
ನಾರೀ ಶಕ್ತಿ ಅಮರ್ ರಹೇ
ಸಮಾಜದ ಬಗ್ಗೆ ಕಳಕಳಿ ಇರುವ ಸಹ ಮನಸ್ಕ ಮಹಿಳೆಯರ ಏಕತ್ರೀಕರಣಕ್ಕಾಗಿ ವಿವಿಧ ವೃತ್ತಿಜೀವನ ನಡೆಸುತ್ತಿರುವ ಮಹಿಳೆಯರಿಗೆ ಸಮಾಜಮುಖೀ ದೃಷ್ಟಿಯನ್ನು ನೀಡಲು ಅವರವರ ಆಸಕ್ತಿಗನುಗುಣವಾದ ಸಮಾಜ ಸೇವೆಯ ಅವಕಾಶ ಏರ್ಪಡಿಲು, ಇದೇ ತಿಂಗಳ ನವೆಂಬರ್ 26 ರಂದು ನಾರಿಶಕ್ತಿ ಸಮ್ಮೇಳನವನ್ನು ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಮರ್ಥ ಭಾರತ ವತಿಯಿಂದ ಬೆಂಗಳೂರು ದಕ್ಷಿಣ ವಿಭಾಗ ಮಟ್ಟದ ಮಹಿಳಾ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಡಾ|| ವಿಜಯಲಕ್ಷ್ಮಿ ದೇಶಮಾನೆ ಅಧ್ಯಕ್ಷತೆ, ಡಾ|| ಗೋಮತಿ ದೇವಿಯವರ ಉಪಾಧ್ಯಕ್ಷತೆಯಲ್ಲಿ ಭಾರತೀಯ ಚಿಂತನೆಯಲ್ಲಿ ಮಹಿಳೆ ವಿಚಾರ ಸಂಕಿರಣ ನಡೆಯಿತು. […]