ಭಾರತ ಪರೀಕ್ಷೆ

ಶೀರ್ಷಿಕೆಯನ್ನು ನೋಡಿದಾಗ ಏನಿದು ಸಮರ್ಥ ಭಾರತ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಭಾರತ ಮೊದಲಿನಿಂದಲೂ ಸಮರ್ಥವೇ. ಭಾರತದ ಸಾಧನೆ, ಸಮರ್ಥತೆಯನ್ನು ಭಾರತೀಯರೇ ಹೇಳುವುದರಲ್ಲಿ ಅತಿಶಯತೆಯೇನೂ ಇಲ್ಲ ಎನ್ನಿಸಬಹುದು. ಆದರೆ ವಿದೇಶೀಯರು ಭಾರತದ ಹಿರಿಮೆಯನ್ನು ಹೇಳುವ ಮೂಲಕ ಭಾರತ ಸಮರ್ಥ ಎಂದರೆ ಅದು ಎಲ್ಲರೂ ಹೆಮ್ಮೆಪಡುವಂತಹುದೇ. ಅಮೆರಿಕದ ಖ್ಯಾತ ಇತಿಹಾಸಕಾರ, ತತ್ವಜ್ಞಾನಿ ವಿಲ್‌ಡ್ಯುರಾಂಟ್‌ನ ಮಾತುಗಳನ್ನು ಗಮನಿಸೋಣ. ಭಾರತ ವಿಶ್ವದ ನಾಗರಿಕತೆಯ ಮಾತೃಭೂಮಿ ಮತ್ತು ಸಂಸ್ಕೃತ ಯುರೋಪಿಯನ್ ಭಾಷೆಗಳ ತಾಯಿ. ನಮ್ಮ ತತ್ವಜ್ಞಾನದ ಮೂಲ ಸ್ರೋತವೂ ಅವಳೇ. ಅರಬ್ಬರ ಮೂಲಕ […]

ರಾಜಸ್ತಾನದ ಉದಯಪುರದಲ್ಲಿ ವಿಚಾರವರ್ಗ

ರಾಜಸ್ತಾನದ ಉದಯಪುರದಲ್ಲಿ ವಿಚಾರವರ್ಗ

ರಾಷ್ಟ್ರ ಎಂದರೆ ಸಮಾಜ. ಶಿಕ್ಷಕರಲ್ಲಿ ರಾಷ್ಟ್ರದ ಅವಧಾರಣೆಯನ್ನು ಸ್ಪಷ್ಟಪಡಿಸಬೇಕು. All are one ಎಂದು All is one ಎಂದು ಹೇಳಬೇಕು. Each soul is potentially divine. The goal is to manifest this divinity…. By Swami Vivekanand ರವರ ಹೇಳಿಕೆಯನ್ನು  2018 ರ ಡಿಸೆಂಬರ್ 25, 26, 27 -ಈ  ಮೂರು ದಿನಗಳಂದು ರಾಜಸ್ತಾನದ ಉದಯಪುರದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ವಿಚಾರವರ್ಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್‍ಯವಾಹರಾದ […]

ದಿಟ್ಟ, ನೇರ ನಿರಂತರ, ನಿಸ್ವಾರ್ಥ, ವಿಶೇಷ ವ್ಯಕ್ತಿತ್ವ

ದಿಟ್ಟ, ನೇರ ನಿರಂತರ, ನಿಸ್ವಾರ್ಥ, ವಿಶೇಷ ವ್ಯಕ್ತಿತ್ವ

ದಿನಾಂಕ 23-12-2018 ರ ಭಾನುವಾರ ಅದೊಂದು ಮಹತ್ವಪೂರ್ಣ ದಿನ. ಯಾದವಸ್ಮೃತಿಯ ಶಿಕ್ಷಕ ಸಂಘದ ಕಾರ್ಯಾಲಯದಲ್ಲಿ ವಾಸಿಸುತ್ತಿರುವ ನಮ್ಮ ಪೂರ್ಣಾವಧಿ ಹಿರಿಯ ಕಾರ್ಯಕರ್ತರಾದ ಶ್ರೀ ಜಿ.ಎಸ್ ಕೃಷ್ಣಮೂರ್ತಿಯವರ ಬಹುಕಾಲದ ಕನಸು ನನಸಾದ ದಿನ. (ಹಲವು ತಿಂಗಳುಗಳಿಂದ ಅವರ ಕನಸನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಲೇ ಇದ್ದರು ನಮ್ಮ ಕೃಷ್ಣಮೂರ್ತಿ) ಶಿಕ್ಷಕ ಸಂಘಕ್ಕೆ ಕೃಷ್ಣಮೂರ್ತಿಯವರ ಪ್ರವೇಶವಾದದ್ದು 1980 ರ ದಶಕದ ಪ್ರಾರಂಭದಲ್ಲಿ. ಅಂದಿನಿಂದ ಅವರು ಸಹಯೋಗಿಗಳಾಗಿ ಶಿಕ್ಷಕ ಸಂಘದಲ್ಲಿ ಸಕ್ರಿಯವಾಗಿ ಕೆಲಸಮಾಡಿ ಸಂಘದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದವರು. ಹಲವರು ನಾವೆಲ್ಲಾ ಒಂದೇ […]

ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ

ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ

ಶಿಕ್ಷಣ ರಾಷ್ಟ್ರದ ಬಲ. ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ದಿವ್ಯ ಔಷಧವಿದ್ದಂತೆ. ಮೌಲ್ಯಯುತ ಶಿಕ್ಷಣ ನೀಡುವ ಶಿಕ್ಷಕರೇ ನಿಜವಾದ ರಾಷ್ಟ್ರ ರಕ್ಷಕರು ಎಂದು ಧಾರವಾಡ ರಾಮಕೃಷ್ಣ- ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಕೇವಲ ಸರ್ಟಿಫಿಕೇಟ್ ನೀಡುವುದು ಶಿಕ್ಷಣವಲ್ಲ. ಯಾರೋ ಬರೆದಿಟ್ಟ ಇತಿಹಾಸ ಓದುವ ಮೂಲಕ ನಾವು ಆತ್ಮಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ಶಿಕ್ಷಕರು ಪೇಮೆಂಟ್, ಪ್ರಮೋಶನ್ ಹಾಗೂ ಪೆನ್ಶನ್ ಎಂಬ ಮೂರು ‘ಪಿ’ಗಳ ಬಗ್ಗೆ ಮಾತ್ರ ಚಿಂತಿಸದೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕು. ಶಿಕ್ಷಕರ ಒಳಗೆ ದಿವ್ಯತೆ […]

ವಿಷಯ ಪುನಃಶ್ಚೇತನ ಕಾರ್ಯಾಗಾರ

ವಿಷಯ ಪುನಃಶ್ಚೇತನ ಕಾರ್ಯಾಗಾರ

ದಿನಾಂಕ 30-11-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕದ ವತಿಯಿಂದ ಒಂದು ದಿನದ ಗಣಿತ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರವನ್ನು ಎಸ್.ವಿ.ಎನ್. ಆಂಗ್ಲಶಾಲೆ, ನಾಗವಾರ ಇಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಸಂಘದ ಪೋಷಕರಾದ ಕೃ. ನರಹರಿಯವರು ಉದ್ಘಾಟಿಸಿ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇಂತಹ ಪುನಶ್ಚೇತನ ಕಾರ್ಯಾಗಾರಗಳು ಸಹಕಾರಿಯಾಗಲಿ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಎಸ್.ವಿ.ಎನ್. ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಯವರಾದ ಶ್ರೀ ಸುಬ್ಬರಾಜುರವರು ವಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ […]

ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಸಮಾವೇಶ

ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಸಮಾವೇಶ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ (ರಿ) ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ಇವರ ಸಹಯೋಗದಲ್ಲಿ ದಿನಾಂಕ 29-11-2018 ರಂದು ಬೆಂಗಳೂರಿನಲ್ಲಿರುವ ಯಾದವಸ್ಮೃತಿ ಸಭಾಭವನದಲ್ಲಿ ಒಂದು ದಿನದ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರ ರಾಜ್ಯಮಟ್ಟದ ಸಮಾವೇಶ ನಡೆಯಿತು. ಖ್ಯಾತ ಶಿಕ್ಷಣತಜ್ಞರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀಯುತ ಪ್ರೊ. ಕೃ. ನರಹರಿಯವರು ದೀಪ ಬೆಳಗುವುದರ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಶ್ರೀಯುತರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹಿಂದಿನಿಂದಲೂ ಸಂಸ್ಕೃತ ಭಾಷಾ ಶಿಕ್ಷಣಕ್ಕೆ ತಮ್ಮ […]

ಚಿತ್ರದುರ್ಗದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ

ಚಿತ್ರದುರ್ಗದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ

ಶ್ರೀ ಕೃ. ನರಹರಿಯವರು ಶಾಸಕರಾಗಿದ್ದಾಗ ಶಾಸಕರ ಭವನದ ಎಲ್.ಹೆಚ್ ಕೊಠಡಿ ನಮ್ಮಂತಹ ಶಿಕ್ಷಕರುಗಳಿಗೆ ಬೆಂಗಳೂರಿಗೆ ಬಂದಾಗ ಮನೆಯಾಗಿತ್ತು. ಅಲ್ಲದೇ ಸ್ವತಃ ಅವರೇ ಮೆಜಿಸ್ಟಿಕ್‌ಗೆ ಬಂದು ಶಿಕ್ಷಕರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಮಾಡಿಸಿ, ಸಮಸ್ಯೆ ಬಗೆಹರಿಸಿ ವಾಪಾಸು ಊರಿಗೆ ಹೋಗಲು ಬಸ್‌ಚಾರ್ಜ್‌ಗೆ ಹಣ ಇದೆಯಾ ಎಂದು ಶಿಕ್ಷಕರಿಗೆ ಕೇಳುತ್ತಿದ್ದರು. ಒಂದು ವೇಳೆ ಇಲ್ಲವೆಂದರೆ ಅವರೇ ಕೊಟ್ಟು ಕಳುಹಿಸುತ್ತಿದ್ದರು. ಇಂತಹ ಅಪರೂಪದ ಶಾಸಕರನ್ನು ನಾವು ಜೀವನದಲ್ಲಿ ಕಂಡೆವು ಅವರ ಜೀವನ ಶೈಲಿ ಮಾದರಿಯಾಗಿದೆ. ನಮ್ಮೆಲ್ಲರಿಗೆ ಅವರ […]

ಚಿತ್ರಕಲಾ ಶಿಕ್ಷಣ ಕುರಿತು ಒಂದು ದಿನದ ಚಿಂತನ-ಮಂಥನ

ಚಿತ್ರಕಲಾ ಶಿಕ್ಷಣ ಕುರಿತು ಒಂದು ದಿನದ ಚಿಂತನ-ಮಂಥನ

ಶಾಲಾ ಶಿಕ್ಷಣದಲ್ಲಿ ಚಿತ್ರಕಲೆ ವಿಷಯ ಅವಶ್ಯಕತೆ- ವಿಷಯವಾಗಿ ದಿನಾಂಕ 4-11-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ಒಂದು ದಿನದ ಕಾರ್ಯಕ್ರಮವಾಗಿ ಚಿಂತನ-ಮಂಥನ ಕಾರ್ಯಕ್ರಮ ನಡೆಸಲಾಯಿತು. ಆರಂಭದಲ್ಲಿ ಚಿತ್ರಕಲಾ ಶಿಕ್ಷಕರು ರಚಿಸಿರುವ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನವನ್ನು ಮಾಧ್ಯಮಿಕ ಶಿಕ್ಷಕ ಸಂಘದ ಹಿರಿಯ ಮಾರ್ಗದರ್ಶಕರಾದ ಶ್ರೀಯುತ ಜಿ.ಎಸ್. ಕೃಷ್ಣಮೂರ್ತಿಯವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನಪರಿಷತ್ ಹಾಲಿ ಸದಸ್ಯರು ಮತ್ತು […]

ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ದಿನಾಂಕ 1-4-2006 ರ ನಂತರ ವೇತನ ಪಡೆಯುತ್ತಿರುವ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸಿ, ಕಾಲ್ಪನಿಕ ವೇತನ ನಿಗದಿ ಮಾಡುವುದು ಹಾಗೂ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ “ಬೃಹತ್ ಪ್ರತಿಭಟನೆ”ಯು ದಿನಾಂಕ 11-10-2018 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಿತು. ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

Highslide for Wordpress Plugin